ಫೆಬ್ರುವರಿಯಿಂದ ಇಂಡಿಗೊ ಹೊಸ ವಿಮಾನಗಳ ಹಾರಾಟ.. ಎಲ್ಲೆಲ್ಲಿ?
ಎಲ್ಲಾ ರೀತಿಯ ಸುರಕ್ಷತೆಗಳ ಬಗ್ಗೆ ಗಮನವಹಿಸಿ ವೇಳಾಪಟ್ಟಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಇಂಡಿಗೊ ಸ್ಪಷ್ಟಪಡಿಸಿದೆ.
ನವದೆಹಲಿ: ಲೇಹ್, ದರ್ಭಂಗ, ಆಗ್ರಾ, ಕರ್ನೂಲು, ಬರೇಲಿ, ದುರ್ಗಾಪುರ ಮತ್ತು ರಾಜ್ಕೋಟ್ಗೆ ಪ್ರಯಾಣ ಬೆಳೆಸುವ ಹೊಸ ವಿಮಾನಗಳನ್ನು ಫೆಬ್ರವರಿಯಿಂದ ಪ್ರಾರಂಭಿಸಲು ಇಂಡಿಗೊ ನಿರ್ಧರಿಸಿದೆ.
ಲೇಹ್ ಮತ್ತು ದರ್ಭಂಗಕ್ಕೆ ಹಾರುವ ವಿಮಾನಗಳನ್ನು ಫೆಬ್ರವರಿಯಲ್ಲಿ ಪ್ರಾರಂಭಿಸಲು ವಿಮಾನಯಾನ ಸಂಸ್ಥೆ ಬೇಕಾಗುವ ಸಿದ್ಧತೆಗಳನ್ನು ನಡೆಸಿಕೊಂಡಿದ್ದು, ಮಾರ್ಚ್ ಹೊತ್ತಿಗೆ ಕರ್ನೂಲು ಮತ್ತು ಆಗ್ರಾ, ಏಪ್ರಿಲ್ನಲ್ಲಿ ಬರೇಲಿ ಮತ್ತು ದುರ್ಗಾಪುರ, ಮೇ ತಿಂಗಳಲ್ಲಿ ರಾಜ್ಕೋಟ್ಗೆ ವಿಮಾನ ಹಾರಾಟ ಪ್ರಾರಂಭವಾಗುತ್ತದೆ ಎಂದು ಇಂಡಿಗೊ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲಾ ರೀತಿಯ ಸುರಕ್ಷತೆಗಳ ಬಗ್ಗೆ ಗಮನವಹಿಸಿ ವೇಳಾಪಟ್ಟಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಇಂಡಿಗೊ ಸ್ಪಷ್ಟಪಡಿಸಿದೆ.
ಗಣರಾಜ್ಯೋತ್ಸವ ದಿನದಂದು ಬಿಹಾರ್ ಬೆಟಾಲಿಯನ್ನ ಹುತಾತ್ಮ ಯೋಧರಿಗೆ ಗೌರವ?
Published On - 2:53 pm, Tue, 12 January 21