ಸಾಮುದಾಯಿಕ ರೋಗ ಪ್ರತಿರೋಧ ಶಕ್ತಿ ಹೆಚ್ಚಾಗುತ್ತಿಲ್ಲ.. ಹಾಗಾದರೆ ಏನು ಮಾಡಬೇಕು? WHO ಹೇಳುವುದೇನು?
ಹಲವು ರಾಷ್ಟ್ರಗಳು ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸುವ ಲಸಿಕೆಗಳನ್ನು ತಮ್ಮ ಜನರಿಗೆ ನೀಡುತ್ತಿದೆ. ಆದರೂ ಈ ವರ್ಷ ವಿಶ್ವದಾದ್ಯಂತ ಸಮುದಾಯಿಕ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಜಿನೀವಾ: ಮಹಾಮಾರಿ ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ರಾಷ್ಟ್ರಗಳು ಲಸಿಕೆಗಳನ್ನು ನೀಡುವ ಪ್ರಕ್ರಿಯೆ ಆರಂಭಿಸಿದರೂ ಕೂಡಾ ಈ ವರ್ಷ ಹರ್ಡ್ ಇಮ್ಯೂನಿಟಿ (ಸಾಮುದಾಯಿಕ ರೋಗ ಪ್ರತಿರೋಧ ಶಕ್ತಿ) ಹೆಚ್ಚಾಗುವ ಸಾಧ್ಯತೆ ಕಡಿಮೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್, ಕಳೆದ ವಾರಗಳಿಂದ ಅಮೆರಿಕಾ, ಫ್ರಾನ್ಸ್, ಕೆನಡಾ, ಜರ್ಮನಿ, ಇಸ್ರೇಲ್, ನೆದರ್ಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳು ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸುವ ಲಸಿಕೆಗಳನ್ನು ತಮ್ಮ ಜನರಿಗೆ ನೀಡುತ್ತಿದೆ. ಆದರೂ ಈ ವರ್ಷ ವಿಶ್ವದಾದ್ಯಂತ ಸಾಮುದಾಯಿಕ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಏನು ಮಾಡಬೇಕು? ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೊರೊನಾ ಬಗ್ಗೆ ನಿರ್ಲಕ್ಷವಹಿಸದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಬೇಕೆಂದು ಒತ್ತಿ ಹೇಳಿದರು.
ದೇಶಕ್ಕೆ ಮುಜುಗರ ಉಂಟುಮಾಡುವ ಟ್ರ್ಯಾಕ್ಟರ್ ಮೆರವಣಿಗೆಗೆ ಅವಕಾಶ ನೀಡಬೇಡಿ: ಸುಪ್ರೀಂಗೆ ದೆಹಲಿ ಪೊಲೀಸರ ಮನವಿ