ಸತತ 5ನೇ ಬಾರಿಗೆ ಇಂದೋರ್ ಸ್ವಚ್ಛ ನಗರಿ ಪಟ್ಟವನ್ನು ಅಲಂಕರಿಸಿದೆ. ಇಂದು (ನವೆಂಬರ್ 20) ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಶಸ್ತಿ ವಿಜೇತ ನಗರಗಳ ಹೆಸರನ್ನು ಘೋಷಿಸಿದ್ದಾರೆ. ಸೂರತ್ ಮತ್ತು ವಿಜಯವಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಕನಸನ್ನು ಹೊತ್ತಿದ್ದ ಮೈಸೂರಿಗೆ ನಿರಾಸೆಯಾಗಿದೆ. ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ರಾಜ್ಯಗಳ ಸರ್ವೆಯಲ್ಲಿ ಛತ್ತೀಸ್ಘಡ ಮೊದಲ ಸ್ಥಾನ ಪಡೆದಿದೆ. ಹಾಗೆಯೇ ಗಂಗಾ ನದಿ ಪಾತ್ರದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ವಾರಣಾಸಿ ಮೊದಲ ಸ್ಥಾನ ಪಡೆದಿದೆ.
ಪಿಟಿಐ ಹಂಚಿಕೊಂಡಿರುವ ಟ್ವೀಟ್:
Indore adjudged India’s cleanest city for 5th time in a row by Union government; Surat gets second position
— Press Trust of India (@PTI_News) November 20, 2021
ಪ್ರಶಸ್ತಿಯ ಕುರಿತು ಎಎನ್ಐ ಹಂಚಿಕೊಂಡ ಟ್ವೀಟ್:
President Ram Nath Kovind confers Surat (Gujarat) and Vijaywada (Andhra Pradesh) for being the country’s second and third cleanest cities, respectively pic.twitter.com/LWeV3oGdF2
— ANI (@ANI) November 20, 2021
ಸ್ವಚ್ಛ ಗಂಗಾ ನದಿ ಪಾತ್ರದ ಊರಾಗಿ ವಾರಣಾಸಿ ಆಯ್ಕೆ:
ಗಂಗಾ ನದಿ ಪಾತ್ರದಲ್ಲಿರುವ ಸ್ವಚ್ಛ ಊರುಗಳ ಪಟ್ಟಿಯಲ್ಲಿ ವಾರಣಾಸಿ ಮೊದಲ ಸ್ಥಾನ ಪಡೆದಿದೆ.
ಸ್ವಚ್ಛ ರಾಜ್ಯವಾಗಿ ಛತ್ತೀಸ್ಘಡ ಆಯ್ಕೆ:
ಕೇಂದ್ರ ಸರ್ಕಾರ ಸ್ವಚ್ಛ ರಾಜ್ಯಕ್ಕೆ ನಡೆಸಿದ ಸರ್ವೆಯಲ್ಲಿ ಛತ್ತೀಸ್ಘಡ ಪ್ರಥಮ ಸ್ಥಾನ ಪಡೆದಿದೆ.
Chhattisgarh adjudged India’s cleanest state in annual cleanliness survey announced by Union government
— Press Trust of India (@PTI_News) November 20, 2021
ಇದನ್ನೂ ಓದಿ:
ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ, ಪಕ್ಷಕ್ಕಾಗಿ ಕೆಲಸ ಮಾಡಲು ಮುಂದಾದ ರಾಜಸ್ಥಾನದ ಮೂವರು ಮಂತ್ರಿಗಳು
Published On - 11:56 am, Sat, 20 November 21