ದೆಹಲಿ: 2010ರಲ್ಲಿ ಮಾಜಿ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ (Niira Radia) ಒಳಗೊಂಡ ಆಡಿಯೋ ಟೇಪ್ ಸೋರಿಕೆ (Radia Tapes) ಪ್ರಕರಣದ ತನಿಖೆಗೆ ಕೋರಿ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಸಲ್ಲಿಸಿರುವ ಅರ್ಜಿಯನ್ನು ಎಂಟು ವರ್ಷಗಳ ನಂತರ ಸುಪ್ರೀಂಕೋರ್ಟ್ ಇಂದು ವಿಚಾರಣೆಗೆ ನಡೆಸಲಿದೆ. ರತನ್ ಟಾಟಾ ಅವರು ಈ ಟೇಪ್ ಸೋರಿಕೆಯು ತಮ್ಮ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ. ಟಾಟಾ ಅವರು 2011 ರಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ಇದನ್ನು ಕೊನೆಯದಾಗಿ ಸುಪ್ರೀಂಕೋರ್ಟ್ 2014 ರಲ್ಲಿ ವಿಚಾರಣೆ ನಡೆಸಿತು. ಒಂದು ದಶಕದ ಹಿಂದೆ ತೆರಿಗೆ ತನಿಖೆಯ ಭಾಗವಾಗಿ ಕೈಗಾರಿಕೋದ್ಯಮಿಗಳು, ಪತ್ರಕರ್ತರು, ಸರ್ಕಾರಿ ಅಧಿಕಾರಿಗಳು ಮತ್ತು ಇತರ ಪ್ರಮುಖ ಹುದ್ದೆಗಳನ್ನು ಹೊಂದಿರುವವರೊಂದಿಗೆ ನೀರಾ ರಾಡಿಯಾ ಅವರ ಫೋನ್ ಸಂಭಾಷಣೆಗಳನ್ನು ಕದ್ದಾಲಿಕೆ ಮಾಡಲಾಗಿತ್ತು. ನೀರಾ ರಾಡಿಯಾಳ ಸಾರ್ವಜನಿಕ ಸಂಪರ್ಕ ಸಂಸ್ಥೆ, ವೈಷ್ಣವಿ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಈಗ ಅಸ್ತಿತ್ವದಲ್ಲಿಲ್ಲ. 2008 ರಲ್ಲಿ ಮೊದಲು ಮತ್ತು ನಂತರ 2009 ಫೋನ್ ಕದ್ದಾಲಿಸಲ್ಪಟ್ಟ ಉದ್ಯಮಿಗಳ ಪಟ್ಟಿಯಲ್ಲಿ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಹೆಸರು ಕೂಡಾ ಇತ್ತು
ಆಗಸ್ಟ್ 2012 ರಲ್ಲಿ, ರತನ್ ಟಾಟಾ “ರಾಡಿಯಾ ಟೇಪ್” ಹೇಗೆ ಸೋರಿಕೆಯಾಯಿತು ಎಂಬುದನ್ನು ವಿವರಿಸುವ ಸರ್ಕಾರ ಸಲ್ಲಿಸಿದ ವರದಿಯ ಪ್ರತಿಯನ್ನು ಸುಪ್ರೀಂಕೋರ್ಟ್‌ಗೆ ಕೇಳಿದ್ದರು.
ರತನ್ ಟಾಟಾ ಅವರು ನೀರಾ ರಾಡಿಯಾ ಅವರೊಂದಿಗಿನ ಸಂಭಾಷಣೆಗಳನ್ನು 2010 ರಲ್ಲಿ ಮಾಧ್ಯಮಗಳು ಪ್ರಸಾರ ಮಾಡಿದ್ದವು. ಈ ಟೇಪ್‌ಗಳ ಬಿಡುಗಡೆಯು ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿ ಟಾಟಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
2017ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಖಾಸಗಿತನ ಸಾಂವಿಧಾನಿಕ ಹಕ್ಕು ಎಂದು ಹೇಳಿತ್ತು. ಒಂಬತ್ತು ನ್ಯಾಯಾಧೀಶರು ತಾವು ಗಮನಿಸಿದ ವಿಷಯದಲ್ಲಿ ಸರ್ವಾನುಮತ ಹೊಂದಿದ್ದರೂ ಅವರು ತಮ್ಮ ತೀರ್ಮಾನಕ್ಕೆ ವಿಭಿನ್ನ ಕಾರಣಗಳನ್ನು ಉಲ್ಲೇಖಿಸಿದ್ದಾರೆ.
ಖಾಸಗಿತನದ ಹಕ್ಕಿನ ತೀರ್ಪು ಕೂಡ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ, ಸಂವಿಧಾನವು ವೈಯಕ್ತಿಕ ಗೌಪ್ಯತೆಯನ್ನು ಒಂದು ಅವಿನಾಭಾವ ಮೂಲಭೂತ ಹಕ್ಕು ಎಂದು ಖಾತರಿಪಡಿಸುವುದಿಲ್ಲ ಎಂದು ವಾದಿಸಿತ್ತು.
“ಖಾಸಗಿತನವು ಮೂಲಭೂತ ಹಕ್ಕು” ಎಂಬುದಾಗಿ ನ್ಯಾಯಯುತವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಧೀಶರು ಒಪ್ಪಿಕೊಂಡಿದ್ದಾರೆ ಎಂದು ಆಗಿನ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು.
Published On - 3:04 pm, Thu, 1 September 22