Positive Trend: ಭಾರತದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಇಳಿಕೆ, ಕರ್ನಾಟಕದಲ್ಲೂ ಇಳಿಕೆಯಾಗಿದೆ! ಕಾರಣಗಳೇನು?

ಭಾರತದಲ್ಲಿ ಕಳೆದೊಂದು ದಶಕದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜಾಗತಿಕ ಮಟ್ಟದ ಸಮೀಪಕ್ಕೆ ಭಾರತದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆಯಾಗಿದೆ. ಈ ಮೂಲಕ ಭಾರತವು ಉತ್ತಮ ಪ್ರಗತಿಯನ್ನು ಸಾಧಿಸಿದೆ. ಆದರೇ, ಇನ್ನೂ ಸಾಧಿಸುವುದು ಬಹಳಷ್ಟಿದೆ. ಕರ್ನಾಟಕ ರಾಜ್ಯದಲ್ಲೂ ಕೂಡ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಇಳಿಕೆಯಾಗಿರುವುದು ವಿಶೇಷ.

Positive Trend: ಭಾರತದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಇಳಿಕೆ, ಕರ್ನಾಟಕದಲ್ಲೂ ಇಳಿಕೆಯಾಗಿದೆ! ಕಾರಣಗಳೇನು?
ಭಾರತದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಇಳಿಕೆ, ಕರ್ನಾಟಕದಲ್ಲೂ ಇಳಿಕೆಯಾಗಿದೆ! ಕಾರಣಗಳೇನು?
Follow us
S Chandramohan
| Updated By: ಸಾಧು ಶ್ರೀನಾಥ್​

Updated on:Jun 04, 2022 | 7:40 PM

ಭಾರತದಲ್ಲಿ ಕಳೆದೊಂದು ದಶಕದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜಾಗತಿಕ ಮಟ್ಟದ ಸಮೀಪಕ್ಕೆ ಭಾರತದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆಯಾಗಿದೆ. ಈ ಮೂಲಕ ಭಾರತವು ಉತ್ತಮ ಪ್ರಗತಿಯನ್ನು ಸಾಧಿಸಿದೆ. ಆದರೇ, ಇನ್ನೂ ಸಾಧಿಸುವುದು ಬಹಳಷ್ಟಿದೆ. ಕರ್ನಾಟಕ ರಾಜ್ಯದಲ್ಲೂ ಕೂಡ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಇಳಿಕೆಯಾಗಿರುವುದು ವಿಶೇಷ.

ಭಾರತದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಇಳಿಕೆ

ಭಾರತದಲ್ಲಿ ದಶಕದ ಹಿಂದೆ ನವಜಾತ ಶಿಶುಗಳ ಮರಣ ಪ್ರಮಾಣ ಜಾಸ್ತಿ ಇತ್ತು. ಆದರೇ, ಈಗ ಭಾರತದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆಯಾಗಿದೆ. ಜಾಗತಿಕ ಸರಾಸರಿಯ ಸನಿಹಕ್ಕೆ ಭಾರತದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆಯಾಗಿರುವುದು ವಿಶೇಷ. ಭಾರತದಲ್ಲಿ ಈ ಹಿಂದೆ ಹುಟ್ಟಿದ ಒಂದು ವರ್ಷದೊಳಗೆ ಮಕ್ಕಳು ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪುತ್ತಿದ್ದರು. ತಾಯಿಯ ಅಪೌಷ್ಟಿಕತೆ, ಚಿಕ್ಕ ವಯಸ್ಸಿಗೆ ಮದುವೆ, ಸಮರ್ಪಕ ವೈದ್ಯಕೀಯ ಸೌಲಭ್ಯಗಳ ಕೊರತೆ, ಶಿಶುಗಳ ಕಡಿಮೆ ತೂಕ, ಸಮರ್ಪಕ ಚಿಕಿತ್ಸೆಯ ಕೊರತೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ನವಜಾತ ಶಿಶುಗಳು ಸಾವನ್ನಪ್ಪುತ್ತಿದ್ದವು. ಆದರೇ, ಈಗ ನವಜಾತ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನಕ್ಕೆ ಯಶಸ್ಸು ಸಿಗುತ್ತಿದೆ.

ಭಾರತದಲ್ಲಿ 2010ರಲ್ಲಿ 1000 ನವಜಾತ ಶಿಶುಗಳ ಪೈಕಿ 47 ನವಜಾತ ಶಿಶುಗಳು ಸಾವನ್ನಪ್ಪುತ್ತಿದ್ದವು. ಆದರೇ, 2020ರ ವೇಳೆಗೆ ನವಜಾತ ಶಿಶುಗಳ ಸಾವಿನ ಸಂಖ್ಯೆ 28ಕ್ಕೆ ಇಳಿದಿದೆ. ಆದರೇ, ಜಾಗತಿಕ ಮಟ್ಟದಲ್ಲಿ 1000 ನವಜಾತ ಶಿಶುಗಳ ಪೈಕಿ 27 ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ. ಭಾರತವು ಈಗ ಜಾಗತಿಕ ಸರಾಸರಿ ಮಟ್ಟದ ಸನಿಹಕ್ಕೆ ಬಂದಿದೆ.

ಭಾರತದಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ, ಒರಿಸ್ಸಾ ರಾಜ್ಯಗಳಲ್ಲಿ ಇನ್ನೂ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಈ ನವಜಾತ ಶಿಶುಗಳ ಸಾವಿನ ವಿಷಯದಲ್ಲಿ ಈ ರಾಜ್ಯಗಳ ಕಳಪೆ ಸಾಧನೆ ಮುಂದುವರಿದಿದೆ. ಆದರೇ, ಜಮ್ಮುಕಾಶ್ಮೀರ, ದೆಹಲಿ, ಕೇರಳ ರಾಜ್ಯಗಳು ನವಜಾತ ಶಿಶುಗಳ ಸಾವಿನ ಸಂಖ್ಯೆ ಕಡಿಮೆ ಮಾಡುವಲ್ಲಿ ಬಾರಿ ಪ್ರಗತಿ ಸಾಧಿಸಿವೆ. ಹುಟ್ಟಿದ ಒಂದು ವರ್ಷದೊಳಗೆ ಒಂದು ಸಾವಿರ ಶಿಶುಗಳ ಪೈಕಿ ಸಾವನ್ನಪ್ಪುವ ಶಿಶುಗಳ ಸಂಖ್ಯೆಯ ಆಧಾರದ ಮೇಲೆ ಶಿಶು ಮರಣ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತೆ.

ಭಾರತದಲ್ಲಿ 1971 ರಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣವು 129 ಇತ್ತು. 2020 ರಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಮಧ್ಯಪ್ರದೇಶ ರಾಜ್ಯದಲ್ಲಿ ಹೆಚ್ಚಾಗಿದೆ. ಮಧ್ಯಪ್ರದೇಶ ರಾಜ್ಯದಲ್ಲಿ 1ಸಾವಿರ ನವಜಾತ ಶಿಶುಗಳ ಪೈಕಿ 43 ಶಿಶುಗಳು ಸಾವನ್ನಪ್ಪಿವೆ. 2010ರಲ್ಲಿ ಮಧ್ಯಪ್ರದೇಶದಲ್ಲಿ 1 ಸಾವಿರ ನವಜಾತ ಶಿಶುಗಳ ಪೈಕಿ 62 ಶಿಶುಗಳು ಸಾವನ್ನಪ್ಪಿದ್ದವು.

ಇನ್ನೂ ಉತ್ತರ ಪ್ರದೇಶ ರಾಜ್ಯದಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ 2010 ರಲ್ಲಿ 61 ರಿಂದ 2020ರ ವೇಳೆಗೆ 38 ಕ್ಕೆ ಇಳಿದಿದೆ. ಇದೇ ರೀತಿ 2020ರಲ್ಲಿ ಅಸ್ಸಾಂ, ಒರಿಸ್ಸಾ ರಾಜ್ಯಗಳಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ 36 ಆಗಿದೆ.

ಕೇರಳ ರಾಜ್ಯದಲ್ಲಿ 2020ರಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ 6ಕ್ಕೆ ಇಳಿದಿದೆ. ದೆಹಲಿಯಲ್ಲಿ 2020ರಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ 12ಕ್ಕೆ ಇಳಿದಿದೆ. ಕರ್ನಾಟಕದಲ್ಲಿ 2010 ರಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ 38 ಇತ್ತು. ಆದರೇ, ಕರ್ನಾಟಕದಲ್ಲಿ 2020ರ ವೇಳೆಗೆ ನವಜಾತ ಶಿಶುಗಳ ಸಾವಿನ ಸಂಖ್ಯೆ 19ಕ್ಕೆ ಇಳಿದಿದೆ. ತಮಿಳುನಾಡು 13, ಮಹಾರಾಷ್ಟ್ರ 16, ಜಮ್ಮು ಕಾಶ್ಮೀರದಲ್ಲಿ 17, ಪಂಜಾಬ್ ನಲ್ಲಿ 18, ತೆಲಂಗಾಣದಲ್ಲಿ 21, ಆಂಧ್ರಪ್ರದೇಶದಲ್ಲಿ 24ಕ್ಕೆ ನವಜಾತ ಶಿಶುಗಳ ಸಾವಿನ ಸಂಖ್ಯೆ ಇಳಿದಿದೆ. ಸಣ್ಣ ರಾಜ್ಯಗಳ ಪೈಕಿ ಮಿಜೋರಾಂ ನಲ್ಲಿ 2020ರಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ 3, ಗೋವಾದಲ್ಲಿ 5ಕ್ಕೆ ಇಳಿದಿದೆ.

ಬಿಹಾರ ರಾಜ್ಯದಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ 2010ರಲ್ಲಿ 42 ಇದ್ದಿದ್ದು, 2020ರ ವೇಳೆಗೆ 27ಕ್ಕೆ ಇಳಿದಿದೆ. ಭಾರತದ ನೆರೆಯ ಪಾಕಿಸ್ತಾನದಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಒಂದು ಸಾವಿರಕ್ಕೆ 57 ಇದೆ. ಮಯನ್ಮಾರ್ ದೇಶದಲ್ಲಿ 35 ಇದೆ.

Published On - 7:38 pm, Sat, 4 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ