ದೆಹಲಿ ಸ್ಫೋಟ: ಮುಜಮ್ಮಿಲ್ ಬಂಧನದ ಬಳಿಕ ಅಲ್ ಫಲಾಹ್ ವಿಶ್ವವಿದ್ಯಾಲಯದಿಂದ ಉಮರ್ ಪಲಾಯನ ಮಾಡಿದ್ಹೇಗೆ?
ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿ ನವೆಂಬರ್ 10ರಂದು ನಡೆದ ಸ್ಫೋಟದಲ್ಲಿ 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಐ20 ಕಾರು ಸ್ಫೋಟದಲ್ಲಿ ಭಾಗಿಯಾಗಿದ್ದ ದೆಹಲಿ ಭಯೋತ್ಪಾದನಾ ಸಂಚಿನ ರೂವಾರಿ ಉಮರ್ ಉನ್ ನಬಿ ಘಟನೆ ನಡೆಯುವ 10 ದಿನಗಳ ಮೊದಲು ನೂಹ್ನ ಹಿದಾಯತ್ ಕಾಲೋನಿಯಲ್ಲಿ ಅಡಗಿಕೊಂಡಿದ್ದ ಎಂಬ ಮಾಹಿತಿ ತಿಳಿದುಬಂದಿದೆ.

ಫರೀದಾಬಾದ್, ನವೆಂಬರ್ 16: ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿ ನವೆಂಬರ್ 10ರಂದು ನಡೆದ ಸ್ಫೋಟ(Blast)ದಲ್ಲಿ 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಐ20 ಕಾರು ಸ್ಫೋಟದಲ್ಲಿ ಭಾಗಿಯಾಗಿದ್ದ ದೆಹಲಿ ಭಯೋತ್ಪಾದನಾ ಸಂಚಿನ ರೂವಾರಿ ಉಮರ್ ಉನ್ ನಬಿ ಘಟನೆ ನಡೆಯುವ 10 ದಿನಗಳ ಮೊದಲು ನೂಹ್ನ ಹಿದಾಯತ್ ಕಾಲೋನಿಯಲ್ಲಿ ಅಡಗಿಕೊಂಡಿದ್ದ ಎಂಬ ಮಾಹಿತಿ ತಿಳಿದುಬಂದಿದೆ.
ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪ್ರಾಧ್ಯಾಪಕರಾಗಿರುವ ಉಮರ್, ಅಕ್ಟೋಬರ್ 30 ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಮ್ಮ ಸಹೋದ್ಯೋಗಿ ಡಾ. ಮುಜಮ್ಮಿಲ್ ಅಹ್ಮದ್ ಗನೈ ಅವರನ್ನು ಬಂಧಿಸಿದ ನಂತರ ಕ್ಯಾಂಪಸ್‌ನಿಂದ ಪಲಾಯನ ಮಾಡಿದ್ದ.
ಉಮರ್ ಮತ್ತು ಮುಜಮ್ಮಿಲ್ ಎರಡು ವರ್ಷಗಳಿಂದ ಈ ಸಂಚು ಯೋಜಿಸಿದ್ದಾರೆಂದು ತಿಳಿದುಬಂದಿದೆ.ಭಯೋತ್ಪಾದಕ ಸಂಚನ್ನು ಅರಿತ ಉಮರ್, ಅಡಗುತಾಣವನ್ನು ಹುಡುಕುತ್ತಿದ್ದಾಗ, ಹಿದಾಯತ್ ಕಾಲೋನಿಯಲ್ಲಿ ಒಂದು ಅಡಗುತಾಣವನ್ನು ಕಂಡುಕೊಂಡಿದ್ದರು. ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಎಲೆಕ್ಟ್ರಿಷಿಯನ್ ಒಬ್ಬರು ಕೊಠಡಿಯನ್ನು ಬಾಡಿಗೆಗೆ ಪಡೆಯಲು ಸಹಾಯ ಮಾಡಿದರು.
ಮತ್ತಷ್ಟು ಓದಿ: ರಜೌರಿಯಲ್ಲಿ ಭಾರಿ ಪ್ರಮಾಣದ ಐಇಡಿ ಪತ್ತೆ, ಸ್ಫೋಟದ ಮೂಲಕ ನಾಶ
ಮನೆಯ ಮಾಲೀಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ ರಾತ್ರಿ ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ ಸ್ಫೋಟ ಸಂಭವಿಸಿದ ಕೂಡಲೇ, ಮಧ್ಯರಾತ್ರಿಯ ನಂತರ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಬೃಹತ್ ಶೋಧ ಮತ್ತು ಕೂಂಬಿಂಗ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.
30 ಕ್ಕೂ ಹೆಚ್ಚು ಪೊಲೀಸ್ ಮತ್ತು ರಾಷ್ಟ್ರೀಯ ಭದ್ರತಾ ಪಡೆ ವಾಹನಗಳ ಬೆಂಗಾವಲು ಪಡೆ ಅಲ್-ಫಲಾಹ್ ವಿಶ್ವವಿದ್ಯಾಲಯವನ್ನು ತಲುಪಿತು ಎಂದು ಮೂಲಗಳು ತಿಳಿಸಿವೆ. ಅವರು ಸುತ್ತಮುತ್ತಲಿನ ಪ್ರದೇಶಗಳನ್ನು ಸಹ ಶೋಧಿಸಿದರು.
ನೌಗಾಮ್ ಸ್ಫೋಟ ಆಕಸ್ಮಿಕ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ಸ್ಪಷ್ಟಪಡಿಸಿದ್ದಾರೆ. ಉಮರ್ ಮತ್ತು ಮುಜಮ್ಮಿಲ್ ಖರೀದಿಸಿದ್ದಾರೆ ಎನ್ನಲಾದ ಸ್ಫೋಟಕ ವಸ್ತುಗಳನ್ನು ಕಳೆದ ಭಾನುವಾರ ಫರಿದಾಬಾದ್‌ನಿಂದ ವಶಪಡಿಸಿಕೊಂಡಿದ್ದು, ಅವುಗಳನ್ನು ನೌಗಾಮ್‌ಗೆ ಸಾಗಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




