ರಜೌರಿಯಲ್ಲಿ ಭಾರಿ ಪ್ರಮಾಣದ ಐಇಡಿ ಪತ್ತೆ, ಸ್ಫೋಟದ ಮೂಲಕ ನಾಶ
ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದ ಬಳಿಕ, ಜಮ್ಮು ಕಾಶ್ಮೀರದ ಪೊಲೀಸ್ ಠಾಣೆಯೊಳಗೆ ಸ್ಫೋಟ ಸಂಭವಿಸಿ 9 ಮಂದಿ ಪೊಲೀಸರು ಹತರಾಗಿದ್ದರು. ಇದಾದ ಬಳಿಕ ರಜೌರಿಯಲ್ಲಿ 300 ಕೆಜಿಯಷ್ಟು ಸುಧಾರಿತ ಸ್ಫೋಟಕ ಸಾಧನಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ಸ್ಫೋಟಿಸಿ ಅವುಗಳನ್ನು ನಾಶ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಸ್ಫೋಟಕ್ಕೂ ಮುಂಚೆಯೇ, ಫರಿದಾಬಾದ್‌ನಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ರಜೌರಿ, ನವೆಂಬರ್ 16: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ(Blast)ದ ಬಳಿಕ, ಜಮ್ಮು ಕಾಶ್ಮೀರದ ಪೊಲೀಸ್ ಠಾಣೆಯೊಳಗೆ ಸ್ಫೋಟ ಸಂಭವಿಸಿ 9 ಮಂದಿ ಪೊಲೀಸರು ಹತರಾಗಿದ್ದರು. ಇದಾದ ಬಳಿಕ ರಜೌರಿಯಲ್ಲಿ 300 ಕೆಜಿಯಷ್ಟು ಸುಧಾರಿತ ಸ್ಫೋಟಕ ಸಾಧನಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ಸ್ಫೋಟಿಸಿ ಅವುಗಳನ್ನು ನಾಶ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಸ್ಫೋಟಕ್ಕೂ ಮುಂಚೆಯೇ, ಫರಿದಾಬಾದ್‌ನಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ರಜೌರಿ ಜಿಲ್ಲೆಯ ಥನಮಂಡಿ ಉಪವಿಭಾಗದ ಅಪ್ಪರ್ ಬಂಗೈ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಯ ಬಳಿ ಐಇಡಿ ಪತ್ತೆಯಾಗಿತ್ತು. ಅಧಿಕಾರಿಗಳ ಪ್ರಕಾರ, ಸ್ಫೋಟದಲ್ಲಿ ಒಂದು ಮನೆ ಭಾಗಶಃ ಹಾನಿಗೊಳಗಾಗಿದೆ.
ಮತ್ತಷ್ಟು ಓದಿ: ಶ್ರೀನಗರ ಸ್ಫೋಟ: ಸಂಗ್ರಹಿಸಿಟ್ಟಿದ್ದ ಸ್ಫೋಟಕ ಬ್ಲಾಸ್ಟ್ ಆಗಿದ್ಹೇಗೆ? ತಜ್ಞರು ಹೇಳಿದ್ದೇನು? ಇಲ್ಲಿದೆ ವಿವರ
ಸ್ಫೋಟದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ. ಅಧಿಕಾರಿಗಳ ಪ್ರಕಾರ, ಭದ್ರತಾ ಗಸ್ತು ತಂಡವು ಮನೆಯ ಬಳಿ ಐಇಡಿಯನ್ನು ಪತ್ತೆ ಮಾಡಿತು, ನಂತರ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ನಿಯಂತ್ರಿತ ಸ್ಫೋಟವನ್ನು ನಡೆಸಲು ನಿರ್ಧರಿಸಲಾಯಿತು.
ಸ್ಫೋಟವು ಮೊಹಮ್ಮದ್ ಅಕ್ಬರ್ ಅವರ ಮನೆಗೆ ಸ್ವಲ್ಪ ಹಾನಿಯನ್ನುಂಟುಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಕುಟುಂಬವನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಶುಕ್ರವಾರ ತಡರಾತ್ರಿ ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ಒಂಬತ್ತು ಜನರು ಸಾವನ್ನಪ್ಪಿದ್ದು, ಸುಮಾರು 30 ಜನರು ಗಾಯಗೊಂಡಿದ್ದಾರೆ. ಫರಿದಾಬಾದ್‌ನಿಂದ ವಶಪಡಿಸಿಕೊಂಡ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ.
ಸ್ಫೋಟದ ಶಕ್ತಿ ಎಷ್ಟು ಪ್ರಬಲವಾಗಿತ್ತೆಂದರೆ ಅದರ ಶಬ್ದ ಐದು ಕಿಲೋಮೀಟರ್ ದೂರಕ್ಕೂ ಕೇಳಿಸುತ್ತಿತ್ತು. ಹರಿಯಾಣದ ಫರಿದಾಬಾದ್‌ನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡರು, ನಂತರ ಅವುಗಳನ್ನು ನೌಗಾಮ್‌ಗೆ ತರಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




