ಪ್ರತಿ ವರ್ಷ ಜನವರಿ 14 ರಂದು ಮಕರ ಸಂಕ್ರಾಂತಿಯ ಸಮಯದಲ್ಲಿ ಪ್ರಾರಂಭವಾಗಿ ಜ.15ರಂದು ಕೊನೆಗೊಳ್ಳುತ್ತದೆ. ಎರಡು ದಿನ ನಡೆಯುವ ಈ ಹಬ್ಬವನ್ನ ಗುಜರಾತ್‌ನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಅದಕ್ಕೂಸ್ಕರ ಗುಜರಾತಿ ಕ್ಯಾಲೆಂಡರ್ಗಳಲ್ಲಿ ರಜಾದಿನವೆಂದು ಘೋಷಿಸಿಸಲಾಗಿದೆ. ಗಾಳಿಪಟ ತಯಾರಕರು ಹಬ್ಬಕ್ಕೆ ತಿಂಗಳ ಮುಂಚಿತವಾಗಿಯೇ ತಯಾರಿ ನಡೆಸಲು ಪ್ರಾರಂಭಿಸುತ್ತಾರೆ. ಹಬ್ಬಗಳಿಗೆ ಕೆಲವು ದಿನಗಳ ಮೊದಲು ಗಾಳಿಪಟ ಪ್ರಿಯರು ಮತ್ತು ಉತ್ಸವಕ್ಕೆ ಹೋಗುವವರು ಗಾಳಿಪಟ ಖರೀದಿಸುವುದರಿಂದ ಮಾರುಕಟ್ಟೆಗಳು ತುಂಬಿರುತ್ತವೆ.
ಗಾಳಿಪಟದ ಇತಿಹಾಸ
ಮೂಲತಃ, ಗಾಳಿಪಟ ಹಾರಿಸುವುದು ರಾಜವಂಶಸ್ಥರಿಗೆ ಮತ್ತು ಶ್ರೀಮಂತರಿಗೆ ಮೀಸಲಾಗಿದ್ದ ಒಂದು ಹವ್ಯಾಸವಾಗಿತ್ತು, ಕಾಲಾನಂತರ ಇದು ಮುಕ್ತವಾದ ಉತ್ಸವವಾಗಿ ವಿಕಸನಗೊಂಡಿತು. ಜಪಾನ್, ಇಟಲಿ, ಯುನೈಟೆಡ್ ಕಿಂಗ್ಡಮ್, ಕೆನಡಾ, ಚೀನಾ, ಇಂಡೋನೇಷ್ಯಾ, ಸಿಂಗಾಪುರ್, ಯುನೈಟೆಡ್ ಸ್ಟೇಟ್ಸ್, ಮಲೇಷ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಬ್ರೆಜಿಲ್ನಿಂದ ಗಾಳಿಪಟ ಸ್ಪರ್ಧೆಗೆ ಭಾಗವಹಿಸಲು ಬರುತ್ತಾರೆ.
ಅಂತರರಾಷ್ಟ್ರೀಯ ಗಾಳಿಪಟ ದಿನವು ಭಾರತದಲ್ಲಿ ಹುಟ್ಟಿಕೊಂಡಿತು. ಇದನ್ನು ಉತ್ತರದ ರಾಜ್ಯ ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಹೆಚ್ಚು ಜನಪ್ರಿಯವಾಗಿ ಆಚರಿಸಲಾಗುತ್ತದೆ. ಹಿಂದಿಯಲ್ಲಿ ಈ ಹಬ್ಬವನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಇದು ಚಳಿಗಾಲದಿಂದ ಬೇಸಿಗೆಗೆ ಪರಿವರ್ತನೆ ಮತ್ತು ಮುಂಬರುವ ಚಳಿಗಾಲದ ಬೆಳೆಯ ಕೊಯ್ಲನ್ನು ನೆನಪಿಸುತ್ತದೆ. ಇನ್ನು ಹಬ್ಬಗಳಲ್ಲಿ ಭಾಗವಹಿಸಲು ಜನರು ಪ್ರಪಂಚದಾದ್ಯಂತ ಹೋಗುತ್ತಾರೆ. ಆಚರಣೆಗೆ ಸಂಬಂಧಿಸಿದ ಗಾಳಿಪಟಗಳು ಚಳಿಗಾಲದ ನಿದ್ರೆಯಿಂದ ಎಚ್ಚರಗೊಳ್ಳುವ ದೇವರ ಆತ್ಮಗಳನ್ನ ಪ್ರತಿನಿಧಿಸುತ್ತವೆ ಎಂಬುದು ಜನರ ವಾಡಿಕೆ.
ಬಿದಿರಿನ ಫ್ರೇಮ್ಗಳೊಂದಿಗೆ ಹಗುರವಾದ ವರ್ಣರಂಜಿತ ಕಾಗದದಿಂದ ಮಾಡಿದ ಸರಳ ಗಾಳಿಪಟಗಳು ಹೆಚ್ಚಾಗಿ ಕಂಡುಬರುತ್ತವೆ. ಗಾಳಿಪಟದ ಸಾಲುಗಳನ್ನ ಅಕ್ಕಿ ಮತ್ತು ಪುಡಿಮಾಡಿದ ಗಾಜಿನ ಮಿಶ್ರಣದಿಂದ ಲೇಪಿಸಲಾಗುತ್ತದೆ. ಇದು “ಗಾಳಿಪಟದ ಕಾದಾಟ”ಕ್ಕೆ ಸಹಾಯ ಮಾಡುತ್ತದೆ. ಹಬ್ಬದ ಸಮಯದಲ್ಲಿ ಗಾಳಿಪಟ ಹಾರಿಸುವವರು ಪರಸ್ಪರರ ದಾರಗಳನ್ನು ಕತ್ತರಿಸಲು ಮತ್ತು ತಮ್ಮ ಗಾಳಿಪಟಗಳನ್ನು ಹೊಡೆದುರುಳಿಸಲು ಪ್ರಯತ್ನಿಸುತ್ತಾರೆ. ಹಗಲಿನಲ್ಲಿ, ಅಕ್ರೋಬ್ಯಾಟ್‌ಗಳು ಪ್ರದರ್ಶನ ನೀಡಿದರೆ, ರಾತ್ರಿಯಲ್ಲಿ ‘ತುಕ್ಕಲ್’ ಎಂದು ಕರೆಯಲ್ಪಡುವ ಪ್ರಕಾಶಿತ ಗಾಳಿಪಟಗಳು ಆಕಾಶದಲ್ಲಿ ಪ್ರಕಾಶಿಸುತ್ತದೆ.
ಅಂತರಾಷ್ಟ್ರೀಯ ಗಾಳಿಪಟ ದಿನವನ್ನು ಹೇಗೆ ಆಚರಿಸುವುದು
ಉತ್ಸವದಲ್ಲಿ ಪಾಲ್ಗೊಳ್ಳಿ
ನೀವು ಪ್ರಯಾಣಿಗರಾಗಿದ್ದರೆ ಪ್ರತಿವರ್ಷ ಜನವರಿ 14 ರಂದು ಗುಜರಾತ್‌ನಲ್ಲಿ ಅಂತರರಾಷ್ಟ್ರೀಯ ಗಾಳಿಪಟ ದಿನವನ್ನು ಆಚರಿಸುತ್ತಾರೆ. ಅಲ್ಲಿಗೆ ಹೋಗಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಬಹುದು. ಇದು ನಿಸ್ಸಂದೇಹವಾಗಿ ನಿಮ್ಮ ಜೀವನದುದ್ದಕ್ಕೂ ನೀವು ನೆನಪಿನಲ್ಲಿಟ್ಟುಕೊಳ್ಳುವ ಮರೆಯಲಾಗದ ಅನುಭವವಾಗಿರುತ್ತದೆ.
ಗಾಳಿಪಟವನ್ನು ತೆಗೆದುಕೊಂಡು ಹಾರಿಸಿ
ಸರಳವಾಗಿ ಗಾಳಿಪಟವನ್ನು ಖರೀದಿಸುವ ಮೂಲಕ ನಿಮ್ಮ ಸ್ನೇಹಿತರೊಂದಿಗೆ ಮೈದಾನಕ್ಕೆ ಹೋಗಿ ಅಲ್ಲಿ ನೀವು ಆಚರಣೆಯನ್ನ ಮಾಡಬಹುದು. ಇನ್ನು ಯಾವುದೇ ಜಂಜಾಟವಿಲ್ಲದೇ ನೀವು ಗಾಳಿಪಟವನ್ನ ಹಾರಿಸಿ ಆನಂದಿಸಬಹುದು.
ಗಾಳಿಪಟಗಳನ್ನು ಹೇಗೆ ಮಾಡಬೇಕೆಂದು ಯಾರಿಗಾದರೂ ಕಲಿಸಿ ಅಥವಾ ಕಲಿಯಿರಿ
ಆಕಾಶದಲ್ಲಿ ಗಾಳಿಪಟಗಳನ್ನು ಹಾರಿಸಲು ಕಲಿಯಿರಿ ಮತ್ತು ತರಬೇತಿ ನೀಡಬಹುದು ಅಥವಾ ಗಾಳಿಪಟಗಳನ್ನು ಹೇಗೆ ತಯಾರಿಸುವುದು ಮತ್ತು ಅಲಂಕರಿಸುವುದು ಎಂಬುದನ್ನು ಯಾರಿಗಾದರೂ ಕಲಿಸುವ ಮೂಲಕ ಆಚರಿಸಬಹುದು.
ಗಾಳಿಪಟಗಳ ಬಗ್ಗೆ ಕೆಲವು ಸಂಗತಿಗಳು
ಸಂಶೋಧನಾ ಸಹಾಯಕ
ಹೌದು ರೈಟ್ ಸಹೋದರರು 1800 ರ ದಶಕದ ಉತ್ತರಾರ್ಧದಲ್ಲಿ ಮೊದಲು ವಿಮಾನವನ್ನು ಅಭಿವೃದ್ಧಿಪಡಿಸಿದಾಗ ಅವರು ಗಾಳಿಪಟಗಳನ್ನು ಅಧ್ಯಯನ ಮಾಡಿದ್ದರು. ಗಾಳಿಪಟದ ಹಾರಾಟ ಅವರು ವಿಮಾನವನ್ನ ತಯಾರಿಸಲು ಸಾಧ್ಯವಾಯಿತು.
ವಿಶ್ವ ದಾಖಲೆ
180 ಗಂಟೆಗಳು ಅತಿ ಉದ್ದದ ಗಾಳಿಪಟ ಹಾರಾಟವು ಇದುವರೆಗಿನ ವಿಶ್ವದಾಖಲೆಯಾಗಿದೆ.
ಎಲೆಗಳ ಗಾಳಿಪಟಗಳು
ಮೊದಲು ಗಾಳಿಪಟಗಳನ್ನು ತಯಾರಿಸಲು ಎಲೆಗಳನ್ನು ಬಳಸಲಾಗುತ್ತಿತ್ತು, ಸಾವಿರಾರು ವರ್ಷಗಳ ಹಿಂದೆ ಎಲೆಯ ಮೂಲಕ ತಯಾರಿಸಿ ಹಾರಿಸಲಾಗಿತ್ತು.
ಹಾರುವ ಕೊರಿಯರ್ಗಳು
ಅಮೇರಿಕನ್ ಅಂತರ್ಯುದ್ಧದ ಸಮಯದಲ್ಲಿ ಗಾಳಿಪಟಗಳನ್ನು ಅಂಚೆ ಮತ್ತು ಪತ್ರಿಕೆಗಳನ್ನು ಸಾಗಿಸಲು ಬಳಸಲಾಗುತ್ತಿತ್ತು.
ಇದನ್ನೂ ಓದಿ:Constitution Day 2022: ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಸಂವಿಧಾನ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ
ಅಂತಾರಾಷ್ಟ್ರೀಯ ಗಾಳಿಪಟ ದಿನವನ್ನು ಪ್ರೀತಿಸಲು ಕಾರಣ
ಉತ್ತಮ ಆಹಾರ
ಹೌದು ಆಹಾರ ಪ್ರಿಯರು ಈ ರಜಾದಿನವನ್ನ ಗುಜರಾತಿನ ಜನರು ಸಾಂಪ್ರದಾಯಿಕ ಗುಜರಾತಿ ಆಹಾರವನ್ನ ತಯಾರಿಸಿಕೊಂಡು ಇಷ್ಟವಾದ ಪ್ರದೇಶಕ್ಕೆ ಹೋಗಿ ಗಾಳಿಪಟವನ್ನ ಹಾರಿಸುವ ಮೂಲಕ ಆಚರಿಸುತ್ತಾರೆ.
ಒಂದೇ ಕಡೆ ಸೇರುವುದು
ನಾವು ನಮ್ಮ ಜೀವನದ ಜಂಜಾಟಗಳಲ್ಲಿ ಸಿಲುಕಿಕೊಂಡಿರುತ್ತೇವೆ ಈ ನಡುವೆ ಎಲ್ಲರೊಂದಿಗೆ ಸೇರಲು ಒಂದು ಹಬ್ಬದ ಅವಶ್ಯಕತೆಯಿದೆ. ಅದಕ್ಕೆ ಈ ಗಾಳಿಪಟ ಹಬ್ಬ ಸಾಕ್ಷಿಯಾಗಲಿದೆ. ಎಲ್ಲರೂ ಒಂದೇಡೆ ಸೇರಿ ಗಾಳಿಪಟಗಳನ್ನು ಹಾರಿಸುವ ಮುಖಾಂತರ ಕಷ್ಟ, ನೋವುಗಳನ್ನ ಮರೆಯಲು ಸಾಧ್ಯ.
ಇನ್ನಷ್ಟು ಮಾಹಿತಿಯನ್ನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ