Earthquake: ಹಿಮಾಚಲ ಪ್ರದೇಶದ ಧರ್ಮಶಾಲಾ ವ್ಯಾಪ್ತಿಯಲ್ಲಿ ಭೂಕಂಪ
ಹಿಮಾಚಲ ಪ್ರದೇಶದ ಧರ್ಮಶಾಲಾ ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ಕಂಪನದ ತೀವ್ರತೆ ದಾಖಲಾಗಿದೆ.
Earthquake in Himachal Pradesh: ಶನಿವಾರ(ಜ.14) ಮುಂಜಾನೆ 5:17 ಕ್ಕೆ ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ 22ಕಿಮೀ ಪೂರ್ವದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ಕಂಪನದ ತೀವ್ರತೆ ದಾಖಲಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪನ ನಡೆದ ಕಡೆ ಇಲ್ಲಿಯವರೆಗೆ ಯಾವುದೇ ಹಾನಿ ಮತ್ತು ನಾಶದ ವರದಿಯಾಗಿಲ್ಲ ಎಂಬುದನ್ನು ತಿಳಿಸಿದೆ.
Earthquake of Magnitude:3.2, Occurred on 14-01-2023, 05:17:15 IST, Lat: 32.25 & Long: 76.56, Depth: 5 Km ,Location: 22km E of Dharamshala, Himachal Pradesh, India for more information Download the BhooKamp App https://t.co/fzTPRqgGor@Indiametdept @ndmaindia @Dr_Mishra1966 pic.twitter.com/830j8jTum0
— National Center for Seismology (@NCS_Earthquake) January 14, 2023
ಇದನ್ನೂ ಓದಿ: Joshimath Sinking: ಜೋಶಿಮಠ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ಮುಳುಗಿದೆ: ಇಸ್ರೋ ಮಾಹಿತಿ
ಮುಳುಗುತ್ತಿದೆ ಜೋಶಿಮಠ
ಉತ್ತರಾಖಂಡದ ಜೋಶಿಮಠದಲ್ಲಿ ಕ್ಷಣ ಕ್ಷಣಕ್ಕೂ ಭೂಮಿ ಕುಸಿಯುತ್ತಿದೆ. ಇತ್ತೀಚೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಮತ್ತೊಂದು ಬೆಚ್ಚಿಬೀಳೀಸುವ ವರದಿಯನ್ನು ಹೊರ ಹಾಕಿದೆ. ಇಸ್ರೋ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಜೋಶಿಮಠ ನಗರದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದ್ದು ಕೇವಲ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ಮುಳುಗಿದೆ ಎನ್ನವ ಮಾಹಿತಿ ಬಹಿರಂಗಪಡಿಸಿದೆ. ಜೋಶಿಮಠದಲ್ಲಿ ಭೂಮಿ ನಿಧಾನವಾಗಿ ಮುಳುಗುವ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ಆತಂಕ ಹೆಚ್ಚಾಗಿದ್ದು ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಜೋಶಿಮಠವನ್ನು ಚಮೋಲಿ ಜಿಲ್ಲಾಡಳಿತ ಭೂಕುಸಿತ ಪ್ರದೇಶ ಎಂದು ಘೋಷಿಸಿದೆ. ಕಳೆದ ಕೆಲವು ದಿನಗಳಿಂದ ನೂರಾರು ಮನೆ ಮತ್ತು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಜೋಶಿಮಠದಿಂದ ನೂರಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ನಡುವೆ ರಾಜ್ಯ ಸರ್ಕಾರವು 1.5 ಲಕ್ಷ ರೂಪಾಯಿಗಳ ಮಧ್ಯಂತರ ಪರಿಹಾರ ಪ್ಯಾಕೇಜ್ ಘೋಷಿಸಿದ್ದು, ಪುನರ್ವಸತಿ ಪ್ಯಾಕೇಜ್‌ಗೆ ಕೆಲಸ ಮಾಡುತ್ತಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:14 am, Sat, 14 January 23