ಇಂದು ಏಳನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಎಂ-ಯೋಗ ಆ್ಯಪ್(M-Yoga App) ಬಿಡುಗಡೆ ಮಾಡಿದ್ದಾರೆ. ವಿಶ್ವದಾದ್ಯಂತ ಯೋಗಾಭ್ಯಾಸಕ್ಕೆ ಅನುಕೂಲವಾಗುವಂತೆ ಎಂ-ಯೋಗ ಅಪ್ಲಿಕೇಶನ್ ಬಿಡಿಗಡೆಗೊಳಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ‘ಒಂದು ವಿಶ್ವ- ಒಂದು ಆರೋಗ್ಯ’ ಎಂಬ ಉದ್ದೇಶದೊಂದಿಗೆ ಎಂ-ಯೋಗ ಆ್ಯಪ್ ಬಿಡುಗಡೆಗೊಂಡಿದೆ. ವಿವಿಧ ಭಾಷೆಯೊಂದಿಗೆ ಯೋಗ ತರಬೇತಿ ನೀಡುವ ವಿಡಿಯೋಗಳು ಈಗಾಗಲೇ ಲಭ್ಯವಾಗುತ್ತಿವೆ.
ವಿಶ್ವದಾದ್ಯಂತ, ಯೋಗಾಭ್ಯಾಸದಿಂದ ಜನರ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಈ ಆ್ಯಪ್ ಸಹಾಯಕವಾಗಿದೆ. ವಿಶ್ವಸಂಸ್ಥೆಯಲ್ಲಿ ಭಾರತವು ಅಂತರರಾಷ್ಟ್ರೀಯ ಯೋಗ ದಿನವನ್ನು ಎಲ್ಲೆಡೆ ಸಾರಿದಾಗ, ಯೋಗ ವಿಜ್ಞಾನವನ್ನು ಇಡೀ ದೇಶಕ್ಕೆ ಸಾರುವುದು ಇದರ ಉದ್ದೇಶವಾಗಿದೆ ಎಂದು ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಭಾರತವು ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಎಂ-ಯೋಗ ಆ್ಯಪ್ ನಮ್ಮ ಜ್ಞಾನವನ್ನು ಇಂದಿನ ತಂತ್ರಜ್ಞಾನದೊಂದಿಗೆ ಬೆಸೆಯುತ್ತದೆ ಎಂದು ಪ್ರಧಾನಿ, ಯೋಗ ಆ್ಯಪ್ ಕುರಿತಾಗಿ ಹೇಳಿದ್ದಾರೆ.
ಎಂ-ಯೋಗ ಅಪ್ಲಿಕೇಶನ್
*ವಿಶ್ವ ಆರೋಗ್ಯ ಸಹಯೋಗದೊಂದಿಗೆ ಆಯುಷ್ ಸಚಿವಾಲಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಎಂ-ಯೋಗ ಆ್ಯಪ್ಅನ್ನು ಅಭಿವೃದ್ಧಿಪಡಿಸಿದೆ
*ಈ ಹೊಸ ಅಪ್ಲಿಕೇಶನ್ ವಿಭಿನ್ನ ಯೋಗ ತರಬೇತಿಯನ್ನು ನೀಡುತ್ತದೆ ಮತ್ತು ಆಡಿಯೋ ಜತೆಗೆ ವಿಡಿಯೋ ಸೌಲಭ್ಯವನ್ನು ಹೊಂದಿದೆ
*ಈಗಾಗಲೇ ಫ್ರೆಂಚ್, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನಿತರ ಭಾಷೆಗಳನ್ನು ಕಾಣಬಹುದು
*ಆ್ಯಂಡ್ರಾಯ್ಡ್ ಬಳಕೆದಾರರು ಎಂ-ಯೋಗ ಆ್ಯಪ್ಅನ್ನು ಗೂಗಲ್ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು
*ಅಪ್ಲಿಕೇಶನ್ ಬಳಸಲು ಸುರಕ್ಷಿತವಾಗಿದೆ ಮತ್ತು ಬಳಕೆದಾರರಿಂದ ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ಅಭಿವರ್ಧಕರು ಭರವಸೆ ನೀಡಿದ್ದಾರೆ
ಇದನ್ನೂ ಓದಿ:
International Yoga Day 2021: ಕೊರೊನಾ ವಿರುದ್ಧದ ಹೋರಾಟಕ್ಕೆ ಯೋಗದಿಂದ ಬಲ ಸಿಕ್ಕಿದೆ: ಪ್ರಧಾನಿ ನರೇಂದ್ರ ಮೋದಿ