UPSC: ವ್ಯವಸ್ಥೆ ರಾಜಿ ಮಾಡಿಕೊಂಡರೆ ಮುಂದೆ ಶ್ರೀಮಂತರು ಮಾತ್ರ ಐಎಎಸ್, ಐಪಿಎಸ್ ಅಧಿಕಾರಿಯಾಗುತ್ತಾರೆ: ಅರುಣ್ ಬೋಥ್ರಾ
ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಕುರಿತು ಐಪಿಎಸ್ ಅಧಿಕಾರಿ ಅರುಣ್ ಬೋಥ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುಪಿಎಸ್ಸಿಯು ದೇಶದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಗಳಲ್ಲಿ ಒಂದಾಗಿದೆ. ಬಡ ಮತ್ತು ಮಧ್ಯಮ ವರ್ಗದ ಹೆಚ್ಚಿನ ಸಂಖ್ಯೆಯ ಯುವಕರು ಮತ್ತು ಹುಡುಗಿಯರು ಪ್ರತಿ ವರ್ಷ ನಾಗರಿಕ ಸೇವೆಗಳಿಗೆ ಸೇರುತ್ತಾರೆ.
ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಕುರಿತು ಐಪಿಎಸ್ ಅಧಿಕಾರಿ ಅರುಣ್ ಬೋಥ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯುಪಿಎಸ್ಸಿಯು ದೇಶದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಗಳಲ್ಲಿ ಒಂದಾಗಿದೆ. ಬಡ ಮತ್ತು ಮಧ್ಯಮ ವರ್ಗದ ಹೆಚ್ಚಿನ ಸಂಖ್ಯೆಯ ಯುವಕರು ಮತ್ತು ಹುಡುಗಿಯರು ಪ್ರತಿ ವರ್ಷ ನಾಗರಿಕ ಸೇವೆಗಳಿಗೆ ಸೇರುತ್ತಾರೆ.
ವ್ಯವಸ್ಥೆಯು ಸಂಪೂರ್ಣವಾಗಿ ರಾಜಿ ಮಾಡಿಕೊಂಡಿದ್ದರೆ ನೀವು ಐಎಎಸ್ ಮತ್ತು ಐಪಿಎಸ್‌ನಂತಹ ಸೇವೆಗಳಲ್ಲಿ ಶ್ರೀಮಂತ ಮತ್ತು ಶಕ್ತಿಶಾಲಿಗಳನ್ನು ಮಾತ್ರ ಪಡೆಯುತ್ತೀರಿ. ಪೂಜಾ ಖೇಡ್ಕರ್ಗೆ ಸಂಬಂಧಿಸಿದಂತೆ ಸೇವೆಯಲ್ಲಿರುವ ಅಧಿಕಾರಿಗಳಿಗೆ ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಮರುಪರಿಶೀಲಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಪೂಜಾ ಖೇಡ್ಕರ್ ಅವರ ತರಬೇತಿಯನ್ನು ಸ್ಥಗಿತಗೊಳಿಸಲಾಗಿದೆ. ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಎಂಬಿಬಿಎಸ್‌ಗೆ ಸೇರುವ ಸಮಯದಲ್ಲಿ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣಪತ್ರದಿಂದ ಅವರಿಗೆ ಯಾವ ಸಮಸ್ಯೆಯೂ ಇಲ್ಲ ದೈಹಿಕವಾಗಿ ಫಿಟ್ ಆಗಿದ್ದಾರೆ ಎಂಬುದು ತಿಳಿದುಬಂದಿದೆ.
ಮತ್ತಷ್ಟು ಓದಿ: Puja Khedkar: ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ಗೆ ಮತ್ತೊಂದು ಸಂಕಷ್ಟ; ಮಹಾರಾಷ್ಟ್ರದಲ್ಲಿ ತರಬೇತಿ ಸ್ಥಗಿತಕ್ಕೆ ಆದೇಶ
ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಕಲಿ ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗ (OBC) ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ತನಿಖೆ ಮಾಡಿದಾಗ ಅವರು 2007ರಲ್ಲಿ ಎಂಬಿಬಿಎಸ್‌ಗೆ ಸೇರ್ಪಡೆಗೊಳ್ಳುವ ಸಮಯದಲ್ಲಿ ಸಲ್ಲಿಸಲಾದ ವೈದ್ಯಕೀಯ ಪ್ರಮಾಣಪತ್ರದಲ್ಲಿ ಅವರಿಗೆ ಯಾವ ದೋಷವೂ ಇಲ್ಲ ಅವರು ಫಿಟ್ ಆಗಿದ್ದಾರೆಂದು ಅದರಲ್ಲಿ ಬರೆಯಲಾಗಿತ್ತು.
ಕೆಂಪು- ನೀಲಿ ಬೀಕನ್ ಲೈಟ್ ಮತ್ತು ವಿಐಪಿ ನಂಬರ್ ಪ್ಲೇಟ್‌ನೊಂದಿಗೆ ಖಾಸಗಿ ಆಡಿ ಕಾರನ್ನು ಬಳಸಿದ್ದಕ್ಕಾಗಿ ತನಿಖೆಗೆ ಖೇಡ್ಕರ್ ಅವರನ್ನು ಒಳಪಡಿಸಿದಾಗ ಅವರು ಒಬಿಸಿ ಮತ್ತು ದೃಷ್ಟಿಹೀನ ವರ್ಗಗಳ ಅಡಿಯಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಗೆ ಹಾಜರಾಗಿದ್ದರು ಮತ್ತು ಮಾನಸಿಕ ಅಸ್ವಸ್ಥತೆಯ ಪ್ರಮಾಣಪತ್ರವನ್ನೂ ಸಲ್ಲಿಸಿದ್ದಾರೆ ಎನ್ನುವುದು ಬಯಲಾಗಿದೆ.
UPSC is one of the most credible institutions in the country. Large number of young boys and girls from poor and middle classes make it to the civil services every year. If the system was totally compromised you would find only rich and powerful getting into the services like IAS… pic.twitter.com/cdEmqaQXbg
— Arun Bothra 🇮🇳 (@arunbothra) July 20, 2024
2007ರಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆಯುವಾಗ ಪೂಜಾ ಖೇಡ್ಕರ್ ಅವರು ಕಾಶಿಬಾಯಿ ನವ್ಲೆ ವೈದ್ಯಕೀಯ ಕಾಲೇಜಿಗೆ ಸಲ್ಲಿಸಿದ್ದರು . ಫಿಟ್‌ನೆಸ್ ಪ್ರಮಾಣಪತ್ರದಲ್ಲಿ ದೈಹಿಕ ಅಥವಾ ಮಾನಸಿಕ ಯಾವುದೇ ಅಂಗವೈಕಲ್ಯತೆಯ ಉಲ್ಲೇಖವಿಲ್ಲ.
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಗೆ ತನ್ನ ಅಫಿಡವಿಟ್‌ನಲ್ಲಿ, ಮಹಾರಾಷ್ಟ್ರ ಕೇಡರ್‌ನ 2023-ಬ್ಯಾಚ್ ಐಎಎಸ್ ಅಧಿಕಾರಿ ಖೇಡ್ಕರ್ ಅವರು ತಮಗೆ ದೃಷ್ಟಿದೋಷವಿದೆ ಎಂದು ಹೇಳಿಕೊಂಡಿದ್ದಾರೆ.
ಆದರೂ ಪೂಜಾ ಖೇಡ್ಕರ್ ಒಬಿಸಿ ವರ್ಗದ ಅಡಿಯಲ್ಲಿ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಿದ್ದರು. ಅಲ್ಲಿ ಕ್ರೀಮಿ ಲೇಯರ್ ಪ್ರಮಾಣಪತ್ರದ ಮಿತಿಯು ಪೋಷಕರ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಯಾಗಿದೆ. ಆದರೆ ಇವರ ತಂದೆ ಕೋಟ್ಯಧೀಶರಾಗಿದ್ದರೂ ಒಬಿಸಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:46 am, Sat, 20 July 24