Ramayana Yatra: ಏಪ್ರಿಲ್ 7ರಂದು ಆರಂಭವಾಗಲಿದೆ 18 ದಿನಗಳ ರಾಮಾಯಣ ಯಾತ್ರೆ: ಟಿಕೆಟ್ ಬುಕಿಂಗ್ ಶುರು
ಭಾರತೀಯ ರೈಲ್ವೆ(Indian Railway) ಇಲಾಖೆಯು ಏಪ್ರಿಲ್ 7 ರಿಂದ ರಾಮಾಯಣ ಯಾತ್ರೆಯನ್ನು ಆರಂಭಿಸಲಿದ್ದು, 18 ದಿನಗಳ ಕಾಲ ನಡೆಯಲಿದೆ. ಈ ಪ್ರಯಾಣದಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಲಾಗುವುದು, ರಾಮಾಯಣ ಯಾತ್ರೆಯ ಮೊದಲ ನಿಲ್ದಾಣ ಅಯೋಧ್ಯೆಯಾಗಿರಲಿದೆ.
ಭಾರತೀಯ ರೈಲ್ವೆ(Indian Railway) ಇಲಾಖೆಯು ಏಪ್ರಿಲ್ 7 ರಿಂದ ಶ್ರೀ ರಾಮಾಯಣ ಯಾತ್ರೆಯನ್ನು ಆರಂಭಿಸಲಿದ್ದು, 18 ದಿನಗಳ ಕಾಲ ನಡೆಯಲಿದೆ. ಈ ಪ್ರಯಾಣದಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಲಾಗುವುದು, ರಾಮಾಯಣ ಯಾತ್ರೆಯ ಮೊದಲ ನಿಲ್ದಾಣ ಅಯೋಧ್ಯೆಯಾಗಿರಲಿದೆ. ಈ ರೈಲು ದೆಹಲಿಯ ಸಫ್ದರ್ಜಂಗ್ ನಿಲ್ದಾಣದಿಂದ ಪ್ರಾರಂಭವಾಗಲಿದೆ, ಪ್ರಯಾಣಿಕರು ಗಾಜಿಯಾಬಾದ್, ಅಲಿಗಢ, ತುಂಡ್ಲಾ, ಇಟಾವಾ, ಕಾನ್ಪುರ ಮತ್ತು ಲಕ್ನೋದಿಂದ ರೈಲಿನಲ್ಲಿ ಪ್ರಯಾಣವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ.
ರೈಲು ಭೇಟಿ ನೀಡುವ ಸ್ಥಳ ಆಯೋಧ್ಯ: ರಾಮ ಜನ್ಮಭೂಮಿ ಮಂದಿರ, ಹನುಮಾನ್ ಗರ್ಹಿ, ಸರಯೂ ಘಾಟ್
ನಂದೀಗ್ರಾಮ:ಭಾರತ್ ಹನುಮಾನ್ ಮಂದಿರ,ಭಾರತ್ ಕುಂದ್
ಜನಕಪುರ: ರಾಮ ಜಾನಕಿ ಮಂದಿರ
ಸೀತಾಮರಾಹಿ: ಜಾನಕಿ ಮಂದಿರ ಹಾಗೂ ಪುನರ್ವ ಧಾಮ
ಬುಕ್ಸರ್ : ರಾಮ ರೇಖಾ ಘಾಟ್, ರಾಮೇಶ್ವರ ನಾಥ್ ದೇವಸ್ಥಾನ
ವಾರಾಣಸಿ : ತುಳಸಿ ಮಾನಸ ದೇವಸ್ಥಾನ, ಸಂಕಟ್ ಮೋಚನ್ ದೇವಸ್ಥಾನ, ವಿಶ್ವನಾಥ ದೇವಸ್ಥಾನ, ಗಂಗಾ ಆರತಿ
ಸೀತಾ ಸಮಾಹಿತಿ ಸ್ಥಳ್, ಸೀತಾಮರಾಹಿ: ಸೀತಾ ಮಾತಾ ದೇವಸ್ಥಾನ
ಪ್ರಯಾಗರಾಜ್ : ಭಾರದ್ವಾಜ ಆಶ್ರಮ, ಗಂಗಾ ಯಮುನಾ ಸಂಗಮ, ಹನುಮಾನ ದೇವಸ್ಥಾನ
ಶ್ರಿಂಗ್ವೆರ್ಪುರ್: ಶ್ರಿಂಗಿ ರಿಷಿ ಸಮಾಧಿ, ಶಾಂತಾ ದೇವಿ ದೇವಸ್ಥಾನ, ರಾಮಚೌರ
ಚಿತ್ರಕೂಟ: ಗುಪ್ತ ಗೋದಾವರಿ, ರಾಮ ಘಾಟ್, ಸತಿ ಅನಸೂಯ ದೇವಸ್ಥಾನ
ನಾಸಿಕ್ : ತ್ರಯಂಬಕೇಶ್ವರ ದೇವಸ್ಥಾನ, ಪಂಚವಟಿ, ಸೀತಾಗುಹ, ಕಲರಾಮ ಮಂದಿರ
ಹಂಪಿ: ಅಂಜನಾದ್ರಿ ಬೆಟ್ಟ, ವಿರೂಪಾಕ್ಷ ದೇವಸ್ಥಾನ, ವಿಠಲ ಮಂದಿರ
ರಾಮೇಶ್ವರಂ : ರಾಮನಾಥ ಸ್ವಾಮಿ ಮಂದಿರ, ಧನುಷ್ಕೋಡಿ
ಬದ್ರಾಚಲಂ: ಶ್ರೀ ಸೀತಾ ರಾಮಚಂದ್ರಸ್ವಾಮಿ ಮಂದಿರ, ಆಂಜನೇಯ ಸ್ವಾಮಿ ಮಂದಿರ
ನಾಗ್ಪುರ: ರಾಮತೇಕ್ ಕೋಟೆ ಹಾಗೂ ಮಂದಿರ
ಈ ರೈಲು ಎಸಿ ಫರ್ಸ್ಟ್ ಹಾಗೂ ಎಸಿ ಸೆಕೆಂಡ್ ಕೋಚ್ಗಳನ್ನು ಹೊಂದಿರುತ್ತದೆ. ಒಟ್ಟು 156 ಪ್ರಯಾಣಿಕರು ಶ್ರೀರಾಮಾಯಣ ಯಾತ್ರೆಗೆ ತೆರಳಲು ಸಾಧ್ಯವಾಗುತ್ತದೆ. ಈ ರೈಲುಗಳು ಎರಡು ರೈಲು ರೆಸ್ಟೋರೆಂಟ್ಗಳನ್ನು ಸಹ ಒಳಗೊಂಡಿರುತ್ತದೆ. 7,500 ಕಿ,ಮೀ ನ ಪ್ರಯಾಣದಲ್ಲಿ ಹಲವು ಸೌಲಭ್ಯಗಳಿರುತ್ತವೆ. ಯಾತ್ರೆಯ ವೇಳೆ ಭಕ್ತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ಎಸಿ ಫರ್ಸ್ಟ್ ಕೋಚ್ನ ಪ್ರತಿ ಪ್ರಯಾಣಿಕರಿಗೆ 1.68 ಲಕ್ಷ ರೂ, ಕ್ಯಾಬಿನ್ಗೆ 1.46 ಲಕ್ಷ ರೂ, ಎಸಿ ಸೆಕೆಂಡ್ ಕೋಚ್ಗೆ 1.14 ಲಕ್ಷ ರೂ ನೀಡಬೇಕಾಗುತ್ತದೆ. ಈ ಪ್ರಯಾಣದ ಬುಕಿಂಗ್ ಅನ್ನು ಐಆರ್ಸಿಟಿಸಿಯ ವೆಬ್ಸೈಟ್ನಲ್ಲಿ ಮಾಡಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ