IRCTC Updates: ರೈಲ್ವೆ ಇಲಾಖೆಯ 254 ರೈಲುಗಳು ಇಂದು ರದ್ದು; ಮಾಹಿತಿ ಚೆಕ್ ಮಾಡುವುದು ಹೇಗೆ?

Indian Railways: ರದ್ದುಗೊಂಡಿರುವ ರೈಲುಗಳ ಪಟ್ಟಿಯು ದೆಹಲಿ, ಹೌರಾ, ಅಸನ್ಸೋಲ್, ಪ್ರಯಾಗರಾಜ್, ಗುವಾಹಟಿ, ಮಧುರೈ ಮತ್ತು ಇತರ ನಗರಗಳಲ್ಲಿ ಚಲಿಸುವ ರೈಲುಗಳನ್ನು ಒಳಗೊಂಡಿದೆ.

IRCTC Updates: ರೈಲ್ವೆ ಇಲಾಖೆಯ 254 ರೈಲುಗಳು ಇಂದು ರದ್ದು; ಮಾಹಿತಿ ಚೆಕ್ ಮಾಡುವುದು ಹೇಗೆ?
ಭಾರತೀಯ ರೈಲ್ವೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 09, 2022 | 10:02 AM

ನವದೆಹಲಿ: ತಾಂತ್ರಿಕ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಕೆಲಸಗಳ ಕಾರಣದಿಂದ ಭಾರತೀಯ ರೈಲ್ವೆ ಇಲಾಖೆ (Indian Railways) ಇಂದು (ಶುಕ್ರವಾರ) 254 ರೈಲುಗಳನ್ನು ರದ್ದುಗೊಳಿಸಿದೆ. ರೈಲ್ವೆ ಇಲಾಖೆಯು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಇಂದು ಹೊರಡಬೇಕಿದ್ದ 185 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಮತ್ತು 69 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

ರದ್ದುಗೊಂಡಿರುವ ರೈಲುಗಳ ಪಟ್ಟಿಯು ದೆಹಲಿ, ಹೌರಾ, ಅಸನ್ಸೋಲ್, ಪ್ರಯಾಗರಾಜ್, ಗುವಾಹಟಿ, ಮಧುರೈ ಮತ್ತು ಇತರ ನಗರಗಳಲ್ಲಿ ಚಲಿಸುವ ರೈಲುಗಳನ್ನು ಒಳಗೊಂಡಿದೆ. ಇಂಜಿನಿಯರಿಂಗ್ ಮತ್ತು ನಿರ್ವಹಣೆ ಸಮಸ್ಯೆಗಳಿಂದಾಗಿ ರೈಲ್ವೆ ಇಲಾಖೆ ಪ್ರತಿದಿನ ಕೆಲವು ರೈಲುಗಳನ್ನು ರದ್ದುಗೊಳಿಸುತ್ತದೆ.

ಇದನ್ನೂ ಓದಿ: Vande Bharat Train: ದಾಖಲೆಯ ವೇಗದಲ್ಲಿ ಪ್ರಯಾಣಿಸಿದ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು; ವಿಡಿಯೋ ಇಲ್ಲಿದೆ

ನೀವು ಸೀಟ್ ಬುಕ್ ಮಾಡಿರುವ ರೈಲು ರದ್ದುಗೊಂಡಿದೆಯೇ ಎಂದು ಪರಿಶೀಲಿಸುವುದು ಹೇಗೆ?: indianrail.gov.in/mntesಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆ ಮಾಡಿ. ವೆಬ್​ಸೈಟ್​​ನ ಸ್ಕ್ರೀನ್ ಮೇಲಿನ ಪ್ಯಾನೆಲ್‌ನಲ್ಲಿ ಎಕ್ಸಪ್ಷನಲ್ ಟ್ರೈನ್ಸ್ ಎಂಬಲ್ಲಿ ಕ್ಲಿಕ್ ಮಾಡಿ ಅಲ್ಲಿ ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ ಅವಶ್ಯಕತೆಗೆ ಅನುಗುಣವಾಗಿ ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಸಂಪೂರ್ಣವಾಗಿ ಅಥವಾ ಭಾಗಶಃ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ

ಲೈವ್ ರೈಲು ಚಾಲನೆಯ ಸ್ಥಿತಿಯನ್ನು ಪರಿಶೀಲಿಸಲು ಹೀಗೆ ಮಾಡಿ:

ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.irctchelp.in/live-train-running-status/ ಗೆ ಭೇಟಿ ನೀಡಿ ಅಲ್ಲಿ ತೋರಿಸುವ ಬಾಕ್ಸ್​ನಲ್ಲಿ ನಿಮ್ಮ ರೈಲು ಸಂಖ್ಯೆಯನ್ನು ನಮೂದಿಸಿ. DD-MM-YYYY ಫಾರ್ಮ್ಯಾಟ್‌ನಲ್ಲಿ ದಿನಾಂಕವನ್ನು ಆಯ್ಕೆ ಮಾಡಿ. ಫಲಿತಾಂಶವನ್ನು ಕೋಷ್ಟಕ ರೂಪದಲ್ಲಿ ಪಡೆಯಲು ಸರ್ಚ್​ ಬಟನ್ ಒತ್ತಿರಿ SMS ಮೂಲಕ ಮಾಹಿತಿ ಪರಿಶೀಲಿಸಲು – 139 ಗೆ ‘AD’ ಎಂದು SMS ಕಳುಹಿಸಿ ಭಾರತೀಯ ರೈಲ್ವೆ ವಿಚಾರಣೆ ಸಂಖ್ಯೆಯನ್ನು ಸಂಪರ್ಕಿಸಲು 139 ಕರೆ ಮಾಡಿ

ಇದನ್ನೂ ಓದಿ: Shocking Video: ಹಳಿಯ ಮೇಲಿದ್ದ ವ್ಯಕ್ತಿಯ ಮೇಲೆ ಹಾದುಹೋದ ರೈಲು; ಅಚ್ಚರಿಯ ರೀತಿಯಲ್ಲಿ ಪಾರಾದ ವಿಡಿಯೋ ಇಲ್ಲಿದೆ

ನಿಮ್ಮ ಸ್ಟೇಷನ್ ಕೋಡ್ ಅನ್ನು ಹೇಗೆ ಪರಿಶೀಲಿಸುವುದು?: ಮೊದಲು ರೈಲ್ವೆ ಇಲಾಖೆಯ irctchelp.in ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ರೈಲ್ವೆ ನಿಲ್ದಾಣದ ಕೋಡ್ ಎಂಬ ಹೆಸರಿನ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ರೈಲ್ವೆ ನಿಲ್ದಾಣದ ಕೋಡ್ ಸಿಗುತ್ತದೆ. ಆ ವಿವರಗಳನ್ನು ಸೇವ್ ಮಾಡಿಟ್ಟುಕೊಳ್ಳಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್