1 ವರ್ಷದ ಮಗುವಾಗಿದ್ದಾಗ ಆಗಿದ್ದ ಮದುವೆಯನ್ನು 20 ವರ್ಷದ ಬಳಿಕ ವಜಾಗೊಳಿಸಿದ ನ್ಯಾಯಾಲಯ

ತನಗೆ 1 ವರ್ಷವಿದ್ದಾಗ ಮದುವೆಯಾಗಿದ್ದು, ತನ್ನ ಗಂಡನೆಂದು ಹೇಳಲಾಗುವ ವ್ಯಕ್ತಿಯೊಂದಿಗೆ ತನಗೆ ಬದುಕಲು ಇಷ್ಟವಿಲ್ಲ ಎಂದು ಆ ಯುವತಿ ಎನ್​ಜಿಓವೊಂದನ್ನು ಸಂಪರ್ಕಿಸಿದ್ದರು. ಆ ಎನ್​ಜಿಓ ಸಲಹೆಯಂತೆ ಆಕೆ ಕೋರ್ಟ್​ ಮೆಟ್ಟಿಲೇರಿದ್ದಳು.

1 ವರ್ಷದ ಮಗುವಾಗಿದ್ದಾಗ ಆಗಿದ್ದ ಮದುವೆಯನ್ನು 20 ವರ್ಷದ ಬಳಿಕ ವಜಾಗೊಳಿಸಿದ ನ್ಯಾಯಾಲಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 09, 2022 | 9:14 AM

ಜೋಧ್‌ಪುರ: ಒಂದು ವರ್ಷದ ಮಗುವಾಗಿದ್ದಾಗಲೇ ವಿವಾಹವಾಗಿದ್ದ 21 ವರ್ಷದ ಯುವತಿಯ ಮದುವೆಯನ್ನು 20 ರ್ಷಗಳ ಬಳಿಕ ಇದೀಗ ರಾಜಸ್ಥಾನದ (Rajasthan) ಕೌಟುಂಬಿಕ ನ್ಯಾಯಾಲಯ ಅನೂರ್ಜಿತಗೊಳಿಸಿದೆ. ಮಗುವಿಗೆ 1 ವರ್ಷವಾಗಿದ್ದಾಗ ಆಕೆಯ ಪೋಷಕರು ತೊಟ್ಟಿಲಿನಲ್ಲೇ ಮದುವೆ (Marriage) ಶಾಸ್ತ್ರ ನೆರವೇರಿಸಿದ್ದರು. ಇಷ್ಟವಿಲ್ಲದ ಈ ಬಾಲ್ಯ ವಿವಾಹದಿಂದ ನೊಂದಿದ್ದ ಯುವತಿಗೆ ಈಗ 21 ವರ್ಷವಾಗಿದ್ದು, ತನಗೆ ನ್ಯಾಯ ಕೊಡಿಸಬೇಕೆಂದು ಕೋರ್ಟ್​ ಮೆಟ್ಟಿಲೇರಿದ್ದಳು.

ತನಗೆ 1 ವರ್ಷವಿದ್ದಾಗ ಮದುವೆಯಾಗಿದ್ದು, ತನ್ನ ಗಂಡನೆಂದು ಹೇಳಲಾಗುವ ವ್ಯಕ್ತಿಯೊಂದಿಗೆ ತನಗೆ ಬದುಕಲು ಇಷ್ಟವಿಲ್ಲ ಎಂದು ಆ ಯುವತಿ ಎನ್​ಜಿಓವೊಂದನ್ನು ಸಂಪರ್ಕಿಸಿದ್ದರು. ಆ ಎನ್​ಜಿಓ ಸಲಹೆಯಂತೆ ಆಕೆ ಕೋರ್ಟ್​ ಮೆಟ್ಟಿಲೇರಿದ್ದಳು. ಈ ಬಗ್ಗೆ ಸಾರಥಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೀರ್ತಿ ಭಾರತಿ ಮಾತನಾಡಿ, ರೇಖಾ ಎಂಬ ಯುವತಿಯ ಅಜ್ಜನ ನಿಧನದ ನಂತರ ತಮ್ಮ ಹಳ್ಳಿಯ ಹುಡುಗನೊಂದಿಗೆ ಆಕೆಗೆ ಒಂದು ವರ್ಷವಾಗಿದ್ದಾಗಲೇ ಮದುವೆ ಮಾಡಲಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ: ಲಕ್ನೋ ಹೋಟೆಲ್ ಬೆಂಕಿ ದುರಂತ; ಮದುವೆ ನಿಶ್ಚಯವಾಗಿದ್ದ ಜೋಡಿ ಸಾವಿನಲ್ಲಿ ಒಂದಾದರು!

ಕೆಲವು ವರ್ಷಗಳ ಹಿಂದೆ ‘ಗೌನ’ (ಮದುವೆಯ ನೆರವೇರಿಕೆಗೆ ಸಂಬಂಧಿಸಿದ ಆಚರಣೆ)ಗಾಗಿ ರೇಖಾಳ ಅತ್ತೆಯಂದಿರು ಒತ್ತಡ ಹೇರಿದ್ದರು. ಆಗ ನರ್ಸ್​ ಆಗಲು ತಯಾರಿ ನಡೆಸುತ್ತಿದ್ದ ಆಕೆ ತನ್ನ ಕನಸು ಭಗ್ನಗೊಳ್ಳಲು ಬಯಸಲಿಲ್ಲ. ಹಾಗಾಗಿ ಮದುವೆ ಸಂಪ್ರದಾಯವನ್ನು ನೆರವೇರಿಸಲು ಆಕೆ ನಿರಾಕರಿಸಿದಳು. ಆ ಮದುವೆಯ ಶಾಸ್ತ್ರಗಳಿಗೆ ಒಪ್ಪದ ಆಕೆಯ ಸಂಬಂಧಿಕರು ಜಾತಿ ಪಂಚಾಯತಿ ನಡೆಸಿ ಆಕೆಗೆ 10 ಲಕ್ಷ ರೂ. ದಂಡ ವಿಧಿಸಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಕೀರ್ತಿ ಭಾರತಿ ಹೇಳಿದ್ದಾರೆ.

ಗುರುವಾರ ಕೌಟುಂಬಿಕ ನ್ಯಾಯಾಲಯದ ಅಧ್ಯಕ್ಷ ಪ್ರದೀಪ್ ಕುಮಾರ್ ಮೋದಿ ಅವರು ಈ ವಿಚಿತ್ರ ವಿವಾಹವನ್ನು ರದ್ದುಗೊಳಿಸುವಂತೆ ಆದೇಶಿಸಿದ್ದಾರೆ. ಶತಮಾನದಿಂದ ಬಾಲ್ಯವಿವಾಹದ ಅನಿಷ್ಟ ನಿರ್ಮೂಲನೆ ಆಗಿಲ್ಲ. ಈಗ ಎಲ್ಲರೂ ಒಟ್ಟಾಗಿ ಬಾಲ್ಯವಿವಾಹ ನಿರ್ಮೂಲನೆಗೆ ಪಣ ತೊಡಬೇಕು ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಬಾಲ್ಯ ವಿವಾಹ ಪ್ರಶ್ನಿಸಿದ್ದಕ್ಕೆ ಚಾಕು ಇರಿತ; ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ

ನ್ಯಾಯಾಲಯದ ಆದೇಶದ ನಂತರ ಭಾವುಕರಾದ ರೇಖಾ, ಇಂದು ನನ್ನ ಕನಸು ನನಸಾಗಿದೆ. ಈಗ ನಾನು ನರ್ಸ್ ಆಗುವತ್ತ ಗಮನ ಹರಿಸುವೆ. ಇಂದು ನನ್ನ ಜನ್ಮದಿನ. ನನಗೆ ಇಂದು 21 ವರ್ಷವಾಗಿದೆ. 20 ವರ್ಷ ಹಿಂದಿನ ನನ್ನ ಮದುವೆಯ ರದ್ದುಗೊಳಿಸುವಿಕೆಯು ನನಗೆ ಮತ್ತು ನನ್ನ ಕುಟುಂಬಕ್ಕೆ ಹುಟ್ಟುಹಬ್ಬದ ಉಡುಗೊರೆಯಾಗಿ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್