Queen Elizabeth’s Death: ಎಲೆಜಬೆತ್ ರಾಣಿಯ ಕಿರೀಟದಲ್ಲಿದ್ದ ಭಾರತದ ಕೊಹಿನೂರು ವಜ್ರ ಯಾರಿಗೆ ಸೇರುತ್ತೆ; ಬ್ರಿಟನ್ನಲ್ಲಿ ಇದೀಗ ಚರ್ಚೆಯ ವಿಷಯ
Kohinoor Crown: ರಾಜಕುಮಾರ ಚಾರ್ಲ್ಸ್ ಇದೀಗ ಬ್ರಿಟನ್ನ ರಾಜನಾಗುವ ಸಾಧ್ಯತೆಯಿದೆ. ಕೋಹಿನೂರು ವಜ್ರಕ್ಕೆ ಸಂಬಂಧಿಸಿದಂತೆ ಇದು ಮಹತ್ವದ ವಿದ್ಯಮಾನವಾಗಿದೆ.
ದೆಹಲಿ: ಭಾರತದಿಂದ ಬ್ರಿಟಿಷರು ಲೂಟಿ ಹೊಡೆದು ಕೊಂಡೊಯ್ದ ಹಲವು ಅಮೂಲ್ಯ ವಸ್ತುಗಳ ಪೈಕಿ ಅಗ್ರ ಸ್ಥಾನದಲ್ಲಿರುವ ‘ಕೊಹಿನೂರು ವಜ್ರ’ (Kohinoor Crown) ಇಷ್ಟು ದಿನ ಎಲೆಜಬೆತ್ ರಾಣಿಯ (Queen Elizabeth) ಕಿರೀಟದಲ್ಲಿತ್ತು. ಈ ಅಮೂಲ್ಯ ವಜ್ರವು ಮುಂದಿನ ದಿನಗಳಲ್ಲಿ ಇದು ಯಾರ ಪಾಲಾಗುತ್ತದೆ ಎಂಬ ಚರ್ಚೆ ಇದೀಗ ಬ್ರಿಟನ್ನಲ್ಲಿ (Great Britain) ಆರಂಭವಾಗಿದೆ. 70 ವರ್ಷಗಳ ಸುದೀರ್ಘ ಅವಧಿಗೆ ಬ್ರಿಟನ್ನ ರಾಣಿಯಾಗಿದ್ದ ಎಲೆಜಬೆತ್ (96) ಸೋಮವಾರ ಸಂಜೆ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದರು. ರಾಜಕುಮಾರ ಚಾರ್ಲ್ಸ್ ಇದೀಗ ಬ್ರಿಟನ್ನ ರಾಜನಾಗುವ ಸಾಧ್ಯತೆಯಿದೆ. ಕೋಹಿನೂರು ವಜ್ರಕ್ಕೆ ಸಂಬಂಧಿಸಿದಂತೆ ಇದು ಮಹತ್ವದ ವಿದ್ಯಮಾನವಾಗಿದೆ.
ಈ ವರ್ಷದ ಆರಂಭದಲ್ಲಿ ರಾಜುಕುಮಾರ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲಾ ಅವರನ್ನು ರಾಣಿ ಎಲಿಜಬೆತ್ ‘ಡಚಸ್ ಆಫ್ ಕಾರ್ನ್ವಾಲ್’ ಎಂದು ಘೋಷಿಸಿದ್ದರು. ರಾಜಕಾರು ಚಾರ್ಲ್ಸ್ ಒಂದು ವೇಳೆ ಮಹಾರಾಜನ ಸ್ಥಾನಕ್ಕೆ ಬಂದರೆ ಕ್ಯಾಲಿಲಾ ಅವರು ಸಹಜವಾಗಿಯೇ ‘ಕ್ವೀನ್ ಕಾನ್ಸಾರ್ಟ್’ ಆಗುತ್ತಾರೆ. ಈ ಬೆಳವಣಿಗೆ ನಡೆದಾಗ ಕ್ಯಾಮಿಲಾ ಅವರು ರಾಜಕುಮಾರನ ತಾಯಿಯ ಬಳಿಯಿದ್ದ ಪ್ರಸಿದ್ಧ ಕೋಹಿನೂರು ವಜ್ರವನ್ನು ಪಡೆದುಕೊಳ್ಳುತ್ತಾರೆ.
105.6 ಕ್ಯಾರಟ್ ವಜ್ರವಾಗಿರುವ ಕೊಹಿನೂರ್ಗೆ ಇತಿಹಾಸದ ಪುಟಗಳಲ್ಲಿ ಗಟ್ಟಿ ಸ್ಥಾನವಿದೆ. ಭಾರತದಲ್ಲಿ 14ನೇ ಶತಮಾನದಲ್ಲಿ ಈ ವಜ್ರ ಮೊದಲ ಬಾರಿಗೆ ಪತ್ತೆಯಾಗಿತ್ತು. ನಂತರ ಹಲವು ಶತಮಾನಗಳ ಅವಧಿಯಲ್ಲಿ ರಾಜ-ಮಹಾರಾಜರಿಗೆ ಹಸ್ತಾಂತರವಾಯಿತು. 1849ರಲ್ಲಿ ಬ್ರಿಟಿಷರು ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡ ನಂತರ ವಜ್ರವವನ್ನು ‘ರಾಣಿ ವಿಕ್ಟೋರಿಯಾ’ ಕೈವಶವಾಯಿತು. ಅಂದಿನಿಂದ ಇದು ಬ್ರಿಟಿಷ್ ರಾಜಮನೆತನದ ಕಿರೀಟದಲ್ಲಿ ಸ್ಥಾನ ಪಡೆದಿದೆ. ಕೊಹಿನೂರ್ ವಜ್ರವು ಯಾರಿಗೆ ಸೇರಬೇಕು ಎನ್ನುವ ಬಗ್ಗೆ ಭಾರತವೂ ಸೇರಿದಂತೆ ನಾಲ್ಕು ದೇಶಗಳು ವಾಗ್ವಾದ ನಡೆಸುತ್ತಿವೆ.
ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ ನಿಧನ , ಪ್ರಧಾನಿ ಮೋದಿ ಸಂತಾಪ
ಅಮೂಲ್ಯ ಪ್ಲಾಟಿನಮ್ ಲೋಹದಿಂದ ತಯಾರಿಸಿರುವ ಎಲಿಜೆಬೆತ್ ರಾಣಿಯ (ಮುಂದಿನ ದಿನಗಳಲ್ಲಿ ಇವರು ರಾಣಿ ಮಾತೆ (ಕ್ವೀನ್ ಮದರ್) ಎನಿಸಿಕೊಳ್ಳುತ್ತಾರೆ 1937ರಲ್ಲಿ 6ನೇ ಕಿಂಗ್ ಜಾರ್ಜ್ ಅಧಿಕಾರ ವಹಿಸಿಕೊಂಡ ದಿನ ಈ ಕೋಹಿನೂರ್ ವಜ್ರವನ್ನು ಅಳವಡಿಸಿದ ಹೊಸ ಕಿರೀಟವನ್ನು ರೂಪಿಸಲಾಯಿತು. ಪ್ರಸ್ತುತ ಈ ಕಿರೀಟವನ್ನು ಟವರ್ ಆಫ್ ಲಂಡನ್ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.
ಇದೀಗ ಬ್ರಿಟನ್ನ ರಾಜಕುಮಾರನಾಗಿರುವ ಚಾರ್ಲ್ಸ್ ಮಹಾರಾಜನಾಗಿ ಅಧಿಕಾರ ಸ್ವೀಕರಿಸಿದ ನಂತರ ಕೋಹಿನೂರ್ ವಜ್ರವನ್ನು ಚಾರ್ಲ್ಸ್ ಪತ್ನಿ ಕ್ಯಾಮಿಲಾ ಅವರ ಕಿರೀಟಕ್ಕೆ ತೊಡಿಸಲಾಗುವುದು ಎಂದು ಬ್ರಿಟನ್ನ ದಿನಪತ್ರಿಕೆ ಡೈಲಿಮೇಲ್ ವರದಿ ಮಾಡಿದೆ. ರಾಜಕುಮಾರ ಫಿಲಿಪ್ ಅವರನ್ನು ನವೆಂಬರ್ 20, 1947ರಲ್ಲಿ 2ನೇ ಎಲಿಜೆಬೆತ್ ಮದುವೆಯಾಗಿದ್ದರು. 6ನೇ ಕಿಂಗ್ ಜಾರ್ಜ್ ಮೃತಪಟ್ಟ ನಂತರ, ಫೆಬ್ರುವರಿ 6, 1952ರಲ್ಲಿ ಅವರು ಮಹಾರಾಣಿಯಾಗಿ ಪಟ್ಟಕ್ಕೇರಿದ್ದರು.
ಇದನ್ನೂ ಓದಿ: ಬ್ರಿಟನ್ ಮಹಾರಾಣಿ ಎಲಿಜಬೆತ್ ಮೈಲಿಗಲ್ಲಿಗಳಿವು
Published On - 8:22 am, Fri, 9 September 22