ಇದೇನು ಇಂಗ್ಲೆಂಡ್ ಅಂದುಕೊಂಡಿದ್ದೀರಾ?ರೈತರೊಬ್ಬರು ಭಾಷಣದಲ್ಲಿ ಇಂಗ್ಲಿಷ್ ಪದ ಬಳಸಿದ್ದಕ್ಕೆ ಸಿಟ್ಟಾದ ಬಿಹಾರ ಸಿಎಂ
Nitish Kumar ಏನಿದು ಇಂಗ್ಲೆಂಡಾ? ನೀವು ಬಿಹಾರದಲ್ಲಿ ಕೆಲಸ ಮಾಡುತ್ತಿದ್ದೀರಿ, ಸಾಮಾನ್ಯ ಜನರ ವೃತ್ತಿಯಾದ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದೀರಿ ಎಂದು ಯುವ ರೈತನ ಭಾಷಣ ನಡುವೆ ಮಧ್ಯಪ್ರವೇಶಿಸಿದ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಬಿಹಾರದಲ್ಲಿನ (Bihar) ರೈತರೊಬ್ಬರು ತಮ್ಮ ರೋಚಕ ಜೀವನ ಪಯಣವನ್ನು ವಿವರಿಸುವಾಗ ಹೆಚ್ಚು “ಇಂಗ್ಲಿಷ್ ಪದಗಳನ್ನು” ಬಳಸಿದ್ದಕ್ಕಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಮಂಗಳವಾರ ಛೀಮಾರಿ ಹಾಕಿದ್ದಾರೆ.ರಾಜ್ಯ ಸರ್ಕಾರದ “ನಾಲ್ಕನೇ ಕೃಷಿ ಮಾರ್ಗಸೂಚಿ” ಉದ್ಘಾಟನೆಯನ್ನು ಗುರುತಿಸಲು ಆಯೋಜಿಸಲಾದ ಸಮಾರಂಭ ಬಾಪು ಸಭಾಗರ್ ಸಭಾಂಗಣದಲ್ಲಿ ನಡೆದಿತ್ತು. ಅಲ್ಲಿ ಲಖಿಸರಾಯ್‌ನ ಅಮಿತ್ ಕುಮಾರ್ ಎಂಬವರು ಇಂಗ್ಲೀಷ್ (English)ಮಾತನಾಡಿದ್ದರು. ಪುಣೆಯಲ್ಲಿ ಭರವಸೆಯ ವೃತ್ತಿಜೀವನವನ್ನು ಹೊಂದಿರುವ ಮ್ಯಾನೇಜ್‌ಮೆಂಟ್ ಪದವೀಧರರಾಗಿರುವ ಅಮಿತ್ ಕುಮಾರ್, ಎಲ್ಲವನ್ನೂ ತ್ಯಜಿಸಿ ತಮ್ಮ ತಾಯ್ನಾಡಿನಲ್ಲಿ ಅಣಬೆ ಕೃಷಿಯನ್ನು ಮಾಡಲು ಧೈರ್ಯವನ್ನು ಒಟ್ಟುಗೂಡಿಸುವ ವಾತಾವರಣವನ್ನು ನಿರ್ಮಿಸಿದ್ದಕ್ಕಾಗಿ ಮುಖ್ಯಮಂತ್ರಿಯನ್ನು ಹೊಗಳುವ ಮೂಲಕ ಮಾತು ಆರಂಭಿಸಿದ್ದರು.
ಭಾಷಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಆತನನ್ನು ತಡೆದ ಮುಖ್ಯಮಂತ್ರಿ ಕೂತಲ್ಲಿಂದಲೇ ಹ್ಯಾಂಡ್ ಮೈಕ್ ಹಿಡಿದು ಮಧ್ಯಪ್ರವೇಶಿಸಿದರು. “ಹಲವು ಇಂಗ್ಲಿಷ್ ಪದಗಳನ್ನು ಬಳಸುವುದರ ಅಸಂಗತತೆಯನ್ನು ನಾನು ನಿಮಗೆ ಸೂಚಿಸಲು ಬಯಸುತ್ತೇನೆ. ಏನಿದು ಇಂಗ್ಲೆಂಡಾ? ನೀವು ಬಿಹಾರದಲ್ಲಿ ಕೆಲಸ ಮಾಡುತ್ತಿದ್ದೀರಿ, ಸಾಮಾನ್ಯ ಜನರ ವೃತ್ತಿಯಾದ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದೀರಿ ಎಂದು ನಿತೀಶ್ ಕುಮಾರ್ ಹೇಳಿದಾಗ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು.
#WATCH | “Farming is being done by a common man, you are called here to give suggestions but you are speaking in English. Is it England? This is India & it’s Bihar…”: Bihar CM Nitish Kumar interrupts a farmer while latter was delivering a speech during an event in Patna (21.02) pic.twitter.com/AUhzAlCnfU
— ANI (@ANI) February 21, 2023
ಸಮಾಜವಾದಿ ರಾಮ್ ಮನೋಹರ್ ಲೋಹಿಯಾ ಅವರ ನಿಷ್ಠಾವಂತ ಅನುಯಾಯಿ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಬಳಸಬೇಕಾದ ಹಲವಾರು ಸಾಧನಗಳಲ್ಲಿ ಒಂದಾಗಿ ದೇಶೀಯ ಭಾಷೆಗಳ ಕಾರಣವನ್ನು ಪ್ರತಿಪಾದಿಸಿದರು. ಕೋವಿಡ್ ಪ್ರೇರಿತ ಲಾಕ್‌ಡೌನ್‌ಗಳ ಸಮಯದಲ್ಲಿ ಸ್ಮಾರ್ಟ್‌ಫೋನ್ ಚಟವಾಗುವಂತೆ ಮಾಡಿತು ಇದರಿಂದ ಹಲವರು ತಮ್ಮ ಭಾಷೆಗಳನ್ನು ಮರೆತುಬಿಡುತ್ತಾರೆ ಎಂದಿದ್ದಾರೆ ನಿತೀಶ್ ಕುಮಾರ್.
ಅಮಿತ್ ಕುಮಾರ್ ಮತ್ತೆ ಭಾಷಣ ಪುನಾರಂಭಿಸಿ “ಸರ್ಕಾರಿ ಯೋಜನೆಗಳು” ಎಂಬ ಅಭಿವ್ಯಕ್ತಿಯನ್ನು ಬಳಸಿದ್ದಕ್ಕಾಗಿ ಮತ್ತೆ ಅವರ ಭಾಷಣಕ್ಕೆ ಬ್ರೇಕ್ ಹಾಕಲಾಯಿತು. “ಇದು ಏನು? ನೀವು ಸರ್ಕಾರಿ ಯೋಜನೆ ಎಂದು ಹೇಳಲು ಸಾಧ್ಯವಿಲ್ಲವೇ? ನಾನು ತರಬೇತಿ ಪಡೆದು ಇಂಜಿನಿಯರ್ ಆಗಿದ್ದೇನೆ ಮತ್ತು ನನ್ನ ಬೋಧನಾ ಮಾಧ್ಯಮ ಇಂಗ್ಲಿಷ್ ಆಗಿತ್ತು. ಆದರೆ ಭಾಷೆಯನ್ನು ಶೈಕ್ಷಣಿಕ ಅನ್ವೇಷಣೆಗಳಿಗೆ ಬಳಸುವುದು ಬೇರೆ ವಿಷಯ. ದೈನಂದಿನ ಜೀವನದಲ್ಲಿ ಇಂಗ್ಲಿಷ್ ಬಳಕೆ ಯಾಕೆ ಎಂದು ನಿತೀಶ್ ಕುಮಾರ್ ಕೇಳಿದ್ದಾರೆ. ಲಖಿಸರಾಯ್ ಪ್ರತಿನಿಧಿಯು ಭಾಷಣವನ್ನು ಪುನರಾರಂಭಿಸುವ ಮೊದಲು ಕ್ಷಮಿಸಿ ಎಂದು ಹೇಳಿದರು.
ಆರು ತಿಂಗಳ ಹಿಂದೆ ಜೆಡಿ(ಯು) ನಾಯಕ ಅಧಿಕಾರವನ್ನು ತ್ಯಜಿಸಿದಾಗಿನಿಂದ ಕುಮಾರ್ ಅವರೊಂದಿಗೆ ದೀರ್ಘಕಾಲ ಅಧಿಕಾರವನ್ನು ಹಂಚಿಕೊಂಡಿರುವ ಬಿಜೆಪಿ, ಈ ಸಂದರ್ಭದಲ್ಲಿ ತನ್ನ ಮಾಜಿ ಮಿತ್ರನನ್ನು ಕೆಣಕಲು ಈ ಘಟನೆಯನ್ನು ಬಳಸಿಕೊಂಡಿದೆ.”ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂಗ್ಲಿಷ್ ಭಾಷೆಯ ಬಗ್ಗೆಯೇ ಅಥವಾ ಅದರ ಬಳಕೆ ಬಗ್ಗೆ ಸಿಟ್ಟಾಗಿದ್ದಾರೆಯೇ? ಸಾರ್ವಜನಿಕ ಭಾಷಣದಲ್ಲಿ ಇಂಗ್ಲಿಷ್ ಪದಗಳನ್ನು ಬಳಸುವುದಕ್ಕೆ ಅವರ ಆಕ್ಷೇಪವು ಸಂಪೂರ್ಣವಾಗಿ ಹಾಸ್ಯಾಸ್ಪದವಾಗಿದೆ” ಎಂದು ರಾಜ್ಯ ಬಿಜೆಪಿ ನಾಯಕ, ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಆನಂದ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ