ಜಿ20 ಶೃಂಗಸಭೆಯಲ್ಲಿ ಮೋದಿ- ಜೋ ಬಿಡೆನ್ ಫೋಟೊ ಟ್ವೀಟ್ ಮಾಡಿ ಇದು ನಿಜವೇ? ಎಂದು ಕೇಳಿದ ಸುಬ್ರಮಣಿಯನ್ ಸ್ವಾಮಿ; ನೆಟ್ಟಿಗರ ಉತ್ತರ ಹೀಗಿತ್ತು
ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಜೊ ಬಿಡೆನ್ ಜತೆಗಿರುವ ಫೋಟೊವನ್ನು ಟ್ವೀಟ್ ಮಾಡಿ, ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ ಕೇಳಿದ್ದಾರೆ
ದೆಹಲಿ:ಈ ಫೋಟೋ ಮಾರ್ಫ್ ಮಾಡಿದ್ದೋ ಅಥವಾ ನಿಜವಾದುದೋ? ಖಾಸಗಿ ಮಾತುಕತೆಗಳ ನಡುವೆ ಅಮೆರಿಕದ ಅಧಿಕಾರಿಗಳು ಮೋದಿ ಎಷ್ಟು ಫೇಕ್ ಎಂದು ಬಹಳಷ್ಟು ಜೋಕ್ ಮಾಡುತ್ತಾರೆ. ಆದರೆ ಭಾರತೀಯರಿಗೆ ಇವುಗಳನ್ನು ಕೇಳುವುದು ನೋವಿನ ಸಂಗತಿ. ಈ ಬೂಮರಾಂಗ್‌ಗಳಿಂದಾಗಿಯೇ ಮೋದಿ (Narendra Modi) ಫೋಟೊಗಳಿಗಾಗಿ ಹಂಬಲಿಸುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿಯ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ (Subramanian Swamy) ಟ್ವೀಟ್ ಮಾಡಿದ್ದಾರೆ. ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಜೊ ಬಿಡೆನ್ ಜತೆಗಿರುವ ಫೋಟೊವನ್ನು ಟ್ವೀಟ್ ಮಾಡಿ, ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ ಕೇಳಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಅವರ ಈ ಟ್ವೀಟ್ 1,503 ಬಾರಿ ರೀಟ್ವೀಟ್ ಆಗಿದ್ದು ನೆಟ್ಟಿಗರು ಹಲವು ಚಿತ್ರ, ವಿಡಿಯೊಗಳೊಂದಿಗೆ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.
Is this photo morphed or true? In private, American officials make a lot jokes about how fake Modi is. But for Indians it is painful hearing these. Modi must stop craving for photo ops because these boomerang. pic.twitter.com/vQeI3PPUI4
— Subramanian Swamy (@Swamy39) November 22, 2022
ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಬಿಷ್ಣು ಪ್ರಸಾದ್ ಮಿಶ್ರಾ ಎಂಬ ಟ್ವೀಟಿಗರು ಜೋ ಬಿಡೆನ್ ಮತ್ತು ಮೋದಿ ಪರಸ್ಪರ ಭೇಟಿಯಾದಾಗ ಯಾವ ರೀತಿ ಪ್ರತಿಕ್ರಿಯಿಸಿದರು ಎಂಬುದಕ್ಕೆ ಫೋಟೊವೊಂದನ್ನು ಟ್ವೀಟಿಸಿದ್ದಾರೆ. ಆದಿತ್ಯ ಎಂಬ ಬಳಕೆದಾರರು ಎಎನ್ಐ ಸುದ್ದಿಸಂಸ್ಥೆಯ ಟ್ವೀಟ್ ಲಿಂಕ್ ಶೇರ್ ಮಾಡಿದ್ದು ಇದರಲ್ಲಿ ಭಾರತವು ನಾವು ಹೊಂದಿರುವ ಅತ್ಯಂತ ಮಹತ್ವದ ಸಂಬಂಧವಾಗಿದೆ. ಕಳೆದ ವಾರವಷ್ಟೇ ಪ್ರಧಾನಿ ಮೋದಿಯವರು ಬಾಲಿಯಲ್ಲಿದ್ದಾಗ ಅಧ್ಯಕ್ಷರು ಅವರನ್ನು ಸ್ವಾಗತಿಸಿ, ಭೇಟಿಯಾಗಿರುವುದನ್ನು ನೀವು ನೋಡಿದ್ದೀರಿ. ಆದ್ದರಿಂದ ಇದು ನಾವು ನಿಜವಾಗಿಯೂ ಗೌರವಿಸುವ ಪ್ರಮುಖ ಸಂಬಂಧವಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಹೇಳಿರುವುದು ಈ ಟ್ವೀಟ್ ನಲ್ಲಿದೆ.
ಅಂದಹಾಗೆ ಜಿ 20 ಶೃಂಗಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಫೋಟೊವನ್ನು ಬಿಡೆನ್ ಅವರೇ ಟ್ವೀಟ್ ಮಾಡಿದ್ದರು. ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಮಂಗಳವಾರ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ನಡೆದ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
I met with Prime Minister Modi of India and President Widodo of Indonesia to reaffirm our commitment to the G20 as the premier forum for global economic cooperation.
In the face of global challenges, our coalition continues to demonstrate strength. pic.twitter.com/2Vac0bjUeF
— President Biden (@POTUS) November 16, 2022
ಆಸ್ಟ್ರೇಲಿಯಾ ಮತ್ತು ಜಪಾನ್ ಅನ್ನು ಒಳಗೊಂಡಿರುವ ಕ್ವಾಡ್ ಮತ್ತು ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಒಳಗೊಂಡಿರುವ I2U2 ನಂತಹ ಹೊಸ ಗುಂಪುಗಳಲ್ಲಿ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ನಿಕಟ ಸಹಕಾರದ ಬಗ್ಗೆ ಮೋದಿ ಮತ್ತು ಬಿಡೆನ್ ತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರು ಭಾರತ-ಯುಎಸ್‌ನ ಮುಂದುವರಿದ ಕಾರ್ಯತಂತ್ರದ ಸಹಭಾಗಿತ್ವವನ್ನು ಪರಿಶೀಲಿಸಿದರು ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಶಿಷ್ಟಾಚಾರ ಪಕ್ಕಕ್ಕಿಟ್ಟು ಮೋದಿ ಕೈಕುಲುಕಲು ಹಾತೊರೆದ ಅಮೆರಿಕ ಅಧ್ಯಕ್ಷ ಜೋ ಬಿಡೆನ್!
ಸೋಮವಾರ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಇತರ ನಾಯಕರೊಂದಿಗೆ ಮಾತನಾಡುತ್ತಿದ್ದಾಗ, ಯುಎಸ್ ಅಧ್ಯಕ್ಷ ಜೋ ಬಿಡನ್ ಎಲ್ಲಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿದರು. ಪ್ರಧಾನಿ ಅವರ ಭುಜ ತಟ್ಟಿ ಆತ್ಮೀಯವಾಗಿ ಮಾತನಾಡಿದರು. ಆ ಬಳಿಕ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷರನ್ನು ಅಪ್ಪಿಕೊಂಡು ಹಸ್ತಲಾಘವ ಮಾಡಿದರು. ಅಧ್ಯಕ್ಷ ಜೋ ಬಿಡನ್ ಸೇರಿದಂತೆ ವಿಶ್ವದ ಇತರೆ ಹಲವು ಪ್ರಬಲ ನಾಯಕರು ಸಹ ಪ್ರಧಾನಿ ಮೋದಿ ಅವರನ್ನು ಇದೇ ರೀತಿ ಆತ್ಮೀಯವಾಗಿ ಭೇಟಿಯಾದರು. ಅಲ್ಲಿಗೆ ಬಂದಿದ್ದ ಮುಖಂಡರು ಪ್ರಧಾನಿ ಮೋದಿ ಅವರನ್ನು ಮಾತನಾಡಿಸಲು ಪೈಪೋಟಿ ನಡೆಸಿದಂತಿತ್ತು.
#WATCH | US President Joe Biden walked up to Prime Minister Narendra Modi to greet him ahead of the G7 Summit at Schloss Elmau in Germany.
(Source: Reuters) pic.twitter.com/gkZisfe6sl
— ANI (@ANI) June 27, 2022
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಶಿಷ್ಟಾಚಾರವನ್ನು ಬದಿಗಿಟ್ಟು, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸಭೆಯಲ್ಲಿದ್ದವರನ್ನು ಮೆಚ್ಚಿಸಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡನ್ ನಡುವಿನ ಸೌಹಾರ್ದ ಸಂಭಾಷಣೆಯನ್ನು ಟ್ವಿಟರ್ ವಿಡಿಯೊದಲ್ಲಿ ನೋಡಬಹುದು.
Published On - 2:31 pm, Tue, 22 November 22