AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೇಠಿಯಲ್ಲಿ ಸ್ಪರ್ಧೆ ಎಂದು ಕೇಳಿ ಲೇಹ್‌ನಲ್ಲಿ ರಜಾ ಮೂಡ್​​ನಲ್ಲಿರುವ ರಾಹುಲ್ ಗಾಂಧಿಗೆ ಶಾಕ್ ಆಗಿಲ್ಲವೆ?: ಬಿಜೆಪಿ

ಯಾರು ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು ಆದರೆ ಗೆಲ್ಲುತ್ತೇವೆ ಎಂದು ಹೇಳಬಾರದು ಎಂದು ಬಿಜೆಪಿ ನಾಯಕ ಕೌಶಲ್ ಕಿಶೋರ್ ಹೇಳಿದ್ದಾರೆ. "ಪ್ರಜಾಪ್ರಭುತ್ವದಲ್ಲಿ, ಯಾರು ಎಲ್ಲಿಂದ ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ವಯನಾಡಿನ ಜನರು ಅವರನ್ನು (ರಾಹುಲ್ ಗಾಂಧಿ) ತಿರಸ್ಕರಿಸಿದ್ದಾರೆಂದು ತೋರುತ್ತದೆ, ಅದಕ್ಕಾಗಿಯೇ ಅವರು ಅಮೇಠಿಗೆ ಬರುತ್ತಿದ್ದಾರೆ. ಅವರು ಎಲ್ಲಿಂದಲಾದರೂ ಸ್ಪರ್ಧಿಸಬಹುದು ಆದರೆ ಅವರು ಗೆಲ್ಲುತ್ತಾರೆ ಎಂದು ಅವರು ಹೇಳಬಾರದು ಎಂದು ಕಿಶೋರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಅಮೇಠಿಯಲ್ಲಿ ಸ್ಪರ್ಧೆ ಎಂದು ಕೇಳಿ ಲೇಹ್‌ನಲ್ಲಿ ರಜಾ ಮೂಡ್​​ನಲ್ಲಿರುವ ರಾಹುಲ್ ಗಾಂಧಿಗೆ ಶಾಕ್ ಆಗಿಲ್ಲವೆ?: ಬಿಜೆಪಿ
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on: Aug 18, 2023 | 8:56 PM

ದೆಹಲಿ ಆಗಸ್ಟ್ 18: 2024 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ (Rahul Gandhi) ಅಮೇಠಿಯಿಂದಲೇ (Amethi) ಸ್ಪರ್ಧಿಸುತ್ತಾರೆ ಎಂದು ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ (Ajay Rai) ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ಅಮಿತ್ ಮಾಳವಿಯಾ,ರಾಯ್ ಉತ್ಸಾಹದಿಂದ ಮಾತನಾಡಿದ್ದಾರೆ ಎಂದು ತೋರುತ್ತದೆ ಎಂ ಹೇಳಿದ್ದಾರೆ. ಲೇಹ್‌ನಲ್ಲಿ ರಜಾ ಕಳೆಯುತ್ತಿರುವ ರಾಹುಲ್ ಗಾಂಧಿ ಅವರು ಅಜಯ್ ರಾಯ್ ಅವರ ಘೋಷಣೆಯನ್ನು ಕೇಳಿ ಆಘಾತಕ್ಕೊಳಗಾಗಿದ್ದಾರೆಯೇ ಎಂದು ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ಈಗ ನೀವು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದೀರಿ. ಸೋನಿಯಾ ಗಾಂಧಿ ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ಸಹ ನೀವು ಘೋಷಿಸಬೇಕಾಗಿತ್ತು ಎಂದಿದ್ದಾರೆ ಮಾಳವಿಯಾ.

ಯಾರು ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು ಆದರೆ ಗೆಲ್ಲುತ್ತೇವೆ ಎಂದು ಹೇಳಬಾರದು ಎಂದು ಬಿಜೆಪಿ ನಾಯಕ ಕೌಶಲ್ ಕಿಶೋರ್ ಹೇಳಿದ್ದಾರೆ. “ಪ್ರಜಾಪ್ರಭುತ್ವದಲ್ಲಿ, ಯಾರು ಎಲ್ಲಿಂದ ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ವಯನಾಡಿನ ಜನರು ಅವರನ್ನು (ರಾಹುಲ್ ಗಾಂಧಿ) ತಿರಸ್ಕರಿಸಿದ್ದಾರೆಂದು ತೋರುತ್ತದೆ, ಅದಕ್ಕಾಗಿಯೇ ಅವರು ಅಮೇಠಿಗೆ ಬರುತ್ತಿದ್ದಾರೆ. ಅವರು ಎಲ್ಲಿಂದಲಾದರೂ ಸ್ಪರ್ಧಿಸಬಹುದು ಆದರೆ ಅವರು ಗೆಲ್ಲುತ್ತಾರೆ ಎಂದು ಅವರು ಹೇಳಬಾರದು ಎಂದು ಕಿಶೋರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಅಜಯ್  ರಾಯ್ ಅವರನ್ನು ಯುಪಿ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಗುರುವಾರ ನೇಮಕ ಮಾಡಲಾಗಿದೆ. ಒಂದು ದಿನದ ನಂತರ ಮಾಧ್ಯಮದವರಲ್ಲಿ ಮಾತಾನಾಡಿದ ರಾಯ್, ರಾಹುಲ್ ಗಾಂಧಿ ಅವರು ಅಮೇಠಿಯಿಂದ ಮತ್ತು ಪ್ರಿಯಾಂಕಾ ಗಾಂಧಿ ವಾರಣಾಸಿಯಿಂದ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದಾರೆಯ “ನೋಡಿ, ಅಮೇಥಿಯ ಜನರು ಮತ್ತು ಪಕ್ಷದ ಕಾರ್ಯಕರ್ತರಿಗೆ ಬೇಕಾಗಿರುವುದು ಇದೇ. ರಾಹುಲ್ ಗಾಂಧಿಯವರು ಅಲ್ಲಿ ನಮ್ಮ ತಪ್ಪುಗಳನ್ನು ಸರಿಪಡಿಸಬೇಕು ಮತ್ತು ಅವರು ರಾಹುಲ್ ಗಾಂಧಿಯನ್ನು ಅಮೇಠಿಯಿಂದ ಭಾರಿ ಬಹುಮತದಿಂದ ಗೆಲ್ಲಿಸಬೇಕೆಂದು ಅವರು ಬಯಸುತ್ತಾರೆ” ಎಂದು ಅಜಯ್ ರಾಯ್ ಹೇಳಿದ್ದಾರೆ.

“ಪ್ರಿಯಾಂಕಾ ಗಾಂಧಿ ಅವರು ಎಲ್ಲಿಂದ ಸ್ಪರ್ಧಿಸಬೇಕು ಎಂಬುದು ಅವರಿಗೆ ಬಿಟ್ಟದ್ದು. ಆದರೆ ಪಕ್ಷದ ಎಲ್ಲಾ ಕಾರ್ಯಕರ್ತರು ಅವರನ್ನು ಪೂರ್ಣ ಶಕ್ತಿಯಿಂದ ಬೆಂಬಲಿಸುತ್ತಾರೆ. ಎಲ್ಲಿಂದ ಸ್ಪರ್ಧಿಸಬೇಕು ಎಂಬುದು ಅವರ (ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ) ಅವರ ವೈಯಕ್ತಿಕ ನಿರ್ಧಾರ. ನಾವು ಬೆಂಬಲ ನೀಡುತ್ತೇವೆ ಎಂದು 2014 ಮತ್ತು 2019 ಎರಡರಲ್ಲೂ ವಾರಣಾಸಿಯಿಂದ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದ ಅಜಯ್ ರಾಯ್ ಹೇಳಿದ್ದಾರೆ.

ಇದನ್ನೂ ಓದಿ: ಅಮೇಠಿಯಿಂದಲೇ ರಾಹುಲ್ ಗಾಂಧಿ ಸ್ಪರ್ಧೆ, ಪ್ರಿಯಾಂಕಾ ಎಲ್ಲಿ ಬಯಸುತ್ತಾರೋ ಅಲ್ಲಿ ಕಣಕ್ಕಿಳಿಯಬಹುದು: ಯುಪಿ ಕಾಂಗ್ರೆಸ್ ಮುಖ್ಯಸ್ಥ

2024ರಲ್ಲಿ ವಾರಣಾಸಿಯಿಂದ ಪ್ರಧಾನಿ ಮೋದಿಗೆ ಯಾರು ಸವಾಲು ಹಾಕುತ್ತಾರೆ ಎಂದು ಕೇಳಿದಾಗ ಸದ್ಯಕ್ಕೆ ನಾನು ನಿಮ್ಮ ಮುಂದೆ ನಿಂತಿದ್ದೇನೆ. ಉಳಿದವರ ಬಗ್ಗೆ ಪಕ್ಷದ ಹೈಕಮಾಂಡ್ ಮತ್ತು ಇಂಡಿಯಾ ಮೈತ್ರಿಕೂಟ ನಿರ್ಧರಿಸುತ್ತದೆ ಎಂದು ಅಜಯ್ ರಾಯ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು