ಕಾಂಗ್ರೆಸ್ಗೆ ನಿರಾಳ, ಜಪ್ತಿಯಾಗಿದ್ದ ಬ್ಯಾಂಕ್ ಖಾತೆಯನ್ನು ಮುಕ್ತಗೊಳಿಸಿದ ಆದಾಯ ತೆರಿಗೆ ಇಲಾಖೆ
ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಮುಕ್ತಗೊಳಿಸಿದೆ. ಆದಾಯ ತೆರಿಗೆ ಇಲಾಖೆಯು ನಾಲ್ಕು ಖಾತೆಗಳನ್ನು ಸ್ಥಗಿತಗೊಳಿಸಿದ್ದಾಗಿ ಹೇಳಿತ್ತು.
ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ದೂರುತ್ತಿರುವಾಗಲೇ ಆದಾಯ ತೆರಿಗೆ ಇಲಾಖೆ(IT Department) ಖಾತೆಗಳನ್ನು ಮುಕ್ತಗೊಳಿಸಿದೆ. ಆದಾಯ ತೆರಿಗೆ ಇಲಾಖೆಯು ನಾಲ್ಕು ಖಾತೆಗಳನ್ನು ಸ್ಥಗಿತಗೊಳಿಸಿದ್ದಾಗಿ ಹೇಳಿತ್ತು. ಕಾಂಗ್ರೆಸ್(Congress)ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ, ಯುವ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಜಯ್ ಮಾಕೆನ್(Ajay Maken) ಹೇಳಿದ್ದರು.
ಆದಾಯ ತೆರಿಗೆ ಇಲಾಖೆ (ಐಟಿ) ಈ ಕ್ರಮ ಕೈಗೊಂಡಿದ್ದು, ಆದಾಯದ ಕುರಿತು 2018-19ರಲ್ಲಿ 45 ದಿನಗಳು ತಡವಾಗಿ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸಿದಕ್ಕಾಗಿ ದಂಡ ವಿಧಿಸಲಾಗಿತ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ಅಂತ್ಯಗೊಂಡಿದೆ. ನಾವು ನೀಡುವ ಚೆಕ್‌ಗಳನ್ನು ಬ್ಯಾಂಕ್ ಸ್ವೀಕರಿಸುತ್ತಿಲ್ಲ. ನಾವು ಅದನ್ನು ತನಿಖೆ ಮಾಡಿದಾಗ, ದೇಶದ ಪ್ರಮುಖ ವಿರೋಧ ಪಕ್ಷದ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬುದು ತಿಳಿದುಬಂದಿತ್ತು., ಕಾಂಗ್ರೆಸ್ ಪಕ್ಷದ ಖಾತೆಗಳು ಲಾಕ್ ಆಗಿವೆ, ಪ್ರಜಾಪ್ರಭುತ್ವಕ್ಕೆ ಬೀಗ ಹಾಕಲಾಗಿದೆ ಎಂದು ದೂರಿದ್ದರು.
ಖಾತೆಯನ್ನು ಫ್ರೀಜ್ ಮಾಡಲು ಕಾರಣವನ್ನು ವಿವರಿಸಿದ ಅಜಯ್ ಮಾಕನ್, ನಮ್ಮ ಪಕ್ಷದ ಖಾತೆಯನ್ನು ಫ್ರೀಜ್ ಮಾಡಲು ಕಾರಣ ಹಾಸ್ಯಾಸ್ಪದವಾಗಿದೆ. ನಿನ್ನೆ ಸಂಜೆ ಯುವ ಕಾಂಗ್ರೆಸ್ ಖಾತೆಗಳನ್ನೂ ಸ್ಥಗಿತಗೊಳಿಸಲಾಗಿದೆ. ಕಾಂಗ್ರೆಸ್ 210 ಕೋಟಿ ರೂ. ಹಣ ಪಡೆದಿದೆ, ಈ ಹಣ ಯಾವುದೇ ದೊಡ್ಡ ಉದ್ಯಮಿಗೆ ಸೇರಿಲ್ಲ ಆದರೆ ನಾವು ಸಂಗ್ರಹಿಸಿದ ಆನ್‌ಲೈನ್ ದೇಣಿಗೆಗೆ ಸೇರಿದೆ. ದೇಶದ ಜನರು ಯುಪಿಐ ಮೂಲಕ ನಮಗೆ ಹಣ ನೀಡಿದ್ದಾರೆ.
ಆ ಹಣವನ್ನು ಆದಾಯ ತೆರಿಗೆ ಇಲಾಖೆ ಸ್ಥಗಿತಗೊಳಿಸಿದೆ. ನಮ್ಮ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಇನ್ನೊಂದೆಡೆ ಬಿಜೆಪಿ ಚುನಾವಣಾ ಬಾಂಡ್ ಹಣವನ್ನು ಖರ್ಚು ಮಾಡುತ್ತಿದೆ, ಅದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಒಂದೇ ಪಕ್ಷ ಇರುವುದಾ, ಉಳಿದವರೆಲ್ಲರ ಖಾತೆಗಳು ಸ್ಥಗಿತಗೊಳ್ಳುತ್ತವೆಯೇ, ಉಳಿದ ಪಕ್ಷಗಳಿಗೆ ಅಸ್ತಿತ್ವದಲ್ಲಿರಲು ಹಕ್ಕಿಲ್ಲವೇ ಎಂದು ದೂರಿದ್ದರು.
ಮತ್ತಷ್ಟು ಓದಿ: ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿವೆ, ವಿದ್ಯುತ್ ಬಿಲ್ ಕಟ್ಟಲೂ ಹಣವಿಲ್ಲ ಎಂದ ಕಾಂಗ್ರೆಸ್
ಇದೀಗ ನಮ್ಮಲ್ಲಿ ಖರ್ಚು ಮಾಡಲು, ವಿದ್ಯುತ್ ಬಿಲ್ ಪಾವತಿಸಲು, ನೌಕರರಿಗೆ ಸಂಬಳ ನೀಡಲು ಹಣವಿಲ್ಲ. ನ್ಯಾಯ ಯಾತ್ರೆ ಮಾತ್ರವಲ್ಲದೆ ಎಲ್ಲಾ ರಾಜಕೀಯ ಚಟುವಟಿಕೆಗಳ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Fri, 16 February 24