ವಿಧಾನಸಭೆ ಚುನಾವಣೆ ಸಂದರ್ಭ: ನಟ ಕಮಲ್ ಹಾಸನ್ ಪಕ್ಷದ ಖಜಾಂಚಿ ಮನೆ ಮೇಲೆ ಐಟಿ ದಾಳಿ
ತಮಿಳುನಾಡಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆದಿದೆ. MNM ಪಕ್ಷದ ಖಜಾಂಚಿ ಮನೆ ಮೇಲೆ, ಚಂದ್ರಶೇಖರ್ ಕಚೇರಿ ಐಟಿ ಇಲಾಖೆಯ ದಾಳಿ ನಡೆಸಿದೆ.
ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗಳು ಗರಿಗೆದರಿವೆ. ರಾಜಕೀಯ ಮೇಲಾಟಗಳು ಜೋರಾಗಿಯೇ ನಡೆದಿವೆ. ಈ ಹಿನ್ನೆಲೆಯಲ್ಲಿ ನಟ ಕಮಲ್ ಹಾಸನ್ ಪಕ್ಷದ ಖಜಾಂಚಿ ಮನೆ ಮೇಲೆ ಐಟಿ ದಾಳಿ ನಡೆದಿರುವುದು ಕುತೂಹಲ ಮೂಡಿಸಿದೆ. ತಮಿಳುನಾಡಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆದಿದೆ. MNM ಪಕ್ಷದ ಖಜಾಂಚಿ ಮನೆ ಮೇಲೆ, ಚಂದ್ರಶೇಖರ್ ಕಚೇರಿ ಐಟಿ ಇಲಾಖೆಯ ದಾಳಿ ನಡೆಸಿದೆ. ಐಟಿ ದಾಳಿ ವೇಳೆ ದಾಖಲೆ ರಹಿತ 80 ಕೋಟಿ ರೂಪಾಯಿ ಪತ್ತೆಯಾಗಿದೆ.
ನಟ ಕಮಲ್ ಹಾಸನ್ ಮಕ್ಕಳ್ ನೀಧಿ ಮೈಯಮ್ ಎಂಬ ಪಕ್ಷ ಸ್ಥಾಪಿಸಿದ್ದು, ಇತ್ತೀಚೆಗಷ್ಟೇ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಅವರ ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ನಡೆದಿತ್ತು. ಏಪ್ರಿಲ್ 6 ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಪಕ್ಷದ ಪ್ರಚಾರ ಮಾಡಲು ಕಮಲ್ ಹಾಸನ್ ಭಾನುವಾರ ಕಾಂಚೀಪುರಂಗೆ ಹೋಗಿದ್ದರು. ಅಲ್ಲಿಂದ ಚೆನ್ನೈಗೆ ಮರಳುವ ದಾರಿಯಲ್ಲಿ ಅಭಿಮಾನಿಗಳ ನಡುವೆ ಕಾರು ಸಾಗಿದಾಗ ವ್ಯಕ್ತಿಯೊಬ್ಬ ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದರು.
ಈ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆತ ಕಮಲ್ ಹಾಸನ್ ಅಭಿಮಾನಿ ಎಂದು ಹೇಳಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಆ ವ್ಯಕ್ತಿ ಎಂಎನ್ಎಂ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಎಂಎನ್ಎಂ ಸದಸ್ಯರು ಆರೋಪಿಸಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಇದೊಂದು ದಾಳಿ ಪ್ರಯತ್ನ ಎಂದು ಆರೋಪಿಸಿರುವ ಎಂಎನ್ಎಂ ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದೆ. ಅದಾಗ್ಯೂ, ಆ ವ್ಯಕ್ತಿ ಕಮಲ್ ಹಾಸನ್ ಅವರ ಅಭಿಮಾನಿ. ಕಮಲ್ ಮೇಲೆ ದಾಳಿ ಮಾಡಬೇಕು ಎಂಬ ಯಾವ ಉದ್ದೇಶವೂ ಆತನಿಗೆ ಇರಲಿಲ್ಲ. ಕಮಲ್ ಹಾಸನ್ಗಾಗಲೀ, ಅವರ ಕಾರಿಗಾಗಲೀ ಯಾವುದೇ ಹಾನಿ ಆಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ತಮಿಳುನಾಡು ಚುನಾವಣೆಯಲ್ಲಿ ಕೊಯಂಬತ್ತೂರ್ ದಕ್ಷಿಣ ವಿಧಾನಸಭಾಕ್ಷೇತ್ರದಿಂದ ಕಮಲ್ ಹಾಸನ್ ಸ್ಪರ್ಧೆಗಿಳಿದಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸುತ್ತೇವೆ. ಗ್ರಾಮಗಳನ್ನು ಅಭಿವೃದ್ಧಿ ಪಡಿಸುತ್ತೇವೆ, ಇ-ಆಡಳಿತಕ್ಕೆ ಒತ್ತು ನೀಡುತ್ತೇವೆ ಎಂದು ಕಮಲ್ ಅವರ ಪಕ್ಷ ಮಕ್ಕಳ್ ನೀಧಿ ಮಯ್ಯಂ ಜನರಿಗೆ ಭರವಸೆ ನೀಡಿದೆ. ಗೃಹಿಣಿಯರಿಗೆ ಸಂಬಳ ಮತ್ತು ಎಲ್ಲ ಮನೆಗಳಿಗೆ ಉಚಿತ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯ ನೀಡುವುದಾಗಿ ಪಕ್ಷ ವಾಗ್ದಾನ ನೀಡಿದೆ.
ಇದನ್ನೂ ಓದಿ: Kamal Haasan: ತಮಿಳುನಾಡು ಚುನಾವಣೆ: ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಮಲ್ ಹಾಸನ್ ನಾಮಪತ್ರ
Published On - 3:27 pm, Fri, 19 March 21