Video: ಗಿಡಮೂಲಿಕೆ ತರಲು ಹೋಗಿ, ನದಿ ದಾಟಲಾಗದೆ 7 ತಾಸು ಪರದಾಡಿದ ನಾಲ್ವರನ್ನು ರಕ್ಷಿಸಿದ ಐಟಿಬಿಪಿ

| Updated By: Lakshmi Hegde

Updated on: Sep 02, 2021 | 6:53 PM

12 ಸಾವಿರ ಅಡಿ ಎತ್ತರದಲ್ಲಿ ಸಿಲುಕಿದ್ದವರನ್ನು ಸೆಪ್ಟೆಂಬರ್​ 1ರಂದು ಮಧ್ಯಾಹ್ನ 2ಗಂಟೆಗೆ ಐಟಿಬಿಪಿಯ 14ನೇ ಬೆಟಾಲಿಯನ್​ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

Video: ಗಿಡಮೂಲಿಕೆ ತರಲು ಹೋಗಿ, ನದಿ ದಾಟಲಾಗದೆ 7 ತಾಸು ಪರದಾಡಿದ ನಾಲ್ವರನ್ನು ರಕ್ಷಿಸಿದ ಐಟಿಬಿಪಿ
ಬೆಟ್ಟದಲ್ಲಿ ಸಿಲುಕಿದ್ದವರ ರಕ್ಷಣೆ
Follow us on

ಉತ್ತರಾಖಂಡ್​​ನ ಮಿಲಮ್​​ ಸಮೀಪದಲ್ಲಿ, ಸಮುದ್ರ ಮಟ್ಟದಿಂದ 12 ಸಾವಿರ ಅಡಿ ಎತ್ತರದಲ್ಲಿ ಸಿಲುಕಿದ್ದ ನಾಲ್ವರನ್ನು ಇಂಡೋ-ಟಿಬೆಟಿಯನ್​ ಗಡಿ ಪೊಲೀಸ್ (ITBP) ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ಅದ್ಯಾವುದೋ ಔಷಧೀಯ ಗಿಡಮೂಲಿಕೆ ತರಲೆಂದು ಸಮೀಪದ ಪರ್ವತ ಹತ್ತಿದ್ದರು. ಆದರೆ ಆ ಪರ್ವತದ ಮೂಲಕ ಹರಿಯುವ ನದಿ ಒಮ್ಮೆಲೇ ಉಕ್ಕಿ ಹರಿದಿದ್ದರಿಂದ ಅವರು ಅಲ್ಲಿಯೇ ಸಿಲುಕಿದ್ದರು. ಸುಮಾರು 7 ತಾಸು ಅಲ್ಲಿಯೇ ಇದ್ದ ಆ ನಾಲ್ವರನ್ನೂ ಇದೀಗ ರಕ್ಷಿಸಲಾಗಿದ್ದು, ವಿಡಿಯೋ ವೈರಲ್​ ಆಗಿದೆ.

12 ಸಾವಿರ ಅಡಿ ಎತ್ತರದಲ್ಲಿ ಸಿಲುಕಿದ್ದವರನ್ನು ಸೆಪ್ಟೆಂಬರ್​ 1ರಂದು ಮಧ್ಯಾಹ್ನ 2ಗಂಟೆಗೆ ಐಟಿಬಿಪಿಯ 14ನೇ ಬೆಟಾಲಿಯನ್​ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮೂವರು ಪುರುಷರು ಮತ್ತು ಓರ್ವ ಮಹಿಳೆ ಇದ್ದರು. ಈ ಎಲ್ಲರನ್ನೂ ನದಿಯ ಆಚೆ ಬದಿಯಿಂದ ಈ ಕಡೆಗೆ ಹಗ್ಗದ ಮೂಲಕ ಕರೆತರಲಾಗಿದೆ.

ಗ್ರಾಮಸ್ಥರು ಒಂದಷ್ಟು ಗಿಡಮೂಲಿಕೆಗಳನ್ನು ತರಲು ಹೋಗಿದ್ದರು. ಆದರೆ ವಾಪಸ್​ ಬರುವಾಗ ದಾರಿ ತಪ್ಪಿದ್ದಾರೆ. ಈ ನದಿ ತುಂಬಿ ಹರಿದಿದ್ದರಿಂದ ವಾಪಸ್​ ಬರಲಾಗದೆ ಕಷ್ಟಪಟ್ಟಿದ್ದಾರೆ ಎಂದು ಐಟಿಬಿಪಿ ವಕ್ತಾರ ವಿವೇಕ್​ ಪಾಂಡೆ ತಿಳಿಸಿದ್ದಾರೆ.



ಇದನ್ನೂ ಓದಿ: 
‘ಈಗಾಗಲೇ ಸಾಮಾನ್ಯ ಜನರು ಬಡತನ, ನಿರುದ್ಯೋಗದ ಕಾರಣ 3ನೇ ಅಲೆಯನ್ನು ಅನುಭವಿಸುತ್ತಿದ್ದಾರೆ’: ಸೋನು ಸೂದ್

ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಗೃಹ ಸಚಿವ ಅಮಿತ್ ಶಾ ಘೋಷಣೆ