ಜೈಪುರ: ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬದಲಾದ ಶಿಶುಗಳು ತಾಯಂದಿರ ಮಡಿಲಿಗೆ

| Updated By: ರಶ್ಮಿ ಕಲ್ಲಕಟ್ಟ

Updated on: Sep 12, 2022 | 4:23 PM

ಆಸ್ಪತ್ರೆ ಆಡಳಿತವು ಪೊಲೀಸರ ಸಹಾಯದಿಂದ ಎರಡು ಶಿಶುಗಳ ಜೈವಿಕ ಪೋಷಕರನ್ನು ಖಚಿತಪಡಿಸಲು ಡಿಎನ್ಎ ಪರೀಕ್ಷೆಯನ್ನು ಮಾಡಿತ್ತು

ಜೈಪುರ: ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬದಲಾದ ಶಿಶುಗಳು ತಾಯಂದಿರ ಮಡಿಲಿಗೆ
ಪ್ರಾತಿನಿಧಿಕ ಚಿತ್ರ
Follow us on

ಜೈಪುರದ ಇಬ್ಬರು ತಾಯಂದಿರು ಮಹಿಳಾ ಚಿಕಿತ್ಸಾಲಯದಲ್ಲಿ ಹೆರಿಗೆಯ ಸಮಯದಲ್ಲಿ ಬದಲಾಗಿದ್ದ  ತಮ್ಮ ನವಜಾತ ಶಿಶುಗಳನ್ನು ಭೇಟಿಯಾಗಲು ಸುಮಾರು 10 ದಿನಗಳ ಕಾಲ ಕಾಯಬೇಕಾಯಿತು. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಎರಡೂ ಶಿಶುಗಳು ಪರಸ್ಪರ ಬದಲಾಗಿತ್ತು. ಜೈಪುರದಲ್ಲಿ ಡಿಎನ್ಎ ಪರೀಕ್ಷೆಯ ನಂತರ ಶಿಶುಗಳನ್ನು ತಮ್ಮ ಪೋಷಕರ ಕೈಗೊಪ್ಪಿಸಲಾಗಿದೆ. ಆಸ್ಪತ್ರೆ ಆಡಳಿತವು ಪೊಲೀಸರ ಸಹಾಯದಿಂದ ಎರಡು ಶಿಶುಗಳ ಜೈವಿಕ ಪೋಷಕರನ್ನು ಖಚಿತಪಡಿಸಲು ಡಿಎನ್ಎ ಪರೀಕ್ಷೆಯನ್ನು ಮಾಡಿತ್ತು. ಹೆರಿಗೆಯಾದ ಮೂರು ದಿನಗಳ ನಂತರ ಆಸ್ಪತ್ರೆಯ ಸಿಬ್ಬಂದಿಗೆ ತಮ್ಮ ಪ್ರಮಾದ ಅರಿವಿಗೆ ಬಂದಿತ್ತು. ನಿಶಾ ಗಂಡು ಮಗುವಿಗೆ ಜನ್ಮ ನೀಡಿದ್ದರೆ, ರೇಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಹೆಸರು ಹೇಳಲಿಚ್ಛಿಸದ ಆಸ್ಪತ್ರೆ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರಂಭದಲ್ಲಿ, ಪೋಷಕರು ತಮ್ಮ ಮಕ್ಕಳನ್ನು ಪರಸ್ಪರ ಬದಲಾಯಿಸಿಕೊಂಡಿದ್ದಾರೆ ಎಂದು ನಂಬಲು ನಿರಾಕರಿಸಿದರು.

ಇದರ ನಂತರ, ಆಸ್ಪತ್ರೆಯ ಆಡಳಿತವು ಶಿಶುಗಳ ಜೈವಿಕ ಪೋಷಕರನ್ನು ಗುರುತಿಸಲು ರಕ್ತ ಪರೀಕ್ಷೆ ಮತ್ತು ನಂತರ ಡಿಎನ್ಎ ಪರೀಕ್ಷೆಯನ್ನು ನಡೆಸಿತು. ಡಿಎನ್‌ಎ ವರದಿಯು ನಿರ್ಲಕ್ಷ್ಯವನ್ನು ದೃಢಪಡಿಸಿದ ನಂತರ ಜೈವಿಕ ಪೋಷಕರು ಶಿಶುಗಳನ್ನು ಬದಲಾಯಿಸಲು ಒಪ್ಪಿಕೊಂಡರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Published On - 4:22 pm, Mon, 12 September 22