AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jal Jeevan Mission: ಉತ್ತರ ಪ್ರದೇಶದ ಶೇ.75ರಷ್ಟು ಗ್ರಾಮಗಳಿಗೆ ತಲುಪಿದ ಶುದ್ಧ ಕುಡಿಯುವ ನೀರು

ಉತ್ತರ ಪ್ರದೇಶದ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವಲ್ಲಿ ಜಲ ಜೀವನ್ ಮಿಷನ್(Jal Jeevan Mission) ಭಾರಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿನ ಶೇ.75ರಷ್ಟು ಹಳ್ಳಿಯ ಜನರು ನಲ್ಲಿಯ ನೀರಿನ ಸಂಪರ್ಕವನ್ನು ಪಡೆದಿದ್ದಾರೆ. ಭೂಮಿಯಲ್ಲಿ ಪ್ರತಿ ಜೀವಿಗೂ ನೀರೇ ಮೂಲಾಧಾರ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಗಾಳಿ, ನೀರು, ಬೆಳಕು ಸಕಲ ಜೀವರಾಶಿಗೂ ಅತ್ಯಗತ್ಯವಾದದ್ದು. ಭಾರತವು ಭೌಗೋಳಿಕವಾಗಿ ವೈವಿಧ್ಯದಿಂದ ಕೂಡಿದೆ. ಕೆಲವು ಪ್ರದೇಶಗಳಲ್ಲಿ ನೀರು ಸಮೃದ್ಧವಾಗಿದ್ದರೆ ಇನ್ನೂ ಕೆಲವರೆ ಎಷ್ಟೇ ಸಾವಿರ ಅಡಿ ಬೋರ್​ವೆಲ್ ಕೊರೆದರೂ ನೀರಿನ ಒರೆತೆಯೇ ಇರುವುದಿಲ್ಲ.

Jal Jeevan Mission: ಉತ್ತರ ಪ್ರದೇಶದ ಶೇ.75ರಷ್ಟು ಗ್ರಾಮಗಳಿಗೆ ತಲುಪಿದ ಶುದ್ಧ ಕುಡಿಯುವ ನೀರು
ಜಲಜೀವನ್ ಮಿಷನ್
ನಯನಾ ರಾಜೀವ್
|

Updated on:Jan 18, 2024 | 2:11 PM

Share

ಉತ್ತರ ಪ್ರದೇಶದ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವಲ್ಲಿ ಜಲ ಜೀವನ್ ಮಿಷನ್(Jal Jeevan Mission) ಭಾರಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿನ ಶೇ.75ರಷ್ಟು ಹಳ್ಳಿಯ ಜನರು ನಲ್ಲಿಯ ನೀರಿನ ಸಂಪರ್ಕವನ್ನು ಪಡೆದಿದ್ದಾರೆ. ಭೂಮಿಯಲ್ಲಿ ಪ್ರತಿ ಜೀವಿಗೂ ನೀರೇ ಮೂಲಾಧಾರ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಗಾಳಿ, ನೀರು, ಬೆಳಕು ಸಕಲ ಜೀವರಾಶಿಗೂ ಅತ್ಯಗತ್ಯವಾದದ್ದು. ಭಾರತವು ಭೌಗೋಳಿಕವಾಗಿ ವೈವಿಧ್ಯದಿಂದ ಕೂಡಿದೆ. ಕೆಲವು ಪ್ರದೇಶಗಳಲ್ಲಿ ನೀರು ಸಮೃದ್ಧವಾಗಿದ್ದರೆ ಇನ್ನೂ ಕೆಲವರೆ ಎಷ್ಟೇ ಸಾವಿರ ಅಡಿ ಬೋರ್​ವೆಲ್ ಕೊರೆದರೂ ನೀರಿನ ಒರೆತೆಯೇ ಇರುವುದಿಲ್ಲ.

ಹೀಗಾಗಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ(Narendra Modi) ಪ್ರತಿ ಹಳ್ಳಿಗಳಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಆಶಯದೊಂದಿಗೆ ಜಲ ಜೀವನ್ ಮಿಷನ್ ಆರಂಬಿಸಿದ್ದರು. ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಈ ಸಾಧನೆ ಮಾಡಿದ್ದಕ್ಕೆ ಕೇಂದ್ರ ಹಾಗೂ ರಾಜ್ಯ ಸಚಿವರು ಅಭಿನಂದಿಸಿದ್ದಾರೆ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಜನತೆಯ ಪರವಾಗಿ ಪ್ರಧಾನ ಮಂತ್ರಿಯವರಿಗೆ ಜಲ ಜೀವನ್ ಮಿಷನ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಉಳಿದ ಗ್ರಾಮಗಳಿಗೆ ಆದಷ್ಟು ಬೇಗ ನಲ್ಲಿ ಸಂಪರ್ಕ ಕಲ್ಪಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು  ಸಚಿವರಿಗೆ ಕರೆ ನೀಡಿದ್ದಾರೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇದನ್ನು ಉತ್ತರ ಪ್ರದೇಶದ ದೊಡ್ಡ ಸಾಧನೆ ಎಂದು ಅಭಿನಂದಿಸಿದ್ದಾರೆ. ಉತ್ತರ ಪ್ರದೇಶದ ಜಲಶಕ್ತಿ ಸಚಿವ ಸ್ವತಂತ್ರ ದೇವ್ ಸಿಂಗ್ ಶುಭ ಹಾರೈಸಿದ್ದಾರೆ.

ಮತ್ತಷ್ಟು ಓದಿ: ಮೈಲಿಗಲ್ಲು: ಜಲ ಜೀವನ್ ಮಿಷನ್ ಯೋಜನೆ ಮೂಲಕ 12 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು

19790921 ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ ಉತ್ತರ ಪ್ರದೇಶದ 26348443 ಕುಟುಂಬಗಳಿಗೆ ಶುದ್ಧ ನೀರು ಒದಗಿಸುವ ಗುರಿ ಇದೆ. ಬುಧವಾರದವರೆಗೆ 19790921 ಮನೆಗಳಿಗೆ ನಲ್ಲಿ ಸಂಪರ್ಕ ನೀಡಲಾಗಿದೆ. ಇದು ಗುರಿಯ 75.11 ಪ್ರತಿಶತದಷ್ಟಾಗಿದೆ. ಒಂದು ಕುಟುಂಬವು ಕನಿಷ್ಠ ಆರು ಸದಸ್ಯರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಅಂದಾಜು 118745526 ಗ್ರಾಮಸ್ಥರು ಪ್ರಯೋಜನ ಪಡೆದಿದ್ದಾರೆ.

ಹರ್ ಘರ್ ನಲ್ ಯೋಜನೆ ಈಗಾಗಲೇ ಹಲವು ದಾಖಲೆಗಳನ್ನು ಮುರಿದಿದೆ. 2023-24ರ ಆರ್ಥಿಕ ವರ್ಷದಲ್ಲಿ ಒಂದು ಕೋಟಿಗೂ ಹೆಚ್ಚು ನಲ್ಲಿ ಸಂಪರ್ಕಗಳನ್ನು ಒದಗಿಸುವ ಮೂಲಕ ಉತ್ತರ ಪ್ರದೇಶ ಹೊಸ ದಾಖಲೆಯನ್ನು ನಿರ್ಮಿಸಿದೆ. 85 ಲಕ್ಷ ಟ್ಯಾಪ್ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಉತ್ತರ ಪ್ರದೇಶ ಸಾಧಿಸಿದೆ. ಇದಕ್ಕೆ ಹೋಲಿಸಿದರೆ ಉತ್ತರ ಪ್ರದೇಶ 3 ತಿಂಗಳ ಹಿಂದೆಯಷ್ಟೇ 1 ಕೋಟಿ 1 ಲಕ್ಷದ 10 ಸಾವಿರ ನಲ್ಲಿ ಸಂಪರ್ಕ ನೀಡಿದೆ. ಇದು ಗುರಿಗಿಂತ 119 ಪ್ರತಿಶತ ಹೆಚ್ಚು.

ಮೇ ತಿಂಗಳಲ್ಲಿ 12 ಲಕ್ಷದ 93 ಸಾವಿರ ಟ್ಯಾಪ್ ಸಂಪರ್ಕಗಳನ್ನು ನೀಡಲಾಯಿತು. ಮೇ 2023 ರಲ್ಲಿ ಉತ್ತರ ಪ್ರದೇಶದ 12 ಲಕ್ಷದ 93 ಸಾವಿರ ಟ್ಯಾಪ್ ಸಂಪರ್ಕಗಳನ್ನು ಒದಗಿಸುವ ರಾಜ್ಯವಾಗಿದೆ. ಇಷ್ಟೇ ಅಲ್ಲ, ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ಗರಿಷ್ಠ ನಲ್ಲಿ ಸಂಪರ್ಕಗಳನ್ನು ನೀಡಲಾಗಿದೆ.

ಈ ಪೈಕಿ ಸೀತಾಪುರ ಮೊದಲ ಸ್ಥಾನದಲ್ಲಿತ್ತು. ವರ್ಷದಲ್ಲಿ 3 ಲಕ್ಷ 68 ಸಾವಿರ ನಲ್ಲಿಯ ಸಂಪರ್ಕಗಳನ್ನು ನೀಡಲಾಗಿದ್ದು, ಹರ್ದೋಯಿಯಲ್ಲಿ 3 ಲಕ್ಷ, ಲಖಿಂಪುರ ಖೇರಿಯಲ್ಲಿ 2 ಲಕ್ಷ 93 ಸಾವಿರ, ಪ್ರತಾಪಗಢದಲ್ಲಿ 2 ಲಕ್ಷ 70 ಸಾವಿರ ಮತ್ತು ಜೌನ್‌ಪುರದಲ್ಲಿ 2 ಲಕ್ಷ 49 ಸಾವಿರ ನಲ್ಲಿಯ ಸಂಪರ್ಕ ನೀಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:09 pm, Thu, 18 January 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ