ಜಮ್ಮು ಕಾಶ್ಮೀರ ಚುನಾವಣೆ: 44 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಸ್ವಲ್ಪ ಹೊತ್ತಲ್ಲೇ ಹಿಂಪಡೆದ ಬಿಜೆಪಿ

|

Updated on: Aug 26, 2024 | 12:30 PM

ಮುಂಬರಲಿರುವ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಬಿಡುಗಡೆ ಮಾಡಿದ್ದ 44 ಅಭ್ಯರ್ಥಿಗಳ ಪಟ್ಟಿಯನ್ನು ಹಿಂಪಡೆದಿದೆ. 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷವು ಸೋಮವಾರ ಬಿಡುಗಡೆ ಮಾಡಿತು, ಆದರೆ ಸ್ವಲ್ಪ ಸಮಯದ ನಂತರ ಪಟ್ಟಿಯನ್ನು ಹಿಂಪಡೆಯಲಾಯಿತು.

ಜಮ್ಮು ಕಾಶ್ಮೀರ ಚುನಾವಣೆ: 44 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಸ್ವಲ್ಪ ಹೊತ್ತಲ್ಲೇ ಹಿಂಪಡೆದ ಬಿಜೆಪಿ
ಬಿಜೆಪಿ
Follow us on

ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್​ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಬಿಡುಗಡೆ ಮಾಡಿದ್ದ 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಹಿಂಪಡೆದಿದೆ. 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷವು ಸೋಮವಾರ ಬಿಡುಗಡೆ ಮಾಡಿತ್ತು, ಆದರೆ ಸ್ವಲ್ಪ ಸಮಯದ ನಂತರ ಪಟ್ಟಿಯನ್ನು ಹಿಂಪಡೆಯಲಾಯಿತು.

ಮಾಹಿತಿಯ ಪ್ರಕಾರ, ಈಗ ಕೆಲವು ಬದಲಾವಣೆಗಳನ್ನು ಮಾಡಿದ ನಂತರ ಬಿಜೆಪಿ ಮತ್ತೆ ತನ್ನ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.ಪಕ್ಷವು ಜಮ್ಮು ಪ್ರದೇಶದಿಂದ 37 ಮತ್ತು ಕಾಶ್ಮೀರ ಕಣಿವೆಯಿಂದ ಏಳು ಅಭ್ಯರ್ಥಿಗಳನ್ನು ಹೆಸರಿಸಿತ್ತು.

ಇದರಲ್ಲಿ ಇಬ್ಬರು ಕಾಶ್ಮೀರಿ ಪಂಡಿತರಾದ ವೀರ್ ಸರಾಫ್ ಮತ್ತು ಅಶೋಕ್ ಭಟ್ ಕ್ರಮವಾಗಿ ಶಾಂಗುಸ್ ಮತ್ತು ಹಬ್ಬಕದಲ್ ಕ್ಷೇತ್ರಗಳಿಂದ ನಾಮನಿರ್ದೇಶನಗೊಂಡಿದ್ದರು. ಮೊದಲ ಹಂತದ ಹೆಸರುಗಳನ್ನು ಮಾತ್ರ ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು, ಆದರೆ ಪಕ್ಷವು ತಪ್ಪಾಗಿ ಉಳಿದ ಎರಡು ಹಂತಗಳಿಗೂ ಅಭ್ಯರ್ಥಿಗಳನ್ನು ಸೇರಿಸಿದ್ದರಿಂದ ಪಟ್ಟಿಯನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಓದಿ: ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ: 44 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಈಗ ಹಿಂಪಡೆದಿರುವ ಪಟ್ಟಿಯಲ್ಲಿ, ಮಾಜಿ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಮತ್ತು ಮಾಜಿ ಸಚಿವರಾದ ಸತ್ ಪಾಲ್ ಶರ್ಮಾ, ಪ್ರಿಯಾ ಸೇಥಿ ಮತ್ತು ಶಾಮ್ ಲಾಲ್ ಚೌಧರಿ ಸೇರಿದಂತೆ ಹಿರಿಯ ನಾಯಕರನ್ನು ಪಕ್ಷವು ಕೈಬಿಟ್ಟಿದೆ. ನ್ಯಾಷನಲ್ ಕಾನ್ಫರೆನ್ಸ್ ತೊರೆದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಮಾಜಿ ಸಚಿವ ಮುಷ್ತಾಕ್ ಬುಖಾರಿ ಅವರನ್ನು ಸುರನಕೋಟೆ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ಮೊದಲ ಹಂತದ ಮತದಾನ ಸೆಪ್ಟೆಂಬರ್ 18 ರಂದು, ಎರಡನೇ ಹಂತ ಸೆಪ್ಟೆಂಬರ್ 25 ರಂದು ಮತ್ತು ಅಂತಿಮ ಹಂತದ ಮತದಾನ ಅಕ್ಟೋಬರ್ 1 ರಂದು ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರವು 44.46 ಪುರುಷರು, 42.62 ಮಹಿಳೆಯರು ಮತ್ತು 3.71 ಲಕ್ಷ ಮೊದಲ ಬಾರಿಗೆ ಮತದಾರರು ಸೇರಿದಂತೆ 87.09 ಲಕ್ಷ ಅರ್ಹ ಮತದಾರರನ್ನು ಹೊಂದಿದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ ಪ್ರತಿ ಮತದಾನ ಕೇಂದ್ರದ ಸರಾಸರಿ ಮತದಾರರು 735 ಆಗಿದೆ.

ಈ ಪಟ್ಟಿಯಲ್ಲಿ ರಾಮನಗರದಿಂದ ಸುನಿಲ್ ಭಾರದ್ವಾಜ್, ಬಾನಿಯಿಂದ ಜೀವನ್ ಲಾಲ್ ಮತ್ತು ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು 2014 ರಲ್ಲಿ ಗೆದ್ದಿದ್ದ ಬಿಲ್ಲವರ್‌ನಿಂದ ಸತೀಶ್ ಶರ್ಮಾ ಅವರಂತಹ ಹಲವಾರು ಹೊಸ ಮುಖಗಳನ್ನು ಒಳಗೊಂಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ