Jammu Kashmir: ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡೇಟಿಗೆ ಪೊಲೀಸ್ ಅಧಿಕಾರಿ ಬಲಿ; ಹಲವರಿಗೆ ಗಾಯ
ಭಯೋತ್ಪಾದಕರು ನೇರವಾಗಿ ನಾಕಾ ಪಾರ್ಟಿ ಮೇಲೆ ಗುಂಡು ಹಾರಿಸಿದ್ದಾರೆ. ಇದರ ಪರಿಣಾಮವಾಗಿ ಎಎಸ್‌ಐ ಉಗ್ರರ ಗುಂಡೇಟಿನಿಂದ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಭಯೋತ್ಪಾದಕ ದಾಳಿ (Terrorist Attack) ನಡೆದಿದ್ದು, ಹಲವಾರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಶ್ರೀನಗರದಲ್ಲಿ ಉಗ್ರರು ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಯಾದ ಪೊಲೀಸ್ ಅಧಿಕಾರಿಯನ್ನು ಎಎಸ್‌ಐ ಮುಷ್ತಾಕ್ ಅಹ್ಮದ್ ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಶ್ರೀನಗರದ ಲಾಲ್ ಬಜಾರ್ ಪ್ರದೇಶದ ಜಿಡಿ ಗೋಯೆಂಕಾ ಶಾಲೆಯ ಬಳಿಯ ನಾಕಾ ಪಾರ್ಟಿಯಲ್ಲಿ (Naka Party) ಭಯೋತ್ಪಾದಕ ದಾಳಿ ನಡೆದಿದೆ. ಭಯೋತ್ಪಾದಕರು ನೇರವಾಗಿ ನಾಕಾ ಪಾರ್ಟಿ ಮೇಲೆ ಗುಂಡು ಹಾರಿಸಿದ್ದಾರೆ. ಇದರ ಪರಿಣಾಮವಾಗಿ ಎಎಸ್‌ಐ ಉಗ್ರರ ಗುಂಡೇಟಿನಿಂದ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಗಾಯಗೊಂಡವರಲ್ಲಿ ಹೆಡ್ ಕಾನ್‌ಸ್ಟೆಬಲ್ ಮತ್ತು ಪ್ರದೇಶದ ಎಸ್‌ಪಿಒ ಕೂಡ ಸೇರಿದ್ದಾರೆ. ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಕಾಶ್ಮೀರ ವಲಯ ಪೊಲೀಸರು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಉಗ್ರರ ದಾಳಿಯ ಬಗ್ಗೆ ಸೂಚನೆ ನೀಡಿದ್ದು, ಭಯೋತ್ಪಾದಕರನ್ನು ಬಂಧಿಸಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆ ವಿರುದ್ಧ ಸೇನಾ ಕಾರ್ಯಾಚರಣೆ; ಎನ್ಕೌಂಟರ್ನಲ್ಲಿ ಉಗ್ರನ ಹತ್ಯೆ, ಓರ್ವ ಯೋಧ ಹುತಾತ್ಮ
Jammu and Kashmir | ADGP/IGP Kashmir Zone, Vijay Kumar along with other police personnel pays tribute to ASI Mushtaq Ahmad who lost his life in today’s terrorist attack in Srinagar pic.twitter.com/yXGynTtDGI
— ANI (@ANI) July 12, 2022
ಅವಂತಿಪೋರಾದಲ್ಲಿ ಉಗ್ರರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಕಳೆದ ಕೆಲವು ತಿಂಗಳುಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಕಷ್ಟು ಜನರ ಹತ್ಯೆಗಳು ನಡೆದಿವೆ.
#Heart_breaking visuals coming from Wreathlaying ceremony of ASI Mushtaq Ahmad who got killed in millitant att_ack at lal bazaar Srinagar#Jammu #Kashmir #Srinagar pic.twitter.com/GX9uqVBMFJ
— Nawakadal (@Nawakadal3) July 12, 2022
ಕಾಶ್ಮೀರದಲ್ಲಿ ಉಗ್ರರು ಒಬ್ಬ ಶಿಕ್ಷಕ ಮತ್ತು ಸರ್ಕಾರಿ ಕಚೇರಿಯ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದರು. ಇದು ಆ ಭಾಗದ ಜನರಲ್ಲಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿತ್ತು. ಕಾಶ್ಮೀರಿ ಪಂಡಿತ್ ಸಮುದಾಯದ ಸರ್ಕಾರಿ ಉದ್ಯೋಗಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗಳು ಕೂಡ ನಡೆದಿದ್ದವು.