ಜಮ್ಮು ಮತ್ತು ಕಾಶ್ಮೀರದ ಟಿಕ್ ಟಾಕ್ ಮತ್ತು ಟಿವಿ ತಾರೆ ಭಯೋತ್ಪಾದಕರ ಗುಂಡಿಗೆ ಬಲಿ. 10-ವರ್ಷದ ಸಂಬಂಧಿಗೆ ಗಾಯ

Kashmiri TV Actor Amreen Bhat: ಕಾಶ್ಮೀರ ವಲಯದ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಬುಧವಾರ ಸಾಯಂಕಾಲ ಸುಮಾರು 7:55 ಕ್ಕೆ ಭಯೋತ್ಪಾದಕರು ಅಮ್ರೀನ್ ಭಟ್ ಹೆಸರಿನ ಮಹಿಳೆಯ ಮನೆಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಟಿಕ್ ಟಾಕ್ ಮತ್ತು ಟಿವಿ ತಾರೆ ಭಯೋತ್ಪಾದಕರ ಗುಂಡಿಗೆ ಬಲಿ. 10-ವರ್ಷದ ಸಂಬಂಧಿಗೆ ಗಾಯ
ಅಮ್ರೀನ್ ಭಟ್, ಕಿರುತೆರೆ ಮತ್ತು ಟಿಕ್ ಟಾಕ್ ತಾರೆ
Follow us
TV9 Web
| Updated By: shivaprasad.hs

Updated on:May 26, 2022 | 10:02 AM

Budgam (Jammu and Kshmir): ಪಾಕಿಸ್ತಾನಲ್ಲಿ ಟಿಕ್ ಟಾಕ್ ತಾರೆಯರು ತಮ್ಮ ಸಂವೇದನೆಹೀನ ವಿಡಿಯೋಗಳನ್ನು ಶೂಟ್ ಅಲ್ಲಿನ ಜನರಿಂದ ವ್ಯಾಪಕ ಖಂಡನೆಗೆ ಗುರಿಯಾಗುತ್ತಿದ್ದರೆ ಭಾರತದಲ್ಲಿ ಭಯೋತ್ಪಾದಕರ (Terrorists) ಗುಂಡಿಗೆ ಬಲಿಯಾಗುತ್ತಿದ್ದಾರೆ. ಈ ಫೋಟೋನಲ್ಲಿರುವ ಮಹಿಳೆಯನ್ನು ನೋಡಿ. ಅವರ ಹೆಸರು ಅಮ್ರೀನ್ ಭಟ್ (Amreen Bhat), ಹೆಸರಿಂದಲೇ ಗೊತ್ತು ಮಾಡಿಕೊಳ್ಳಬಹುದು ಅವರು ಜಮ್ಮು ಮತ್ತು ಕಾಶ್ಮೀರದವರು ಅನ್ನೋದು. 35-ವರ್ಷ ವಯಸ್ಸಿನ ಅಮ್ರೀನ್ ಅವರನ್ನು ಬುಧವಾರದದಂದು ಕಾಶ್ಮೀರದ ಬುದ್ಗಾಮ್ (Budgam) ಜಿಲ್ಲೆಯಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ಅವರ ಮೇಲೆ ಹಲ್ಲೆ ನಡೆದಾಗ ಜೊತೆಗಿದ್ದ 10-ವರ್ಷದ ಅಣ್ಣನ ಮಗ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕಾಶ್ಮೀರ ವಲಯದ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಬುಧವಾರ ಸಾಯಂಕಾಲ ಸುಮಾರು 7:55 ಕ್ಕೆ ಭಯೋತ್ಪಾದಕರು ಅಮ್ರೀನ್ ಭಟ್ ಹೆಸರಿನ ಮಹಿಳೆಯ ಮನೆಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತಾದರೂ ವೈದ್ಯರು ಅವರು ಮರಣಿಸಿರುವೆರೆಂದು ಘೋಷಿಸಿದರು.

ಆಗಲೇ ಹೇಳಿದ ಹಾಗೆ ಅವರು ಟಿಕ್ ಟಾಕ್ ಮತ್ತು ಕಿರುತೆರೆ ಕಲಾವಿದೆಯಾಗಿದ್ದರು ಹಾಗೂ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದರು.

ಅಮ್ರೀನ್ ಅವರ ಸಂಬಂಧಿ 10-ವರ್ಷದ ಫರ್ಹಾನ್ ಜುಬೇರ್ ಸಹ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದಾಳಿ ನಡೆದ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ ಮತ್ತು ಉಗ್ರರನ್ನು ಹಿಡಿಯಲು ಜಾಲ ಹಬ್ಬಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಯೋತ್ಪಾದಕರು ನಡೆಸಿರುವ ಎರಡನೇ ದಾಳಿ ಇದಾಗಿದೆ. ಮಂಗಳವಾರದಂದು ಶ್ರೀನಗರದ ಹೊರಭಾಗದಲ್ಲಿ ಭಯೋತ್ಪಾದಕರ ಒಬ್ಬ ಪೊಲೀಸ್ ಪೇದೆ ಮೇಲೆ ಗುಂಡಿನ ದಾಳಿ ನಡೆಸಿ ಕೊಂದು ಹಾಕಿದ್ದರು. ಅವರನ್ನು ಉಳಿಸಲು ಹೋದ ಅವರ 7-ವರ್ಷದ ಮಗಳು ಕೂಡ ದಾಳಿಯಲ್ಇ ಗಾಯಗೊಂಡಿದ್ದಾಳೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:52 pm, Wed, 25 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ