‘ಜೂ.24ರ ಸರ್ವ ಪಕ್ಷಗಳ ಸಭೆಯ ಅಜೆಂಡಾ ತಿಳಿಸದೆ ಆಹ್ವಾನ ನೀಡಲಾಗಿದೆ..ನಾವೂ ಪಾಲ್ಗೊಳ್ಳುತ್ತೇವೆ’- ಕಾಂಗ್ರೆಸ್​

| Updated By: Lakshmi Hegde

Updated on: Jun 23, 2021 | 1:28 PM

ಪ್ರಧಾನಿ ಮೋದಿಯವರು ಸರ್ವಪಕ್ಷಗಳ ಸಭೆ ಕರೆದಿರುವ ಬಗ್ಗೆ, ಅದರಲ್ಲಿ ಕಾಂಗ್ರೆಸ್​​ನಿಂದ ಯಾರು ಭಾಗವಹಿಸಬೇಕು ಎಂಬುದನ್ನು ಚರ್ಚಿಸಲು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು ಎಂದೂ ಮಿರ್​ ಮಾಹಿತಿ ನೀಡಿದ್ದಾರೆ.

‘ಜೂ.24ರ ಸರ್ವ ಪಕ್ಷಗಳ ಸಭೆಯ ಅಜೆಂಡಾ ತಿಳಿಸದೆ ಆಹ್ವಾನ ನೀಡಲಾಗಿದೆ..ನಾವೂ ಪಾಲ್ಗೊಳ್ಳುತ್ತೇವೆ’- ಕಾಂಗ್ರೆಸ್​
ಗುಲಾಂ ಅಹ್ಮದ್​ ಮಿರ್​
Follow us on

ದೆಹಲಿ: ಜಮ್ಮು-ಕಾಶ್ಮೀರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಕರೆದ ಸಭೆಯಲ್ಲಿ ಖಂಡಿತ ಪಾಲ್ಗೊಳ್ಳುವುದಾಗಿ ಕಾಂಗ್ರೆಸ್ ಪಕ್ಷ ಹೇಳಿದೆ. ಜೂ.24ರಂದು ಈ ಸಭೆ ನಡೆಯಲಿದ್ದು ಕಾಂಗ್ರೆಸ್​ ಸೇರಿ ಪ್ರಮುಖ ಪಕ್ಷಗಳ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಗುಪ್ಕಾರ್​ ಮೈತ್ರಿಕೂಟ ಕೂಡ ಈ ಸಭೆಯಲ್ಲಿ ಪಾಲ್ಗೊಂಡು, ಮೋದಿಯವರೊಂದಿಗೆ ಚರ್ಚೆ ನಡೆಸುವುದಾಗಿ ನಿನ್ನೆ ಹೇಳಿತ್ತು. ಕಳೆದ ವರ್ಷ ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮತ್ತು ಆರ್ಟಿಕಲ್​ 35ಎ ಯನ್ನು ರದ್ದುಗೊಳಿಸಿದ ನಂತರ ಅಲ್ಲಿ ಉದ್ವಿಘ್ನತೆ ಎದುರಾಗಿದೆ. ಮತ್ತೆ ಜಮ್ಮು-ಕಾಶ್ಮೀರಕ್ಕೆ ರಾಜ್ಯತ್ವ ಸ್ಥಾನಮಾನ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಅದರಲ್ಲೂ ಬರುವ ವರ್ಷ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ತನ್ನಿಮಿತ್ತ ಕ್ಷೇತ್ರಗಳ ರಚನೆ ಸೇರಿ ಮತ್ತಿತರ ವಿಚಾರಗಳನ್ನು ಜೂ.24ರ ಸಭೆಯಲ್ಲಿ ಪ್ರಧಾನಿ ಮೋದಿ ಎಲ್ಲ ಪ್ರಮುಖ ಪಕ್ಷಗಳೊಟ್ಟಿಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಕಾಂಗ್ರೆಸ್​ ಪಾಲ್ಗೊಳ್ಳುತ್ತದೆ ಎಂದು ಜಮ್ಮು-ಕಾಶ್ಮೀರದ ಕಾಂಗ್ರೆಸ್ ವಕ್ತಾರ ರವೀಂದರ್​ ಶರ್ಮಾ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಮ್ಮು-ಕಾಶ್ಮೀರ ಕಾಂಗ್ರೆಸ್​ ಮುಖ್ಯಸ್ಥ ಗುಲಾಮ್​ ಅಹ್ಮದ್​ ಮಿರ್​, ನಮಗೆ ಅಧಿಕೃತ ಆಮಂತ್ರಣ ಬಂದಿದೆ. ಆದರೆ ಅದರಲ್ಲಿ ಮೀಟಿಂಗ್​ನ ಅಜೆಂಡಾವನ್ನು ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್​​ನಿಂದ ಜಮ್ಮುಕಾಶ್ಮೀರ ಕಾಂಗ್ರೆಸ್​ ಅಧ್ಯಕ್ಷನಾಗಿ ನಾನು, ಮಾಜಿ ಮುಖ್ಯಮಂತ್ರಿ ಗುಲಾಂ ನಭಿ ಆಜಾದ್​ ಮತ್ತು ಮಾಜಿ ಉಪಮುಖ್ಯಮಂತ್ರಿ ತಾರಾ ಚಾಂದ್​ ಭಾಗವಹಿಸುತ್ತೇವೆ ಎಂದೂ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು ಸರ್ವಪಕ್ಷಗಳ ಸಭೆ ಕರೆದಿರುವ ಬಗ್ಗೆ, ಅದರಲ್ಲಿ ಕಾಂಗ್ರೆಸ್​​ನಿಂದ ಯಾರು ಭಾಗವಹಿಸಬೇಕು ಎಂಬುದನ್ನು ಚರ್ಚಿಸಲು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು ಎಂದೂ ಮಿರ್​ ಮಾಹಿತಿ ನೀಡಿದ್ದಾರೆ. ಜೂ.24ರಂದು ದೆಹಲಿಯಲ್ಲಿ ಜಮ್ಮು-ಕಾಶ್ಮೀರ ಸರ್ವಪಕ್ಷಗಳ ಸಭೆ ನಡೆಯಲಿದ್ದು, ಒಟ್ಟು 14 ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮೋದಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: Viral Video: ಮೀನಿನ ಹೊಟ್ಟೆಯೊಳಗಿತ್ತು ವಿಸ್ಕಿ ಬಾಟಲ್​​! ವಿಡಿಯೋ ನೋಡಿ