Jammu-Kashmir: ಸೋನಾಮಾರ್ಗ್‌ನಲ್ಲಿ ಹಿಮದ ಬಿರುಗಾಳಿಗೆ ಮೂವರು ಕಾರ್ಮಿಕರು ಹಿಮ ಸಮಾಧಿ, ಒಂದು ಸಾವು
ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದ ಬಾಲ್ಟಾಲ್ ಮತ್ತು ಝೋಜಿಲಾ ಬಳಿ ಹಿಮಕುಸಿತದಿಂದ ಮೂವರು ಕಾರ್ಮಿಕರು ಹಿಮದಲ್ಲಿ ಸಮಾಧಿಯಾಗಿದ್ದಾರೆ. ಇದೀಗ ಈ ಮೂವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಗಂದರ್‌ಬಲ್: ಜಮ್ಮು ಮತ್ತು ಕಾಶ್ಮೀರದ (Jammu-Kashmir) ಗಂದರ್‌ಬಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದ ಬಾಲ್ಟಾಲ್ ಮತ್ತು ಝೋಜಿಲಾ ಬಳಿ ಹಿಮಕುಸಿತದಿಂದ ಮೂವರು ಕಾರ್ಮಿಕರು ಹಿಮದಲ್ಲಿ ಸಮಾಧಿಯಾಗಿದ್ದಾರೆ. ಇದೀಗ ಈ ಮೂವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹಿಮದ ಒಳಗಿದ್ದ ಒಬ್ಬ ಕಾರ್ಮಿಕನ ಮೃತ ದೇಹವನ್ನು ಹೊರ ತೆಗೆಯಲಾಗಿದೆ. ಅವರ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ಉಳಿದ ಇಬ್ಬರು ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನೀಲ್‌ಗ್ರಾತ್‌ನ ಸರ್ಬಲ್ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೈದರಾಬಾದ್‌ನ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ಕಂಪನಿಯು ಈ ಪ್ರದೇಶದಲ್ಲಿ ಝೋಜಿಲಾ ಸುರಂಗದ ಕೆಲಸ ಮಾಡುತ್ತಿದ್ದು. ಮೂವರು ಕಾರ್ಮಿಕರಲ್ಲಿ ಒಬ್ಬರ ಮೃತದೇಹವನ್ನು ಹಿಮಕುಸಿತ ಸ್ಥಳದಿಂದ ಹೊರತೆಗೆಯಲಾಗಿದ್ದು, ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸ್, ಎಸ್‌ಡಿಆರ್‌ಎಫ್, ಸೇನೆ, ಬೀಕನ್‌ಗಳು ಮತ್ತು ಎಂಇಐಎಲ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಿಮಪಾತ ಸಂಭವಿಸಿದ ಸ್ಥಳದಲ್ಲಿ ಹಿಮದಿಂದ ತುಂಬಿರುವ ಪ್ರದೇಶವನ್ನು ತೆರವುಗೊಳಿಸಲಾಗುತ್ತಿದೆ.
ಇದನ್ನು ಓದಿ:Jammu-Kashmir: ತವಾಂಗ್ ಮುಖಾಮುಖಿ ಬಳಿಕ ಭಾರತ-ಪಾಕ್ ಗಡಿಯಲ್ಲಿ ಗಸ್ತು ಹೆಚ್ಚಿಸಿದ ಭದ್ರತಾ ಪಡೆ
ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ತಂಡಗಳು ಸಹ ಸ್ಥಳದಲ್ಲಿವೆ. ಸಾಮಾನ್ಯವಾಗಿ ಬಿಳಿ ಹಿಮದಿಂದ ಆವೃತವಾದ ಪರ್ವತಗಳು ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ. ಆದರೆ ಕೆಲವೊಮ್ಮೆ ಇಂತಹ ಅಪಾಯಕಾರಿ ಘಟನೆಗಳು ನಡೆಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Thu, 12 January 23