ಸುಳ್ಳು ಸುದ್ದಿ ಹರಡುವ 6 ಯುಟ್ಯೂಬ್ ಚಾನೆಲ್‌ಗಳನ್ನು ಪತ್ತೆ ಮಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ
ಸಚಿವಾಲಯದ ಪ್ರಕಾರ, ಈ ಚಾನೆಲ್‌ಗಳು ಸುಪ್ರೀಂಕೋರ್ಟ್ ಮತ್ತು ಸಂಸತ್ತಿನ ಕಲಾಪಗಳು, ಚುನಾವಣೆಗಳು, ಕೇಂದ್ರ ಸರ್ಕಾರದ ಇತರವುಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತವೆ. ಉದಾಹರಣೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ನಿಷೇಧ, ಭಾರತದ ರಾಷ್ಟ್ರಪತಿ ಅಥವಾ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ತಪ್ಪಾದ ಹೇಳಿಕೆಗಳನ್ನು ಪ್ರಸಾರ ಮಾಡಿವೆ
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸತ್ಯ-ಪರಿಶೀಲನಾ ಘಟಕವು (fact-check unit) ದೇಶದಲ್ಲಿ ಸುಳ್ಳು ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಆರು ಯೂಟ್ಯೂಬ್ ಚಾನೆಲ್‌ಗಳನ್ನು (Youtube) ಗುರುವಾರ ಪತ್ತೆ ಹಚ್ಚಿದೆ. PIB (ಪ್ರೆಸ್ ಇನ್ಫರ್ಮೇಷನ್ ಬ್ಯೂರೋ) ಫ್ಯಾಕ್ಟ್-ಚೆಕ್ ಯುನಿಟ್ (FCU) ಈ ಚಾನೆಲ್‌ಗಳು ನಕಲಿ ಸುದ್ದಿಗಳನ್ನು ಹರಡುತ್ತಿವೆ ಎಂಬುದನ್ನು ಸಾಬೀತುಪಡಿಸಲು ಹಲವಾರು ಪುರಾವೆಗಳನ್ನು ಟ್ವೀಟ್ ಮಾಡಿವೆ. ಆರು ಯೂಟ್ಯೂಬ್ ಚಾನೆಲ್‌ಗಳು ಸಂಘಟಿತ ತಪ್ಪು ಮಾಹಿತಿ ನೆಟ್‌ವರ್ಕ್‌ನ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಇವು ಸುಮಾರು 20 ಲಕ್ಷ ಚಂದಾದಾರರನ್ನು ಹೊಂದಿದೆ ಮತ್ತು ಅವರ ವೀಡಿಯೊಗಳನ್ನು 51 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಎಂದು ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಚಾನೆಲ್‌ಗಳ ಪಟ್ಟಿ ಇಲ್ಲಿದೆ
ಚಾನೆಲ್ ಚಂದಾದಾರರು ನೇಷನ್ ಟಿವಿ 5.57 ಲಕ್ಷ ಸಂವಾದ್ ಟಿವಿ 10.9 ಲಕ್ಷ ಸರೋಕರ್ ಭಾರತ್ 21.1 ಸಾವಿರ ನೇಷನ್ 24 25.4 ಸಾವಿರ ಸ್ವರ್ಣಿಂ ಭಾರತ್ 6.07 ಸಾವಿರ ಸಂವಾದ್ ಸಮಾಚಾರ 3.48 ಲಕ್ಷ
A #YouTube channel ‘Nation Tv’ with over 550K subscribers & over 21 crore views has been found to be propagating #FakeNews about the President, Union Ministers & the Election Commission of India. #PIBFactCheck found almost all of its content to be fake.
Here’s a thread… pic.twitter.com/GjyJo9xHme
— PIB Fact Check (@PIBFactCheck) January 12, 2023
ಸಚಿವಾಲಯದ ಪ್ರಕಾರ, ಈ ಚಾನೆಲ್‌ಗಳು ಸುಪ್ರೀಂಕೋರ್ಟ್ ಮತ್ತು ಸಂಸತ್ತಿನ ಕಲಾಪಗಳು, ಚುನಾವಣೆಗಳು, ಕೇಂದ್ರ ಸರ್ಕಾರದ ಇತರವುಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತವೆ. ಉದಾಹರಣೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ನಿಷೇಧ, ಭಾರತದ ರಾಷ್ಟ್ರಪತಿ ಅಥವಾ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ತಪ್ಪಾದ ಹೇಳಿಕೆಗಳನ್ನು ಪ್ರಸಾರ ಮಾಡಿವೆ. “ಚಾನೆಲ್‌ಗಳು ನಕಲಿ, ಕ್ಲಿಕ್‌ಬೈಟ್ , ಥಂಬ್‌ನೇಲ್‌ಗಳು ಮತ್ತು ಟಿವಿ ಚಾನೆಲ್‌ಗಳ ಟೆಲಿವಿಷನ್ ನ್ಯೂಸ್ ಆಂಕರ್‌ಗಳ ಚಿತ್ರಗಳನ್ನು ವೀಕ್ಷಕರನ್ನು ತಪ್ಪುದಾರಿಗೆಳೆಯಲು ಸುದ್ದಿಗಳನ್ನು ಬಳಸುತ್ತವೆ. ಈ ಮೂಲಕ ಅವರು ಹಣಗಳಿಸುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಈ ಹಿಂದೆ, ಸಚಿವಾಲಯವು ಇಂಥದ್ದೇ ಕ್ರಮವನ್ನು ಕೈಗೊಂಡಿದ್ದು “ನಕಲಿ ಸುದ್ದಿಗಳನ್ನು ಹರಡುವ” ಮೂರು ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ