ಹದಿನಾರು ಯಂತ್ರಗಳ ಬಳಸಿ ಸ್ವಚ್ಛತಾ ಅಭಿಯಾನ ಶುರು, ಮತ್ತಷ್ಟು ಕಣ್ಮನ ತಣಿಸಲಿದೆ ಆಕರ್ಷಕ ದಾಲ್ ಸರೋವರ! ನೀವೂ ನೋಡಿ

ಕೊರೊನಾ ವೈರಸ್ನಿಂದ ದಾಲ್ ಸರೋವರದ ಸ್ವಚ್ಛತಾ ಕಾರ್ಯ ಕಳೆದ ವರ್ಷ ನಿಂತು ಹೋಗಿತ್ತು. ಸರೋವರಗಳು ಮತ್ತು ಜಲಮಾರ್ಗಗಳ ಅಭಿವೃದ್ಧಿ ಪ್ರಾಧಿಕಾರ (LAWDA) ದಾಲ್ ಸರೋವರವನ್ನು ಸ್ವಚ್ಛಗೊಳಿಸಲು ಮುಂದಾಗಿದೆ.

ಹದಿನಾರು ಯಂತ್ರಗಳ ಬಳಸಿ ಸ್ವಚ್ಛತಾ ಅಭಿಯಾನ ಶುರು, ಮತ್ತಷ್ಟು ಕಣ್ಮನ ತಣಿಸಲಿದೆ ಆಕರ್ಷಕ ದಾಲ್ ಸರೋವರ! ನೀವೂ ನೋಡಿ
ದಾಲ್ ಸರೋವರದಲ್ಲಿ ಸ್ವಚ್ಛತಾ ಅಭಿಯಾನ ಶುರು
Edited By: ಆಯೇಷಾ ಬಾನು

Updated on: Sep 30, 2021 | 9:36 AM

ಕಾಶ್ಮೀರದ ಎರಡನೇ ದೊಡ್ಡ ಸರೋವರ ಹಾಗೂ ಶ್ರೀನಗರದ ರತ್ನ ಎಂದು ಖ್ಯಾತಿ ಪಡೆದಿರುವ ದಾಲ್ ಸರೋವರದಲ್ಲಿ(Dal Lake) ಸ್ವಚ್ಛತಾ ಅಭಿಯಾನ ಭರದಿಂದ ಸಾಗಿದೆ. ದಾಲ್ ಸರೋವರವು ಅತ್ಯಂತ ಜನಪ್ರಿಯ ಮತ್ತು ಪಾರಂಪರಿಕ ಜಲಮೂಲಗಳಲ್ಲಿ ಒಂದಾಗಿದೆ. ಈ ಪ್ರಸಿದ್ಧ ಪ್ರವಾಸಿ ತಾಣ ಪ್ರಪಂಚದಾದ್ಯಂತ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಆದರೆ ಸರೋವರದಲ್ಲಿ ಬೆಳೆದಿರುವ ಕೊಚ್ಚೆ ಗಿಡಗಳು ಮತ್ತು ಲಿಲ್ಲಿ ಎಲೆಗಳು ಸರೋವರದ ಸೌಂದರ್ಯವನ್ನೇ ಹಾಳು ಮಾಡಿವೆ. ಹೀಗಾಗಿ ಜಲಮಾರ್ಗಗಳ ಅಭಿವೃದ್ಧಿ ಪ್ರಾಧಿಕಾರ (LAWDA) ದಾಲ್ ಸರೋವರವನ್ನು ಸ್ವಚ್ಛಗೊಳಿಸಲು ಮುಂದಾಗಿದೆ.

ಕೊರೊನಾ ವೈರಸ್ನಿಂದ ದಾಲ್ ಸರೋವರದ ಸ್ವಚ್ಛತಾ ಕಾರ್ಯ ಕಳೆದ ವರ್ಷ ನಿಂತು ಹೋಗಿತ್ತು. ಸರೋವರಗಳು ಮತ್ತು ಜಲಮಾರ್ಗಗಳ ಅಭಿವೃದ್ಧಿ ಪ್ರಾಧಿಕಾರ (LAWDA) ದಾಲ್ ಸರೋವರವನ್ನು ಸ್ವಚ್ಛಗೊಳಿಸಲು ಮುಂದಾಗಿದೆ. ಈ ಬಗ್ಗೆ ಮಾತನಾಡಿದ LAWDAಯ ಉಪಾಧ್ಯಕ್ಷರಾದ ಡಾ.ಬಶೀರ್ ಅಹ್ಮದ್ ಭಟ್, “ಇದು ಸವಾಲಿನ ಕೆಲಸವಾಗಿದೆ. ನಾವು ಇಲ್ಲಿ ಬೆಳೆದಿರುವ ಗಿಡ-ಎಲೆಗಳನ್ನು ತೆಗೆಯಲು 15-16 ಕ್ಕೂ ಹೆಚ್ಚು ಯಂತ್ರಗಳನ್ನು ಬಳಸುತ್ತಿದ್ದೇವೆ. ದಾಲ್ ಸರೋವರವು ಶ್ರೀನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಆಕರ್ಷಣೀಯ ಸ್ಥಳವಾಗಿ ಉಳಿದಿದೆ ಮತ್ತು ಸ್ಥಳೀಯರ ಜೀವನೋಪಾಯಕ್ಕೆ ಕೊಡುಗೆ ನೀಡುತ್ತಿದೆ ಎಂದರು.

Dal Lake

ದಾಲ್ ಸರೋವರ

ಮಹಾಮಾರಿ ಕೊರೊನಾದಿಂದಾಗಿ ಎರಡು ವರ್ಷಗಳಿಂದ ದಾಲ್ ಸರೋವರದ ಶುಚಿಗೊಳಿಸುವಿಕೆ ನಡೆಯುತ್ತಿರಲಿಲ್ಲ. ಅದೃಷ್ಟವಶಾತ್, ಈಗ ಇದನ್ನು ಆರಂಭಿಸಲಾಗಿದೆ. ಯಂತ್ರಗಳನ್ನು ಬಳಸಿ ಮತ್ತು ಕೈಯಾರೆ ಸ್ವಚ್ಛಗೊಳಿಸಲಾಗುತ್ತಿದೆ. ಸರೋವರ ತನ್ನ ಸೌಂದರ್ಯವನ್ನು ಕಳೆದುಕೊಂಡರೆ ಪ್ರವಾಸಿಗರು ಬರುವುದಿಲ್ಲ. ಆದ್ದರಿಂದ ಅದರ ಸ್ವಚ್ಛತೆ ಮುಖ್ಯವಾಗಿದೆ. ಪ್ರವಾಸೋದ್ಯಮವೇ ನಮ್ಮ ಆದಾಯದ ಮೂಲವಾಗಿದೆ ಎಂದು ಸ್ಥಳೀಯ ನಿವಾಸಿ ಆಶಿಕ್ ಹುಸೇನ್ ತಿಳಿಸಿದರು.

ಸರ್ಕಾರವು ಕೆರೆಯನ್ನು ಸ್ವಚ್ಛಗೊಳಿಸಲು ಆರಂಭಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಅದರ ನೈಸರ್ಗಿಕ ಸೌಂದರ್ಯವನ್ನು ಪುನಃಸ್ಥಾಪಿಸಲು ಸರ್ಕಾರ ಶ್ರಮಿಸುತ್ತಿದೆ. ದಾಲ್ ಸರೋವರವು ನಮ್ಮ ಪರಂಪರೆಯಾಗಿದೆ ಎಂದು ದಾಲ್ ಸರೋವರ ನೋಡಲು ಬಂದಿದ್ದ ಪ್ರವಾಸಿ ಮುನೀರ್ ಖಾನ್ ಹೇಳಿದರು.

Dal Lake

16 ಕ್ಕೂ ಹೆಚ್ಚು ಯಂತ್ರಗಳನ್ನು ಬಳಸಿ ಸ್ವಚ್ಛತಾ ಅಭಿಯಾನ

ಇದನ್ನೂ ಓದಿ: ಅಂದು ಅಂಕಲ್​ ಅಂತ ಹೀಯಾಳಿಸಿದ್ರು, ಈಗ ಛೋಟಾ ಭೀಮ್​ ಅಂದ್ರು: ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಭಾಸ್

ಉತ್ತರ ಕರ್ನಾಟಕ ಸ್ಪೆಷಲ್ ಅರಳು ಹಿಟ್ಟಿನ ಉಂಡೆ ಹೇಗೆ ಮಾಡ್ತಾರೆ ಗೊತ್ತಾ? ವಿಧಾನ ಇಲ್ಲಿದೆ

TV9 Web

TV9 Kannada

Read More
Loading...
Unable to load recommendations.
Follow Us