ಗೊತ್ತಿಲ್ಲದೆ 12 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸದ ಬುಟ್ಟಿಗೆ ಎಸೆದ ಮಾಲೀಕ, ಆಮೇಲೇನಾಯ್ತು, ಇಲ್ಲಿದೆ ಮಾಹಿತಿ

|

Updated on: Oct 20, 2023 | 1:01 PM

ಮಾಲೀಕನೊಬ್ಬ ಗೊತ್ತಿಲ್ಲದೆ 12 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸದ ಬುಟ್ಟಿಗೆ ಎಸೆದಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಅದ್ಹೇಗೋ ಗೊತ್ತಾಗುವಾಗ ಟನ್​ಗಟ್ಟಲೆ ಕಸದ ನಡುವೆ ಚಿನ್ನಾಭರಣಗಳು ಬಿದ್ದಿದ್ದವು, ಇಡೀ ದಿನ ಹುಡುಕಾಟ ನಡೆಸಿ ಅಂತೂ ಪ್ರಯತ್ನ ಫಲಕೊಟ್ಟಿದೆ.

ಗೊತ್ತಿಲ್ಲದೆ 12 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸದ ಬುಟ್ಟಿಗೆ ಎಸೆದ ಮಾಲೀಕ, ಆಮೇಲೇನಾಯ್ತು, ಇಲ್ಲಿದೆ ಮಾಹಿತಿ
ಚಿನ್ನ
Image Credit source: India Today
Follow us on

ಮಾಲೀಕನೊಬ್ಬ ಗೊತ್ತಿಲ್ಲದೆ 12 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸದ ಬುಟ್ಟಿಗೆ ಎಸೆದಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಅದ್ಹೇಗೋ ಗೊತ್ತಾಗುವಾಗ ಟನ್​ಗಟ್ಟಲೆ ಕಸದ ನಡುವೆ ಚಿನ್ನಾಭರಣಗಳು ಬಿದ್ದಿದ್ದವು, ಇಡೀ ದಿನ ಹುಡುಕಾಟ ನಡೆಸಿ ಅಂತೂ ಪ್ರಯತ್ನ ಫಲಕೊಟ್ಟಿದೆ.

ಪ್ರಮೋದ್ ಕುಮಾರ್ ಅವರು ಮನೆಯ ತ್ಯಾಜ್ಯವನ್ನು ವಿಲೇವಾರಿ ಮಾಡುವಾಗ ಆಕಸ್ಮಿಕವಾಗಿ ಎಸೆದಿದ್ದಾರೆ. ಕುಟುಂಬ ಸಮೇತ ಭೋಪಾಲ್‌ಗೆ ತೆರಳಲು ನಗರದಿಂದ ಹೊರಟಿದ್ದ ಪ್ರಮೋದ್ ಕಳ್ಳತನ ತಡೆಯಲು ಚಿನ್ನಾಭರಣ ಪೆಟ್ಟಿಗೆಯನ್ನು ಡಸ್ಟ್‌ಬಿನ್‌ನಲ್ಲಿ ಬಚ್ಚಿಟ್ಟು ತಮ್ಮ ಅಮೂಲ್ಯ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕಿದ್ದರು. ಬೆಲೆಬಾಳುವ ವಸ್ತುಗಳನ್ನು ಸ್ಥಳೀಯ ಪೌರಕಾರ್ಮಿಕರ ಕಸ ಸಂಗ್ರಹಣೆ ವಾಹನ ಅಚಾತುರ್ಯದಿಂದ ತೆಗೆದುಕೊಂಡು ಹೋಗಿರುವುದು ನಂತರ ಅರಿವಾಯಿತು.

ಪ್ರಮೋದ್ ಕುಮಾರ್ ಅವರು ಕೂಡಲೇ ತ್ಯಾಜ್ಯ ನಿರ್ವಹಣಾ ಸಂಸ್ಥೆಗೆ ಮಾಹಿತಿ ನೀಡಿದ್ದು, ಅವರು ಕಸ ಸಂಗ್ರಹಿಸುವ ವಾಹನದ ಮಾರ್ಗವನ್ನು ಪತ್ತೆಹಚ್ಚಿ ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದರು.

ಮತ್ತಷ್ಟು ಓದಿ: ಗ್ಯಾಸ್ ಕಟರ್ ಬಳಸಿ ಜ್ಯುವೆಲರಿ ಶಾಪ್​ಗೆ ಕನ್ನ: ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಕಳ್ಳತನ

ಕಾರ್ಮಿಕರಲ್ಲಿ ಒಬ್ಬರಾದ ಮುಕೇಶ್ ಪ್ರತಾಪ್ ಸಿಂಗ್, ಹಲವಾರು ಗಂಟೆಗಳ ಕಾಲ, ಸುಮಾರು ಎರಡು ಡಜನ್ ಉದ್ಯೋಗಿಗಳ ತಂಡವು ಕಸದ ನಡುವೆ ಆಭರಣಗಳನ್ನು ಶ್ರದ್ಧೆಯಿಂದ ಹುಡುಕಿದೆವು, ನಾವು ಯಶಸ್ವಿಯಾಗಿ ಅಮೂಲ್ಯ ವಸ್ತುಗಳನ್ನು ಹುಡುಕಿದ್ದೇವೆ ಎಂದು ತಿಳಿಸಿದ್ದಾರೆ. ಆಭರಣ ಪತ್ತೆಯಾದ ಡಂಪಿಂಗ್ ಯಾರ್ಡ್‌ಗೆ ಕಸವನ್ನು ಸಾಗಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ