ಎಲೆಕ್ಟ್ರಿಷಿಯನ್ ಕೈಗೆ ಸರಪಳಿ ಹಾಕಿ, ತಳ್ಳುವ ಗಾಡಿಗೆ ಕಟ್ಟಿದ ಅಂಗಡಿ ಮಾಲೀಕ
ಅಂಗಡಿ ಮಾಲೀಕನೊಬ್ಬ ಎಲೆಕ್ಟ್ರಿಷಿಯನ್ ಒಬ್ಬರ ಕೈಗೆ ಸರಪಳಿ ಹಾಕಿ ಹಾಕಿ ತಳ್ಳುವ ಗಾಡಿಗೆ ಕಟ್ಟಿರುವ ಘಟನೆ ಜಾರ್ಖಂಡ್ನ ಧನ್ಬಾದ್ನಲ್ಲಿ ನಡೆದಿದೆ.
ಅಂಗಡಿ ಮಾಲೀಕನೊಬ್ಬ ಎಲೆಕ್ಟ್ರಿಷಿಯನ್ ಒಬ್ಬರ ಕೈಗೆ ಸರಪಳಿ ಹಾಕಿ ಹಾಕಿ ತಳ್ಳುವ ಗಾಡಿಗೆ ಕಟ್ಟಿರುವ ಘಟನೆ ಜಾರ್ಖಂಡ್ನ ಧನ್ಬಾದ್ನಲ್ಲಿ ನಡೆದಿದೆ.ಎಲೆಕ್ಟ್ರಿಷಿಯನ್ ಯಾವುದೋ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿ ಮುಂಗಡ 15 ಸಾವಿರ ರೂ. ಪಡೆದಿದ್ದರು, ಕೆಲವು ದಿನಗಳಿಂದ ಕಾಲ್ ಕೂಡ ರಿಸೀವ್ ಮಾಡುತ್ತಿರಲಿಲ್ಲ, ಹೀಗಾಗಿ ಅಂಗಡಿಯವ ಏನಾದರೂ ಮಾಡಲೇಬೇಕು, ಈತನಿಗೆ ಬುದ್ಧಿ ಕಲಿಸಬೇಕು ಎಂದು ಆಲೋಚಿಸಿದ್ದ.
ಒಂದೆಡೆ ಹಣವೂ ಹೋಯ್ತು ಇನ್ನೊಂದೆಡೆ ಕೆಲಸವೂ ಆಗಿಲ್ಲ ಎನ್ನುವ ಬೇಸರದಿಂದ ಆತ ಎಲೆಕ್ಟ್ರಿಷಿಯನ್ನ ಕೈಗೆ ಕೋಳ ಹಾಕಿ ಗಾಡಿಗೆ ಕಟ್ಟಿದ್ದಾರೆ.
ಬಳಿಕ ಪೊಲೀಸರು ಆಗಮಿಸಿದಾಗ ಇದ್ದ ವಿಚಾರವನ್ನು ಅಂಗಡಿ ಮಾಲೀಕ ವಿವರಿಸಿದ್ದಾರೆ, ಇದಾದ ಬಳಿಕ ಎಲೆಕ್ಟ್ರಿಷಿಯನ್ ಬಳಿ ಕೇಳಿದಾಗ ಹೌದು ನನಗೆ ಅವರು ಹಣ ನೀಡಿದ್ದರು, ನಾನು ಕೆಲಸವನ್ನೂ ಮಾಡಿಲ್ಲ ಹಣವನ್ನೂ ಹಿಂದಿರುಗಿಸಿಲ್ಲ ಎಂದು ಒಪ್ಪಿಕೊಂಡಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ