ನಾನು ಟ್ವಿಟರ್ ಖಾತೆಯನ್ನು ಹೊಂದಿರಲಿಲ್ಲ, ಇದು ನನ್ನ ವಿರುದ್ಧದ ಪಿತೂರಿ: ಜೆಎನ್‌ಯು ಉಪಕುಲಪತಿ

Santishree Dhulipudi Pandit ನನಗೆ ಟ್ವಿಟರ್ ಖಾತೆ ಇರಲಿಲ್ಲ. ಅದನ್ನು ಹ್ಯಾಕ್ ಮಾಡಲಾಗಿದೆ ಮತ್ತು ಜೆಎನ್‌ಯುನ ಆಂತರಿಕವಾಗಿ ಯಾರೋ ಇದನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯ ವಿಷಯವೆಂದರೆ, ನಾನು ಮೊದಲ ಮಹಿಳಾ ವಿಸಿ ಎಂದು ಅನೇಕ ಜನರು ಅತೃಪ್ತರಾಗಿದ್ದಾರೆ.

ನಾನು ಟ್ವಿಟರ್ ಖಾತೆಯನ್ನು ಹೊಂದಿರಲಿಲ್ಲ, ಇದು ನನ್ನ ವಿರುದ್ಧದ ಪಿತೂರಿ: ಜೆಎನ್‌ಯು ಉಪಕುಲಪತಿ
ಶಾಂತಿಶ್ರೀ ಧೂಳಿಪುಡಿ ಪಂಡಿತ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Feb 09, 2022 | 5:38 PM

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಹೊಸದಾಗಿ ನೇಮಕಗೊಂಡ ಉಪಕುಲಪತಿ (V-C) ಶಾಂತಿಶ್ರೀ ಧೂಳಿಪುಡಿ ಪಂಡಿತ್  (Santishree Dhulipudi Pandit) ಅವರು ತಮ್ಮ ಹೆಸರಿನ (@SantishreeD) ದೃಢೀಕರಿಸದ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್‌ಗಳ ವಿವಾದದ ಒಂದು ದಿನದ ನಂತರ ಅವರು ಟ್ವಿಟರ್ ಖಾತೆಯನ್ನು ಹೊಂದಿರಲೇ  ಇಲ್ಲ ಎಂದು ಮಂಗಳವಾರ ಹೇಳಿದ್ದಾರೆ.  ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಸೇಂಟ್ ಸ್ಟೀಫನ್ಸ್ ಕಾಲೇಜ್ ನ್ನು “ಕೋಮು ಕ್ಯಾಂಪಸ್” ಎಂದು ಕರೆಯುವ ಟ್ವೀಟ್‌ಗಳು , ಭಾರತೀಯ ಕ್ರಿಶ್ಚಿಯನ್ನರನ್ನು ನಿಂದಿಸಿರುವ, ನಾಗರಿಕ ಹಕ್ಕುಗಳ ಕಾರ್ಯಕರ್ತರನ್ನು “ಮಾನಸಿಕ-ಅಸ್ವಸ್ಥ ಜಿಹಾದಿಗಳು” ಎಂದು ಕರೆದಿರುವ ಟ್ವೀಟ್​​ಗಳು ವೈರಲ್ ಆಗಿತ್ತು. ಈ ಟ್ವೀಟ್​​ಗಳನ್ನು ಸೋಮವಾರ ಅಳಿಸಲಾಗಿತ್ತು. ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಪಂಡಿತ್ ನನಗೆ ಟ್ವಿಟರ್ ಖಾತೆ ಇರಲಿಲ್ಲ. ಅದನ್ನು ಹ್ಯಾಕ್ ಮಾಡಲಾಗಿದೆ ಮತ್ತು ಜೆಎನ್‌ಯುನ ಆಂತರಿಕವಾಗಿ ಯಾರೋ ಇದನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯ ವಿಷಯವೆಂದರೆ, ನಾನು ಮೊದಲ ಮಹಿಳಾ ವಿಸಿ ಎಂದು ಅನೇಕ ಜನರು ಅತೃಪ್ತರಾಗಿದ್ದಾರೆ. ಜೆಎನ್‌ಯುನ ಜನರು ಭಾಗಿಯಾಗಿರುವ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ತಾನು ಕಂಡುಕೊಂಡಿದ್ದೇನೆ ಎಂದು ಅವರು ಹೇಳಿದರು.  ಟ್ವಿಟರ್ ಖಾತೆ ನಿಮಗೆ ಇರಲಿಲ್ಲವೇ ಎಂದು ಕೇಳಿದಾಗ “ಎಂದಿಗೂ ಇಲ್ಲ. ನಾನು ಎಂದಿಗೂ ಟ್ವಿಟರ್ ಖಾತೆ ಹೊಂದಿರಲಿಲ್ಲ. ನನ್ನ ಮಗಳು ಸೈಬರ್ ಸೆಕ್ಯುರಿಟಿ ಇಂಜಿನಿಯರ್. ಆರು ವರ್ಷಗಳ ಹಿಂದೆ, ಅವಳು ಯುಎಸ್‌ನಲ್ಲಿ ಕೆಲವು ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಿದ್ದರಿಂದ ಅದನ್ನು ಮುಚ್ಚಿದ್ದಳು. ಅವಳು ನನ್ನಲ್ಲಿ ಅಮ್ಮಾ, ನೀವು ಯಾವುದೇ ಸಾಮಾಜಿಕ ಮಾಧ್ಯಮ ಸೈಟ್ ಗಳನ್ನು ಇನ್ನು ಮುಂದೆ ಬಳಸುವುದಿಲ್ಲ ಎಂದು ಹೇಳಿದಳು. ನಾನು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿಲ್ಲ ಎಂದು ಪಂಡಿತ್ ಹೇಳಿದ್ದಾರೆ. ಈ ಚಿತ್ರಗಳು ಹೊರಬಂದಾಗ ಮಾತ್ರ ಇದು ನನ್ನ ಗಮನಕ್ಕೆ ಬಂದಿತು. ಏಕೆಂದರೆ ನಾನು ಟ್ವಿಟರ್‌ನಲ್ಲಿಲ್ಲ, ನಾನು ಟ್ವಿಟರ್‌ನಲ್ಲಿ ಇಲ್ಲದೇ ಇದ್ದರೆ ನನಗೆ ಹೇಗೆ ಖಾತೆ ಇರುತ್ತದೆ?  ಯಾರೂ  ತಿಳಿಸಲಿಲ್ಲವೇ ಎಂದು ಕೇಳಿದಾಗ ಯಾರೂ ನನಗೆ ಹೇಳಲಿಲ್ಲ. ಈ ಜಗತ್ತಿನಲ್ಲಿ ಎಲ್ಲರೂ ಪಿತೂರಿದಾರರು ಎಂದಿದ್ದಾರೆ.

ತನ್ನ ವಿರುದ್ಧ ಅತಿರೇಕ ಆಗಿದೆ ಎಂದು ಹೇಳಿದ ಅವರು ಪತ್ರಿಕಾ ಮಾಧ್ಯಮಗಳು ನನ್ನನ್ನು ಏಕೆ ಕೆಟ್ಟದಾಗಿ ಮತ್ತು ಕಳಪೆಯಾಗಿ ನಡೆಸಿಕೊಳ್ಳುತ್ತಿವೆ? ನಾನೇನು ಪಾಪ ಮಾಡಿದೆ? ಎಡಪಕ್ಷ ಮಾಡದೇ ಇದ್ದುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಡಪಂಥೀಯರನ್ನು ಸೋಲಿಸಿ ಗಾಜಿನ ಚಾವಣಿ ಒಡೆದಿರುವುದರಿಂದಲೇ? ಕುಲಪತಿ ಆಗಿ ತನ್ನ ನೇಮಕಾತಿಯನ್ನು ಉಲ್ಲೇಖಿಸುತ್ತಿದ್ದೀರಾ ಎಂದು ಕೇಳಿದಾಗ ಅವರು”ಹೌದು ನಾನು ಶೋಷಿತ ವಿಭಾಗದಿಂದ ಮತ್ತು ದಕ್ಷಿಣದ ತಮಿಳುನಾಡಿನಿಂದ ಬಂದ ಮಹಿಳೆ. ಇಷ್ಟು ವರ್ಷ ಎಡಪಕ್ಷಗಳು ಏಕೆ ಮಾಡಲಿಲ್ಲ? ಎಪ್ಪತ್ತು ವರ್ಷ ಅಧಿಕಾರದಲ್ಲಿದ್ದರು. ಅವರಿಗೆ ಜೆಎನ್​​ಯುಗೆ ಬರಲಾಗಲಿಲ್ಲವೇ? ಅದು ಅವರ ಅಡ್ಡಾ ಎಂದಿದ್ದಾರೆ.

“ಭಾರತೀಯ ದೃಷ್ಟಿಕೋನ” ದ ಮೇಲೆ ಕೇಂದ್ರೀಕರಿಸಿದ ಕಾರಣ ತನ್ನ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಪಂಡಿತ್  ಆರೋಪಿಸಿದರು. “ಚೋಳರು, ಮರಾಠರು, ವಿಜಯನಗರ ಸಾಮ್ರಾಜ್ಯ, ಚೇರರು, ಪಾಂಡ್ಯರು – ಅವರು ಎಲ್ಲಿದ್ದಾರೆ? ಇತಿಹಾಸದಲ್ಲಿ ಎಷ್ಟು ಶೇಕಡಾ ಬರೆಯಲಾಗಿದೆ? ಇತಿಹಾಸವನ್ನು ನೋಡಿ ಅಜೆಂಡಾ ಸೆಟ್ಟಿಂಗ್ ಆಗಿದೆ. ಅದಕ್ಕಾಗಿ ನಾನು ಅವರನ್ನು ದೂಷಿಸುವುದಿಲ್ಲ. ನಾನು ಅದರೊಳಗೆ ಹೋಗಲು ಬಯಸುವುದಿಲ್ಲ. ಹಾಗಾದರೆ ಅವರು ಅಜೆಂಡಾವನ್ನು ಹೊಂದಿಸಬಹುದಾದರೆ, ಇತಿಹಾಸವನ್ನು ಸರಿಪಡಿಸುವುದರಲ್ಲಿ ತಪ್ಪೇನಿದೆ? ನಾನು ದಕ್ಷಿಣ ಭಾರತೀಯಳು. ನನ್ನ ಪ್ರಕಾರ ರಾಜೇಂದ್ರ ಚೋಳ ಭಾರತ ಕಂಡ ಶ್ರೇಷ್ಠ ಚಕ್ರವರ್ತಿ. ಅವರು ಚೀನಿಯರನ್ನು ಹೊಂದಿದ್ದ ಇಂಡೋ-ಪೆಸಿಫಿಕ್ ಅನ್ನು ವಶಪಡಿಸಿಕೊಂಡರು. ಅವರನ್ನು ಏಕೆ ಉಲ್ಲೇಖಿಸಲಾಗಿಲ್ಲ? ಅಂತಹ ಪ್ರಶ್ನೆಗಳನ್ನು ಕೇಳಿದರೆ, ನಾನು ಶತ್ರುವಾಗುತ್ತೇನೆ ಎಂದಿದ್ದಾರೆ.

ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯವು ಸಚಿವಾಲಯಕ್ಕೆ ನೀಡಿದ ವಿಜಿಲೆನ್ಸ್ ವರದಿಯಲ್ಲಿ ಭಾರತ ಮೂಲದ ವ್ಯಕ್ತಿಗಳು (PIO) ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡುವಾಗ ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ಅವರು ತಪ್ಪಿತಸ್ಥರೆಂದು ವಿಚಾರಣೆಯ ನಂತರ ಅವರು ಕ್ರಮವನ್ನು ಎದುರಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ (ಎಫ್‌ಐಆರ್ ದಾಖಲಾಗಿದೆ) ಎಂಬುದನ್ನು ನನಗೆ ತೋರಿಸಿ. ನಾನು ಮ್ಯಾನೇಜ್‌ಮೆಂಟ್ ಕೌನ್ಸಿಲ್ ಚುನಾವಣೆಯಲ್ಲಿ ಗೆದ್ದ ಮಹಾರಾಷ್ಟ್ರದವರಲ್ಲ ಎಂಬ ಕಾರಣಕ್ಕೆ ಪುಣೆ ವಿಶ್ವವಿದ್ಯಾಲಯ ಐಡೆಂಟಿಟಿ ಪಾಲಿಟಿಕ್ಸ್ ಆಡಿದೆ. ನಂತರ ನನಗೆ ಯಾವುದೇ ಹುದ್ದೆ ಸಿಗದಂತೆ ನೋಡಿಕೊಳ್ಳುವ ಷಡ್ಯಂತ್ರವಾಗಿತ್ತು. ನಿಜವಾಗಲೂ ಪ್ರಕರಣವಿದ್ದರೆ ವಿಶ್ವವಿದ್ಯಾನಿಲಯವು ನನ್ನ ವಿರುದ್ಧ ಏಕೆ ಎಫ್‌ಐಆರ್ ದಾಖಲಿಸಲಿಲ್ಲ?

ನಾನು ಉಪಕುಲಪತಿ ಆಗುವುದು ಅವರಿಗೆ ಇಷ್ಟವಿಲ್ಲದ ಕಾರಣ ನನಗೆ “ಕಿರುಕುಳ” ನೀಡಲು ಇದನ್ನು ಮಾಡಲಾಗಿದೆ. “ನಾನು ಮ್ಯಾನೇಜ್‌ಮೆಂಟ್ ಕೌನ್ಸಿಲ್ ಚುನಾವಣೆಗಳನ್ನು ಬಲದಿಂದ ಗೆದ್ದಿದ್ದೇನೆ ಮತ್ತು 2001 ರಿಂದ ನಾನು ಬಲಪಂಥೀಯಳು ನಾನೊಬ್ಬಳೇ ಎಂದು ಅವರು ಹೇಳಿದರು.

ತನ್ನ ಪತ್ರಿಕಾ ಪ್ರಕಟಣೆಯಲ್ಲಿ ವ್ಯಾಕರಣ ದೋಷಗಳ ಕುರಿತು ಬಿಜೆಪಿ ಸಂಸದ ವರುಣ್ ಗಾಂಧಿಯವರ ಟೀಕೆಗೆ ಪ್ರತಿಕ್ರಿಯಿಸಿದ ಪಂಡಿತ್, “ನಾನು ಆದೇಶಿಸಿದೆ. ಹಿಂದಿನ ವಿಸಿಯ ಸಹಾಯಕಿ ಅದನ್ನು ಸಂಕ್ಷಿಪ್ತವಾಗಿ ಬರೆದುಕೊಂಡರು. ಪಿಆರ್‌ಒ ಅವರು ಅದನ್ನು ಸರಿಪಡಿಸಿ ಅದನ್ನು ಹಾಕುವುದಾಗಿ ಹೇಳಿದರು. ನೀವು ಎಷ್ಟು ಮೇಲ್ವಿಚಾರಣೆ ಮಾಡಬಹುದು? ನನಗೆ ಇನ್ನೂ ತಂಡವಿಲ್ಲ. ಇಂದು ನಾನು ಕಚೇರಿ ಸಿಬ್ಬಂದಿಗೆ ಹೇಳಿದ್ದೇನೆ, ನಿಮಗೆ ಇಂಗ್ಲಿಷ್ ಬರದಿದ್ದರೆ, ನಿಮಗೆ ಇಂಗ್ಲಿಷ್ ಬರುವುದಿಲ್ಲ ಎಂದು ಹೇಳಬೇಕಾಗಿತ್ತು. ಆದರೆ ಯಾರಿಗೂ ಗೊತ್ತಿಲ್ಲ ಎಂದು ಹೇಳುವುದಿಲ್ಲ. ನಾನು ಕುಳಿತು, ಮತ್ತೆ ಟೈಪ್ ಮಾಡಿ ಮತ್ತು ಇಂದು ನಾನೇ ಅದನ್ನು ಪುನಃ ಬರೆದು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದೇನೆ.

ತನ್ನ ಕಾರ್ಯಚಟುವಟಿಕೆಯ ಶೈಲಿಯ ಬಗ್ಗೆ ಮಾತನಾಡುತ್ತಾ, ನಾನು “ಪ್ರಜಾಪ್ರಭುತ್ವದ ಪ್ರಕ್ರಿಯೆ”ಗಾಗಿ ಇದ್ದೇನೆ ಎಂದು ಹೇಳಿದರು. “ನಾನು ಈ ವಿಶ್ವವಿದ್ಯಾಲಯದ ವಿದ್ಯಾರ್ಥಿ. ಇದು ನನ್ನ ಅಲ್ಮಾ ಮೇಟರ್. ಇದು ನನ್ನ ತಾಯಿಯಂತೆ. ನಾನು ಇಂದು ಏನಾಗಿದ್ದೇನೆ ಎಂದರೆ ಅದಕ್ಕೆ ಜೆಎನ್‌ಯು ಕಾರಣ. ವಿಭಿನ್ನ ಸಿದ್ಧಾಂತಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲವೇ? ಅದನ್ನು ಒಪ್ಪಬಹುದು ಇಲ್ಲವೇ ಒಪ್ಪದಿರಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜೆಎನ್​ಯುಗೆ ಹೊಸ ಉಪ ಕುಲಪತಿ ನೇಮಕದ ಬೆನ್ನಲ್ಲೇ ಅನಕ್ಷರತೆಯ ಪ್ರದರ್ಶನ ಎಂದು ಟೀಕಿಸಿದ ಬಿಜೆಪಿ ಸಂಸದ