AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಜವಾಹರ್​ ಲಾಲ್​ ನೆಹರೂ ವಿಶ್ವವಿದ್ಯಾಲಯಕ್ಕೆ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಉಪಕುಲಪತಿ; ಜೆಎನ್​​ಯುದ ಮೊದಲ ಮಹಿಳಾ ವೈಸ್ ಚಾನ್ಸಲರ್ ಇವರು !

ಎಂ.ಜಗದೀಶ್​ ಕುಮಾರ್ ಅವರ ಉಪಕುಲಪತಿ  ಅವಧಿ ಕಳೆದವರ್ಷವೇ ಮುಕ್ತಾಯಗೊಂಡಿದೆ. ಆಗಿನಿಂದಲೂ ಹಂಗಾಮಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ವಾರ ಅವರನ್ನು ಯುಜಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ದೆಹಲಿ ಜವಾಹರ್​ ಲಾಲ್​ ನೆಹರೂ ವಿಶ್ವವಿದ್ಯಾಲಯಕ್ಕೆ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಉಪಕುಲಪತಿ; ಜೆಎನ್​​ಯುದ ಮೊದಲ ಮಹಿಳಾ ವೈಸ್ ಚಾನ್ಸಲರ್ ಇವರು !
ಜೆಎನ್​ಯು
S Chandramohan
| Updated By: Lakshmi Hegde|

Updated on:Feb 07, 2022 | 3:24 PM

Share

ದೆಹಲಿಯ ಜವಾಹರ್​ ಲಾಲ್​ ನೆಹರೂ ವಿಶ್ವ ವಿದ್ಯಾಲಯದ (Jawaharlal Nehru University) ನೂತನ ಉಪಕುಲಪತಿಯನ್ನಾಗಿ ಶಾಂತಿಶ್ರೀ ಧೂಳಿಪುಡಿ ಪಂಡಿತ್​​ರನ್ನು(Shantisree Dhulipudi Pandit)ಕೇಂದ್ರ ಸರ್ಕಾರ ಇಂದು ನೇಮಕ ಮಾಡಿದೆ. ಶಾಂತಿಶ್ರೀಯವರು ಜೆಎನ್​​ಯೂದ ಮೊದಲ ಮಹಿಳಾ ಉಪಕುಲಪತಿ ಆಗಿರುವುದು ವಿಶೇಷ. ಅಂದಹಾಗೇ, ಈ ಮೊದಲು ಉಪಕುಲಪತಿಯಾಗಿದ್ದ ಜಗದೀಶ್ ಕುಮಾರ್​ರನ್ನು ಕೇಂದ್ರ ಸರ್ಕಾರ ಯುಜಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

59ವರ್ಷದ ಶಾಂತಿಶ್ರೀಯವರು ಪ್ರಸ್ತುತ ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. ಜೆಎನ್​ಯೂದ ಹಳೇ ವಿದ್ಯಾರ್ಥಿನಿಯೇ ಆಗಿದ್ದಾರೆ. ಅಂತಾರಾಷ್ಟ್ರೀಯ ವ್ಯವಹಾರ ಸಂಬಂಧದಲ್ಲಿ ಪಿಎಚ್​ಡಿ ಮತ್ತು ಎಂಫಿಲ್​​ನ್ನು ಇಲ್ಲಿಯೇ ಓದಿದ್ದಾರೆ. ಇನ್ನು ಐದು ವರ್ಷಗಳ ಅವಧಿಗೆ ಶಾಂತಿಶ್ರೀ ಇಲ್ಲಿ ಉಪಕುಲಪತಿ ಆಗಿರಲಿದ್ದಾರೆ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 1988ರಲ್ಲಿ ಗೋವಾ ವಿಶ್ವವಿದ್ಯಾಲಯದಿಂದ ಬೋಧನಾ ವೃತ್ತಿ ಶುರು ಮಾಡಿದರು. 1993 ರಲ್ಲಿ ಪುಣೆ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅವರು ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಸ್ಥಾನವನ್ನು ಹೊಂದಿದ್ದಾರೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC), ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ (ICSSR) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಸಂದರ್ಶಕರ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಶಾಂತಿಶ್ರೀ ತಮ್ಮ ಬೋಧನಾ ವೃತ್ತಿಜೀವನದಲ್ಲಿ 29 ಪಿಎಚ್​ಡಿ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಇನ್ನು ಎಂ.ಜಗದೀಶ್​ ಕುಮಾರ್ ಅವರ ಉಪಕುಲಪತಿ  ಅವಧಿ ಕಳೆದವರ್ಷವೇ ಮುಕ್ತಾಯಗೊಂಡಿದೆ. ಆಗಿನಿಂದಲೂ ಹಂಗಾಮಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ವಾರ ಅವರನ್ನು ಯುಜಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಇನ್ನು ಜಗದೀಶ್​ ಕುಮಾರ್​ ಉಪಕುಲಪತಿಯಾಗಿದ್ದ ಅವಧಿಯಲ್ಲಿ ಜೆಎನ್​​ಯುದಲ್ಲಿ ಹಲವು ವಿವಾದಗಳು ನಡೆದಿವೆ.  ಎಬಿವಿಪಿ ಹಾಗೂ ಐಸಾ ವಿದ್ಯಾರ್ಥಿ ಸಂಘಟನೆಗಳ ನಡುವೆ ಸಿದ್ದಾಂತ ಆಧರಿತ ಚರ್ಚೆ, ವಾಗ್ವಾದ ನಡೆಯುತ್ತಲೇ ಇತ್ತು. ಇನ್ನು ಮುಂದೆ ವಿದ್ಯಾರ್ಥಿಗಳ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿ, ಕ್ಯಾಂಪಸ್ ನಲ್ಲಿ ಶಾಂತಿ, ಸೌಹಾರ್ದ ವಾತಾವರಣ ಕಾಪಾಡುವುದು ಹೊಸ ಉಪಕುಲಪತಿ ಶಾಂತಿಶ್ರೀ ಅವರಿಗೆ ಇರುವ ಸವಾಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಜೆಎನ್​ಯೂ ದೇಶವಿರೋಧಿ ಘೋಷಣೆಗಳಿಂದ ಟೀಕೆಗೂ ಗುರಿಯಾಗಿತ್ತು. ಬಳಿಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ಕೂಡ ನಡೆದಿತ್ತು. ಶೈಕ್ಷಣಿಕ ಚಟುವಟಿಕೆಗೆ ಒತ್ತು ಸಿಗಬೇಕಾದ ಜೆಎನ್​​ಯೂ ನಲ್ಲಿ ಹೊಡೆದಾಟ, ಬಡಿದಾಟ, ಘರ್ಷಣೆ ನಡೆದಿದ್ದು, ಟೀಕೆಗೆ ಗುರಿಯಾಗಿತ್ತು. ದೆಹಲಿಯ ಪ್ರತಿಷ್ಠಿತ ಜೆಎನ್​​ಯುವಿನಲ್ಲೇ ಕೇಂದ್ರ ಸಚಿವರಾದ ಜೈಶಂಕರ್, ನಿರ್ಮಲಾ ಸೀತಾರಾಮನ್ ರಂಥ ಅನೇಕ ಖ್ಯಾತನಾಮರು ಪದವಿ ಪಡೆದಿದ್ದಾರೆ. ಈ ಯೂನಿವರ್ಸಿಟಿಯಲ್ಲಿ ಪದವಿ ಪಡೆದವರು ಸಮಾಜದ ಅನೇಕ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆ ಉತೀರ್ಣರಾಗಿ ಉನ್ನತ ಹುದ್ದೆಗಳಲ್ಲಿದ್ದಾರೆ.

ವರದಿ: ಚಂದ್ರಮೋಹನ್ 

ಇದನ್ನೂ ಓದಿ: ಕೊವಿಡ್ ಲಸಿಕೆ ಪಡೆಯಲು ಕೊವಿನ್ ಪೋರ್ಟಲ್‌ನಲ್ಲಿ ಆಧಾರ್ ವಿವರ ಕಡ್ಡಾಯವಲ್ಲ: ಕೇಂದ್ರ

Published On - 3:20 pm, Mon, 7 February 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?