ಇ.ಡಿ. ಅಧಿಕಾರಿಗಳ ಎದುರು ಸತ್ಯ ಬಾಯ್ಬಿಟ್ಟ ಸೋದರಳಿಯ ಭೂಪಿಂದರ್ ಸಿಂಗ್​; ಪಂಜಾಬ್​ ಮುಖ್ಯಮಂತ್ರಿ ಛನ್ನಿಗೆ ಸಂಕಷ್ಟ?​

ಪಂಜಾಬ್​ನಲ್ಲಿ ಕಾಂಗ್ರೆಸ್​ಗೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ತುಸು ಕಗ್ಗಂಟಾಗಿತ್ತು. ಇಲ್ಲಿ ನವಜೋತ್​ ಸಿಂಗ್​ ಸಧು ಜಾಸ್ತಿ ಎನ್ನಿಸುವಷ್ಟು ರೆಬೆಲ್​ ಆಗಿದ್ದರೂ, ನಿನ್ನೆ ಕೊನೇ ಕ್ಷಣದಲ್ಲಿ, ರಾಹುಲ್​ ಗಾಂಧಿಯವರ ತೀರ್ಮಾನವನ್ನು ಗೌರವಿಸುತ್ತೇನೆ ಎಂದಿದ್ದರು. 

ಇ.ಡಿ. ಅಧಿಕಾರಿಗಳ ಎದುರು ಸತ್ಯ ಬಾಯ್ಬಿಟ್ಟ ಸೋದರಳಿಯ ಭೂಪಿಂದರ್ ಸಿಂಗ್​; ಪಂಜಾಬ್​ ಮುಖ್ಯಮಂತ್ರಿ ಛನ್ನಿಗೆ ಸಂಕಷ್ಟ?​
ಚರಣಜಿತ್​ ಸಿಂಗ್ ಛನ್ನಿ
Follow us
TV9 Web
| Updated By: Lakshmi Hegde

Updated on:Feb 07, 2022 | 4:49 PM

ಚಂಡಿಗಢ್​: ಪಂಜಾಬ್​​​ನಲ್ಲಿ ಈಗ ಮುಖ್ಯಮಂತ್ರಿಯಾಗಿರುವ ಚರಣಜಿತ್​ ಸಿಂಗ್ ಛನ್ನಿಯವರೇ (Charanjit Singh Channi )ಮುಂದಿನ ಅವಧಿಗೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿದೆ. ಅಂದರೆ, ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಛನ್ನಿಯವರೇ ಮುಖ್ಯಮಂತ್ರಿಯಾಗಲಿದ್ದಾರೆ. ಇನ್ನೊಂದೆಡೆ ಈಗಾಗಲೇ ಇ.ಡಿಯಿಂದ ಬಂಧಿತರಾಗಿರುವ ಛನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿ, ತಾವು ಪಂಜಾಬ್​​ನಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ಸುಗಮ ಮಾಡಿಕೊಡಲು ಸಂಬಂಧಪಟ್ಟವರಿಂದ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾಗಿ ಇ.ಡಿ. ಅಧಿಕಾರಿಗಳ ಎದುರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.  ಭೂಪಿಂದರ್​ ಸತ್ಯ ಒಪ್ಪಿಕೊಂಡಿದ್ದಾಗಿ ಇ.ಡಿ.ಮೂಲಗಳೇ ತಿಳಿಸಿದ್ದು, ತನಿಖೆ ಇನ್ನಷ್ಟು ಚುರುಕುಗೊಂಡಿದೆ.

ಪಂಜಾಬ್​ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಂಬಂಧಪಟ್ಟು 2018ರ ಮಾರ್ಚ್​ 7ರಂದು ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು. ಆ ಎಫ್​ಐಆರ್ ಆಧಾರದ ಮೇಲೆ ಜನವರಿಯಲ್ಲಿ ಛನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿಯವರಿಗೆ ಸೇರಿದ 10 ಸ್ಥಳಗಳ  ಮೇಲೆ ಇ.ಡಿ.ದಾಳಿ ನಡೆದಿತ್ತು. ಈ ಕೇಸ್​​ನಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಬಗ್ಗೆಯೂ ಕೇಸ್​ ದಾಖಲಿಸಿಕೊಂಡಿರುವ ಇ.ಡಿ. ಈಗ ಭೂಪಿಂದರ್ ಸಿಂಗ್​ರನ್ನು ಬಂಧಿಸಿದೆ.  ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕ ದಾಖಲೆಗಳು ದೋಷಪೂರಿತವಾಗಿವೆ. ಅಕ್ರಮವಾಗಿ ಆಸ್ತಿ ವರ್ಗಾವಣೆಯಾಗಿದ್ದು ಬೆಳಕಿಗೆ ಬಂದಿದೆ. ಈ ಆಸ್ತಿ ವಹಿವಾಟಿಗೆ ಸಂಬಂಧಪಟ್ಟಂತೆ ಮೊಬೈಲ್​ ಫೋನ್​, 21 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನ, 12 ಲಕ್ಷ ರೂ.ಮೌಲ್ಯದ ರೊಲೆಕ್ಸ್​ ವಾಚ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ಅಧಿಕಾರಿಗಳು ಮಾಹಿತಿ ನೀಡಿದ್ದರು. ಭೂಪಿಂದರ್ ಸಿಂಗ್​ ನಾಳೆ (ಫೆ 8)ವರೆಗೂ ಇ.ಡಿ.ಕಸ್ಟಡಿಯಲ್ಲೇ ಇರಲಿದ್ದಾರೆ.

ಪಂಜಾಬ್​ನಲ್ಲಿ ಕಾಂಗ್ರೆಸ್​ಗೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ತುಸು ಕಗ್ಗಂಟಾಗಿತ್ತು. ಇಲ್ಲಿ ನವಜೋತ್​ ಸಿಂಗ್​ ಸಧು ಜಾಸ್ತಿ ಎನ್ನಿಸುವಷ್ಟು ರೆಬೆಲ್​ ಆಗಿದ್ದರೂ, ನಿನ್ನೆ ಕೊನೇ ಕ್ಷಣದಲ್ಲಿ, ರಾಹುಲ್​ ಗಾಂಧಿಯವರ ತೀರ್ಮಾನವನ್ನು ಗೌರವಿಸುತ್ತೇನೆ ಎಂದಿದ್ದರು.  ಹಾಗೇ, ನಿನ್ನೆ ಛನ್ನಿಯವರ ಹೆಸರನ್ನೇ ರಾಹುಲ್​ ಗಾಂಧಿ ಘೋಷಿಸಿದ್ದಾರೆ. ಛನ್ನಿಯವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬುದು ಇಲ್ಲಿನ ಜನತೆಯ ನಿರ್ಧಾರ, ಇದು ನನ್ನ ನಿರ್ಧಾರವಲ್ಲ. ನಾನು ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಿಲ್ಲ. ನೀವೇ ಮಾಡಿ ಎಂದು ಪಕ್ಷದ ಕಾರ್ಯಕರ್ತರಿಗೇ ಜವಾಬ್ದಾರಿ ನೀಡಿದ್ದಾರೆ. ಇಲ್ಲಿನ ಉಳಿದ ಅಭ್ಯರ್ಥಿಗಳು, ಶಾಸಕರು, ಜನರು, ಯುವಕರೆಲ್ಲರೂ ಮುಂದಿನ ಅವಧಿಗೂ ಛನ್ನಿಯವೇ ಸಿಎಂ ಆಗಲಿ ಎಂದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಮುಂದಿನ ಅವಧಿಗೂ ಛನ್ನಿಯವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡುತ್ತಿದ್ದಂತೆ, ಆಮ್​ ಆದ್ಮಿ ಪಕ್ಷ ಮತ್ತು ಶಿರೋಮಣಿ ಅಕಾಲಿ ದಳ ಎರಡೂ ಪಕ್ಷಗಳೂ ಕಾಂಗ್ರೆಸ್​​ ವಿರುದ್ಧ ವಾಗ್ದಾಳಿ ನಡೆಸಿದ್ದವು. ಅಕ್ರಮ ಮರಳು ಗಣಿಗಾರಿಕೆ ದಂಧೆಗೆ ಸಿಕ್ಕ ಗೆಲುವು ಎಂದೇ ಹೇಳಿದ್ದವು. ಪಂಜಾಬ್​​ನಲ್ಲೂ ಕೂಡ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಮೊದಲು ಧ್ವನಿ ಎತ್ತಿದ್ದು ಆಮ್​ ಆದ್ಮಿ ಪಕ್ಷವೇ ಆಗಿದೆ. ಅದರ ಬೆನ್ನಲ್ಲೆ ಇ.ಡಿ.ರೇಡ್​ ಆಗಿದೆ.

ಇದನ್ನೂ ಓದಿ: ಅಸಾದುದ್ದೀನ್ ಓವೈಸಿ ವಾಹನದ ಮೇಲೆ ಗುಂಡಿನ ದಾಳಿ ಪ್ರಕರಣ: ಝೆಡ್ ಕೆಟಗರಿ ಭದ್ರತೆಯನ್ನು ಸ್ವೀಕರಿಸಲು ಓವೈಸಿಗೆ ಅಮಿತ್ ಶಾ ಮನವಿ

Published On - 4:49 pm, Mon, 7 February 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ