ಮೊಬೈಲ್ ನೋಡ್ತಾ ಮೈಮರೆಯಬೇಡಿ; ಮೆಟ್ರೋ ನಿಲ್ದಾಣದಲ್ಲಿ ಮೊಬೈಲ್ನಲ್ಲೇ ಮುಳುಗಿದ್ದ ವ್ಯಕ್ತಿಗೆ ಏನಾಯ್ತು ನೋಡಿ!
Viral Video: ದೆಹಲಿ ಮೆಟ್ರೋ ರೈಲು ನಿಲ್ದಾಣದಲ್ಲಿ ಮೊಬೈಲ್ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ರೈಲ್ವೇ ಟ್ರಾಕ್ಗೆ ಬಿದ್ದುಬಿಟ್ಟಿದ್ದಾನೆ. ಮೊಬೈಲ್ ನೋಡುತ್ತಾ ತಾನು ಎಲ್ಲಿ ಹೋಗುತ್ತಿದ್ದೇನೆ ಎಂಬ ಪರಿವೆ ಇಲ್ಲದೆ ಈ ದುರ್ಘಟನೆ ಸಂಭವಿಸಿದೆ.
ಇಂದಿನ ದಿನಮಾನದಲ್ಲಿ ಮೊಬೈಲ್ ಫೋನ್ಗಳು ನಮ್ಮ ಜೀವನದ ಅವಿಭಾಜ್ಯ ಅಂಗ ಎಂಬಂತಾಗಿದೆ. ಏನೇ ಅದ್ರೂ ಮೊಬೈಲ್ ಇಲ್ಲದೆ ಒಂದು ಹೊತ್ತು ಕಳೆಯುವುದು ಕೂಡ ಕಷ್ಟಸಾಧ್ಯ, ಮೊಬೈಲ್ ನೇ ಅವಲಂಬಿಸಿ ದಿನನಿತ್ಯ ನೂರಾರು ಕೆಲಸಗಳನ್ನು ಮಾಡುತ್ತೇವೆ. ವೈಯಕ್ತಿಕ ಮಾಹಿತಿ ಶೇಖರಣೆ, ಖಾಸಗಿ ಮಾತುಕತೆ, ಕೆಲಸಗಳು, ಕೆಲಸಕ್ಕೆ ಸಂಬಂಧಿಸಿ ಮೈಲ್ಗಳು, ಬ್ಯಾಂಕಿಂಗ್, ಫಿಟ್ನೆಸ್, ಸಮಯ, ಕುಟುಂಬ ಹೀಗೆ ನೂರಾರು ಕೆಲಸಗಳು ಅಂಗೈಯಲ್ಲೇ ಆಗುತ್ತವೆ. ಮನರಂಜನೆ, ಸಾಮಾಜಿಕ ಸಂಪರ್ಕಕ್ಕೆ ಅಂತೂ ಮೊಬೈಲ್ ಅತಿ ಮುಖ್ಯ ವಸ್ತುವಾಗಿದೆ. ಜನರು ಸಾಮಾನ್ಯವಾಗಿ ಸಣ್ಣ ಸಮಯಾವಕಾಶ ಸಿಕ್ಕರೂ ತಮ್ಮ ಸ್ಮಾರ್ಟ್ ಫೋನ್ ಹೊರತೆಗೆದು ಕೂರುತ್ತಾರೆ. ಎಲ್ಲಿ ಮೊಬೈಲ್ ತೆಗೆಯಬಾರದು ಅಥವಾ ಇಂಥಾ ಕಡೆ ಮೊಬೈಲ್ ಬಳಕೆ ಅಪಾಯ ಎಂದು ಆದರೂ ಅಲ್ಲೂ ಮೊಬೈಲ್ ಇಲ್ಲದೆ ಬದುಕುವುದು ಜನರಿಗೆ ಕಷ್ಟ ಎಂಬ ಹಾಗೆ ಆಗಿಬಿಟ್ಟಿದೆ. ಇದರಿಂದ ಕೆಲವೊಮ್ಮೆ ಅಪಾಯವೂ ಸಂಭವಿಸುತ್ತದೆ.
ಮೊಬೈಲ್ನಿಂದ ಸೃಷ್ಟಿಯಾದ ಅವಾಂತರದ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ. ಮೆಟ್ರೋ ರೈಲು ನಿಲ್ದಾಣದಲ್ಲಿ ಇಂತಹ ಘಟನೆಯೊಂದು ನಡೆದಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿ ಮೆಟ್ರೋ ರೈಲು ನಿಲ್ದಾಣದಲ್ಲಿ ಮೊಬೈಲ್ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ರೈಲ್ವೇ ಟ್ರಾಕ್ಗೆ ಬಿದ್ದುಬಿಟ್ಟಿದ್ದಾನೆ. ಮೊಬೈಲ್ ನೋಡುತ್ತಾ ತಾನು ಎಲ್ಲಿ ಹೋಗುತ್ತಿದ್ದೇನೆ ಎಂಬ ಪರಿವೆ ಇಲ್ಲದೆ ಈ ದುರ್ಘಟನೆ ಸಂಭವಿಸಿದೆ.
ಒಬ್ಬ ಸ್ಮಾರ್ಟ್ಫೋನ್ ಬಳಕೆದಾರ ಬ್ಯುಸಿ ಮೆಟ್ರೋ ನಿಲ್ದಾಣ ದೆಹಲಿಯಲ್ಲಿ ರೈಲ್ವೇ ಟ್ರಾಕ್ ಮೇಲೆ ಬಿದ್ದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊಬೈಲ್ ಬಳಕೆದಾರ ರೈಲ್ವೇ ಟ್ರ್ಯಾಕ್ ಮೇಲೆ ಬೀಳುವುದು ಹಾಗೂ ಆ ಬಳಿಕ ಅಲ್ಲಿಂದ ಮೇಲೆ ಹತ್ತಲು ಕಷ್ಟಪಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಆತನಿಗೆ ಅಲ್ಲಿದ್ದ ಸಿಐಎಸ್ಎಫ್ ಸಿಬ್ಬಂದಿ ಮೇಲೆ ಹತ್ತಲು ಸಹಾಯ ಮಾಡಿದ್ದಾರೆ.
A passenger namely Mr. Shailender Mehata, R/O Shadhara, slipped and fell down on the metro track @ Shahdara Metro Station, Delhi. Alert CISF personnel promptly acted and helped him out. #PROTECTIONandSECURITY #SavingLives@PMOIndia @HMOIndia @MoHUA_India pic.twitter.com/Rx2fkwe3Lh
— CISF (@CISFHQrs) February 5, 2022
ಘಟನೆಯಲ್ಲಿ ರೈಲ್ವೇ ಟ್ರ್ಯಾಕ್ಗೆ ಬಿದ್ದ ವ್ಯಕ್ತಿಗೆ ಹೆಚ್ಚೇನೂ ಗಾಯಗಳಾಗಿಲ್ಲ. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಯಾವುದೇ ರೈಲು ಆ ಹಳಿಯ ಮೇಲೆ ಬರುತ್ತಿರಲಿಲ್ಲ. ಹೀಗಾಗಿ ಅದೃಷ್ಟವಷಾತ್ ದೊಡ್ಡ ಅನಾಹುತವೊಂದು ಸಣ್ಣದರಲ್ಲೇ ತಪ್ಪಿದೆ. ಮೆಟ್ರೋ ಹಳಿಯ ಮೇಲೆ ರೈಲು ಬರುವ ಮೊದಲೇ ಆತ ಮೇಲೆ ಬರಲು ಅಲ್ಲಿನ ಸಿಬ್ಬಂದಿ ಕೂಡ ಸಹಕಾರ ನೀಡಿದ್ದಾರೆ. ಆದರೆ, ಈ ಘಟನೆಯಿಂದ ಮೊಬೈಲ್ ಬಳಕೆ ಮಾಡುವಾಗ ನಾವು ಎಷ್ಟು ಎಚ್ಚರವಾಗಿ ಇರಬೇಕು ಎಂದು ಅರ್ಥಮಾಡಿಕೊಳ್ಳಲೇಬೇಕು. ಮೊಬೈಲ್ನಲ್ಲೇ ಮನಸು ಕಳೆದು, ಲೋಕವನ್ನೇ ಮರೆತು ವ್ಯವಹರಿಸಿದರೆ ಇಂತಹ ಸಮಸ್ಯೆಗಳು ಎದುರಾಗಬಹುದು. ಈ ಬಗ್ಗೆ ಸಾಮಾನ್ಯರು ಗಮನ ಇಟ್ಟುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳು, ಅಪಾಯಕಾರಿ ಸ್ಥಳಗಳಲ್ಲಿ ಹೀಗೆ ಮೈಮರೆತು ಮೊಬೈಲ್ ಬಳಸದಂತೆ ಎಚ್ಚರವಾಗಿ ಇರಬೇಕು.
ಇದನ್ನೂ ಓದಿ: ಲತಾಜೀ ಮೃತದೇಹಕ್ಕೆ ಶಾರುಖ್ ಉಗಿದರು ಎಂಬ ಆರೋಪ; ವೈರಲ್ ವಿಡಿಯೋದಲ್ಲಿ ನಿಜಕ್ಕೂ ಇರೋದೇನು?
ಇದನ್ನೂ ಓದಿ: ಪವಾಡಸದೃಶ ರೀತಿಯಲ್ಲಿ ಬಚಾವಾದ ಪರ್ವತಾರೋಹಿ; ಇಲ್ಲಿದೆ ವೈರಲ್ ವಿಡಿಯೋ
Published On - 1:25 pm, Mon, 7 February 22