Judges Appointment: 3 ದಿನದೊಳಗೆ 44 ನ್ಯಾಯಮೂರ್ತಿಗಳ ನೇಮಕ: ಸುಪ್ರೀಂಗೆ ಕೇಂದ್ರದ ಭರವಸೆ

ಸುಪ್ರೀಂಕೋರ್ಟ್​ ಹಾಗೂ ಹೈಕೋರ್ಟ್​ ನ್ಯಾಯಮೂರ್ತಿಗಳ ಬಾಕಿ ಇರುವ ನೇಮಕ ಪ್ರಕ್ರಿಯೆಯನ್ನು 3 ದಿನದೊಳಗೆ ಮುಗಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

Judges Appointment: 3 ದಿನದೊಳಗೆ 44 ನ್ಯಾಯಮೂರ್ತಿಗಳ ನೇಮಕ: ಸುಪ್ರೀಂಗೆ ಕೇಂದ್ರದ ಭರವಸೆ
ಸುಪ್ರೀಂಕೋರ್ಟ್​
Edited By:

Updated on: Jan 06, 2023 | 1:42 PM

ಸುಪ್ರೀಂಕೋರ್ಟ್​ ಹಾಗೂ ಹೈಕೋರ್ಟ್​ ನ್ಯಾಯಮೂರ್ತಿಗಳ ಬಾಕಿ ಇರುವ ನೇಮಕ ಪ್ರಕ್ರಿಯೆಯನ್ನು 3 ದಿನದೊಳಗೆ ಮುಗಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಸುಪ್ರೀಂಕೋರ್ಟ್​ ಹಾಗೂ ಹೈಕೋರ್ಟ್​ನ 44 ನ್ಯಾಯಮೂರ್ತಿಗಳ ಕೊಲಿಜಿಯಂ ಶಿಫಾರಸು ಕೇಂದ್ರ ಸರ್ಕಾರದ ಮುಂದಿದೆ, ನ್ಯಾಯಮೂರ್ತಿಗಳ ನೇಮಕ ವಿಳಂಬಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನೇಮಕಕ್ಕೆ ನೆಲಸ ಕಾನೂನನ್ನು ಪಾಲಿಸುವುದು ಅತ್ಯಗತ್ಯ ಎಂದು ಹೇಳಿದ ಬೆನ್ನಲ್ಲೇ ನ್ಯಾಯಪೀಠಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ.

ಕಾನೂನಿನ ಪ್ರಕಾರದ ಕಾಲಮಿತಿಯನ್ನು ಕೇಂದ್ರ ಸರ್ಕಾರ ಪಾಲಿಸುತ್ತಿದೆ, ಮುಂದಿನ 3 ದಿನದೊಳಗೆ ಬಾಕಿ ಇರುವ 44 ನ್ಯಾಯಮೂರ್ತಿಗಳ ನೇಮಕಕ್ಕೆ ಅಂತಿಮ ಮುದ್ರೆ ಹಾಕಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸುಪ್ರೀಂಕೋರ್ಟ್​ ಹಾಗೂ ಹೈಕೋರ್ಟ್​ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅಸಮಾಧಾನ ವ್ಯಕ್ತಪಡಿಸಿದ್ದರು.

ಮತ್ತಷ್ಟು ಓದಿ: ಕೊಲಿಜಿಯಂ ಬಗ್ಗೆ ಪ್ರಶ್ನಿಸಿದ್ದ ಅರ್ಜಿ ವಜಾ; ಅಲ್ಲಿನ ಚರ್ಚೆ ಬಹಿರಂಗಪಡಿಸಲಾಗುವುದಿಲ್ಲ ಎಂದ ಸುಪ್ರೀಂಕೋರ್ಟ್

ಹೊಸ ನೇಮಕ ವ್ಯವಸ್ಥೆ ಜಾರಿಗೆ ಬರುವವರೆಗೆ ಖಾಲಿ ಹುದ್ದೆಗಳು ಮುಂದುವರೆಯಲಿವೆ ಎಂದೂ ಕೂಡ ಹೇಳಿದ್ದರು,. ಇದಕ್ಕೆ ಪ್ರತಿಕ್ರಿಯಿಸಿದ್ದ ಸುಪ್ರೀಂಕೋರ್ಟ್​ ಎಲ್ಲಾ ವ್ಯವಸ್ಥೆಯಲ್ಲೂ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳಿರುತ್ತವೆ ಆದರೆ ಈ ನೆಲದ ಕಾನೂನನ್ನು ಪಾಲಿಸುವುದು ಅತ್ಯಗತ್ಯ ಎಂದು ಹೇಳಿತ್ತು. ಆದರೆ ಕಳೆದ ಒಂದು ತಿಂಗಳಿಂದಕೇಂದ್ರ ಹಾಗೂ ಸುಪ್ರೀಂಕೋರ್ಟ್​ ನಡುವೆ ಪರೋಕ್ಷ ವಾಕ್​ಸಮರ ನಡೆಯುತ್ತಿತ್ತು ಈಗ ಒಂದು ಹಂತದ ಉತ್ತರ ಸಿಕ್ಕಂತಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ