ಕೊಲಿಜಿಯಂ ಬಗ್ಗೆ ಪ್ರಶ್ನಿಸಿದ್ದ ಅರ್ಜಿ ವಜಾ; ಅಲ್ಲಿನ ಚರ್ಚೆ ಬಹಿರಂಗಪಡಿಸಲಾಗುವುದಿಲ್ಲ ಎಂದ ಸುಪ್ರೀಂಕೋರ್ಟ್
ಡಿಸೆಂಬರ್ 12, 2018 ರಂದು ನಡೆದ ಕೊಲಿಜಿಯಂ ಸಭೆಯ ವಿವರಗಳನ್ನು ಆರ್‌ಟಿಐ ಕಾಯ್ದೆಯಡಿ ಬಹಿರಂಗಪಡಿಸುವಂತೆ ಕೋರಿದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
2018ರ ಕೊಲಿಜಿಯಂ ಸಭೆಯ ವಿವರಗಳನ್ನು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟ್(Supreme Court) ಶುಕ್ರವಾರ ತಿರಸ್ಕರಿಸಿದೆ.ಡಿಸೆಂಬರ್ 12, 2018 ರಂದು ನಡೆದ ಕೊಲಿಜಿಯಂ (Collegium) ಸಭೆಯ ವಿವರಗಳನ್ನು ಆರ್‌ಟಿಐ ಕಾಯ್ದೆಯಡಿ ಬಹಿರಂಗಪಡಿಸುವಂತೆ ಕೋರಿದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಕೊಲಿಜಿಯಂ ಬಹು-ಸದಸ್ಯ ಸಂಸ್ಥೆಯಾಗಿದ್ದು, ಅದರ ತಾತ್ಕಾಲಿಕ ನಿರ್ಧಾರವನ್ನು ಸಾರ್ವಜನಿಕ ಡೊಮೇನ್‌ನಲ್ಲಿ ತರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಕೊಲಿಜಿಯಂ ಸಭೆಗಳಲ್ಲಿ ಚರ್ಚಿಸುವ ಯಾವುದೇ ವಿಷಯ ಸಾರ್ವಜನಿಕ ಡೊಮೇನ್‌ನಲ್ಲಿ ಇರುವುದಿಲ್ಲ. ಅಂತಿಮ ನಿರ್ಧಾರವನ್ನು ಮಾತ್ರ ಅಪ್‌ಲೋಡ್ ಮಾಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.ಇಬ್ಬರು ನ್ಯಾಯಾಧೀಶರ ನೇಮಕದ ಕುರಿತು ಡಿಸೆಂಬರ್ 12, 2018 ರಂದು ನಡೆದ ಕೊಲಿಜಿಯಂ ಸಭೆಯ ವಿವರಗಳನ್ನು ಕೋರಿತ್ತು. ಅರ್ಜಿದಾರರಾದ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ವಿವರಗಳನ್ನು ಕೋರಿದ್ದರು. ಆದರೆ ಅದನ್ನು ನಿರಾಕರಿಸಲಾಯಿತು. ಅದನ್ನು ಅವರು ಪ್ರಶ್ನಿಸಿದ್ದರು.ಆ ಸಭೆಯಲ್ಲಿ ಹಾಜರಿದ್ದ ನ್ಯಾಯಾಧೀಶರೊಬ್ಬರ ಸಂದರ್ಶನಗಳ ಆಧಾರದಲ್ಲಿ ಪ್ರಕಟಿತವಾದ ಲೇಖನವನ್ನು ಅರ್ಜಿದಾರರು ಆಧಾರವಿಗಿಟ್ಟು, ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ನ್ಯಾಯಮೂರ್ತಿ ಗಮನಿಸಿದ್ದಾರೆ.
Supreme Court rejects the plea seeking a copy of the agenda, a copy of the decisions, and a copy of the resolution of a 2018 Collegium meeting. pic.twitter.com/QSPK3o82YS
ಇದನ್ನೂ ಓದಿ— ANI (@ANI) December 9, 2022
ನಾವು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಂತರದ ನಿರ್ಣಯವು ತುಂಬಾ ಸ್ಪಷ್ಟವಾಗಿತ್ತು. ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ, ಅದನ್ನು ವಜಾಗೊಳಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಂದಿನ ಸಭೆಯಲ್ಲಿ ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ಹಿರಿಯ ನ್ಯಾಯಾಧೀಶರಾದ ಮದನ್ ಬಿ ಲೋಕುರ್, ಎಕೆ ಸಿಕ್ರಿ, ಎಸ್‌ಎ ಬೋಬ್ಡೆ ಮತ್ತು ಎನ್‌ವಿ ರಮಣ ಭಾಗಿಯಾಗಿದ್ದು ನ್ಯಾಯಾಧೀಶರ ನೇಮಕಾತಿ ಕುರಿತು ಕೆಲವು ನಿರ್ಧಾರಗಳನ್ನು ತೆಗೆದುಕೊಂಡರು. ಸಭೆಯ ವಿವರಗಳನ್ನು ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿಲ್ಲ. ನಂತರ ನಿರ್ಧಾರಗಳನ್ನು ರದ್ದುಗೊಳಿಸಲಾಯಿತು.
ನ್ಯಾಯಮೂರ್ತಿ ಲೋಕೂರ್ ಅವರು 2019 ರ ಜನವರಿಯಲ್ಲಿ ಆ ಸಭೆಯಲ್ಲಿ ನಿರ್ಣಯವನ್ನು ಅಪ್‌ಲೋಡ್ ಮಾಡದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:26 am, Fri, 9 December 22