AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾರ್ಖಂಡ್​​ನಲ್ಲಿ ಮೊಟ್ಟ ಮೊದಲ ಬಾರಿಗೆ ಬೂದು ಬಣ್ಣದ ತೋಳ ಪತ್ತೆ

ಈ ರೀತಿಯ ಬೂದು ಬಣ್ಣದ ತೋಳಗಳು ಬಹಳ ಅಪರೂಪದ್ದಾಗಿವೆ. ಈ ತೋಳಗಳು ಹೆಚ್ಚಾಗಿ ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಕಂಡುಬರುತ್ತವೆ.

ಜಾರ್ಖಂಡ್​​ನಲ್ಲಿ ಮೊಟ್ಟ ಮೊದಲ ಬಾರಿಗೆ ಬೂದು ಬಣ್ಣದ ತೋಳ ಪತ್ತೆ
ಬೂದು ಬಣ್ಣದ ತೋಳ
TV9 Web
| Updated By: ಸುಷ್ಮಾ ಚಕ್ರೆ|

Updated on: Dec 09, 2022 | 1:03 PM

Share

ಕೋಡೆರ್ಮಾ: ಜಾರ್ಖಂಡ್​​ನ ಕೊಡೆರ್ಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಬೂದು ಬಣ್ಣದ ತೋಳವೊಂದು ಪತ್ತೆಯಾಗಿದೆ. ಕೊಡೆರ್ಮಾ ಮತ್ತು ಹಜಾರಿಬಾಗ್ ವನ್ಯಜೀವಿ ವಿಭಾಗಗಳಲ್ಲಿ ಸಮೀಕ್ಷೆ ನಡೆಸುತ್ತಿರುವ ಡೆಹ್ರಾಡೂನ್ (Dehradun) ಮೂಲದ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII)ದ 10 ಸದಸ್ಯರ ತಂಡ ಜಾರ್ಖಂಡ್‌ನಲ್ಲಿ (Jharkhand) ಮೊದಲ ಬಾರಿಗೆ ಅಳಿವಿನಂಚಿನಲ್ಲಿರುವ ಭಾರತೀಯ ಬೂದು ತೋಳವನ್ನು (Grey Wolf) ಪತ್ತೆಹಚ್ಚಿದೆ.

ಈ ರೀತಿಯ ಬೂದು ಬಣ್ಣದ ತೋಳಗಳು ಬಹಳ ಅಪರೂಪದ್ದಾಗಿವೆ. ಭಾರತೀಯ ಪ್ರಭೇದವಾದ ಈ ತೋಳದ ಫೋಟೋವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಮನುಷ್ಯರೊಂದಿಗಿನ ಸಂಘರ್ಷ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿನ ತೊಂದರೆಯಿಂದಾಗಿ ಸದ್ಯಕ್ಕೆ ಭಾರತದಲ್ಲಿ ಭಾರತೀಯ ಬೂದು ತೋಳಗಳ (ಕ್ಯಾನಿಸ್ ಲೂಪಸ್) ಸಂಖ್ಯೆ 1,500-2,000ಕ್ಕೆ ಕುಸಿದಿದೆ ಎಂದು ವರದಿಗಳು ಸೂಚಿಸುತ್ತವೆ. ಈ ತೋಳಗಳು ಹೆಚ್ಚಾಗಿ ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ: Viral Video: ಹೆಣ್ಣು ಸಿಂಹವನ್ನು ತೋಳಲ್ಲಿ ಹೊತ್ತು ನಡೆದ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಶಾಕ್

ಈ ಬಗ್ಗೆ ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದ್ದು, ಇದೇ ಮೊದಲ ಬಾರಿಗೆ ಜಾರ್ಖಂಡ್​​ನಲ್ಲಿ ಈ ಬೂದು ಬಣ್ಣದ ತೋಳವನ್ನು ಪತ್ತೆಹಚ್ಚಲಾಗಿದೆ. ಕಳೆದ ಕೆಲವು ದಿನಗಳಿಂದ ಕೊಡೆರ್ಮಾ ಅರಣ್ಯ ವಿಭಾಗ, ಹಜಾರಿಬಾಗ್ ಪಶ್ಚಿಮ ವಿಭಾಗ ಮತ್ತು ಹಜಾರಿಬಾಗ್ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ 3 ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ತಂಡವು ಸಮೀಕ್ಷೆ ನಡೆಸುತ್ತಿದ್ದು, ಇನ್ನೂ ಕೆಲವು ವಾರಗಳವರೆಗೆ ಈ ಸಮೀಕ್ಷೆ ಮುಂದುವರಿಯಲಿದೆ. ಈ ಸಮೀಕ್ಷೆಗಾಗಿ ವಿವಿಧೆಡೆ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಹಿಂದೂ ಕಾರ್ಯಕರ್ತನ ಹತ್ಯೆ ಹಿನ್ನೆಲೆ ಜಾರ್ಖಂಡ್​ನಲ್ಲಿ ನಿಷೇಧಾಜ್ಞೆ ಜಾರಿ

ಕೊಡೆರ್ಮಾ ಅರಣ್ಯ ವಿಭಾಗದಲ್ಲಿ 19 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕ್ಯಾಮೆರಾ ಟ್ರ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಈ ಬಗ್ಗೆ ಕೊಡೆರ್ಮಾದ ವಿಭಾಗೀಯ ಅರಣ್ಯಾಧಿಕಾರಿ ಸೂರಜ್ ಕುಮಾರ್ ಸಿಂಗ್ ಮಾತನಾಡಿದ್ದು, ಪರಿಸರದ ದೃಷ್ಟಿಯಿಂದ ಇದು ಉತ್ತಮ ಸಂಕೇತವಾಗಿದೆ. ಈ ತೋಳಗಳನ್ನು ಪ್ರಮುಖ ಜಾತಿಗಳೆಂದು ಪರಿಗಣಿಸಲಾಗುತ್ತದೆ. ನಾವು ಪತ್ತೆ ಮಾಡಿದ ತೋಳವು ಪಲಾಮು ಹುಲಿ ಸಂರಕ್ಷಿತ ಪ್ರದೇಶದಿಂದ ಬಂದಿರಬಹುದು ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ