ಸುಪ್ರೀಂ ಮಾತಿನ ಚಾಟಿ: ನ್ಯಾಯಾಧೀಶ ಸನ್ಯಾಸಿ ರೀತಿ ಇರಬೇಕು

|

Updated on: Dec 13, 2024 | 12:06 PM

ನ್ಯಾಯಾಧೀಶರು ಸನ್ಯಾಸಿಯ ಜೀವನ ನಡೆಸಬೇಕು ಮತ್ತು ಕುದುರೆಯಂತೆ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಧೀಶರು ಸಾಮಾಜಿಕ ಮಾಧ್ಯಮವನ್ನು ಬಳಸುವುದನ್ನು ತಪ್ಪಿಸಬೇಕು ಮತ್ತು ತೀರ್ಪುಗಳ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣವು 2017 ಮತ್ತು 2018 ರಲ್ಲಿ ಕ್ರಮವಾಗಿ ಮಧ್ಯಪ್ರದೇಶ ನ್ಯಾಯಾಂಗ ಸೇವೆಗೆ ಸೇರ್ಪಡೆಗೊಂಡ ಇಬ್ಬರು ಸಿವಿಲ್ ನ್ಯಾಯಾಧೀಶರಾದ ಅದಿತಿ ಕುಮಾರ್ ಶರ್ಮಾ ಮತ್ತು ಸರಿತಾ ಚೌಧರಿ ಅವರನ್ನು ವಜಾಗೊಳಿಸುವುದಕ್ಕೆ ಸಂಬಂಧಿಸಿದೆ.

ಸುಪ್ರೀಂ ಮಾತಿನ ಚಾಟಿ: ನ್ಯಾಯಾಧೀಶ ಸನ್ಯಾಸಿ ರೀತಿ ಇರಬೇಕು
ಸುಪ್ರೀಂಕೋರ್ಟ್​
Follow us on

‘‘ನ್ಯಾಯಾಧೀಶರು ಸನ್ಯಾಸಿಗಳಂತೆ ಬದುಕಬೇಕು, ಕುದುರೆಗಳಂತೆ ಕೆಲಸ ಮಾಡಬೇಕು’’ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಮಧ್ಯಪ್ರದೇಶ ಹೈಕೋರ್ಟ್‌ನಿಂದ ಇಬ್ಬರು ಮಹಿಳಾ ನ್ಯಾಯಾಂಗ ಅಧಿಕಾರಿಗಳನ್ನು ವಜಾಗೊಳಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠ, ನ್ಯಾಯಾಧೀಶರು ಕುದುರೆಗಳಂತೆ ಕೆಲಸ ಮಾಡಬೇಕು ಮತ್ತು ತೀರ್ಪುಗಳ ಬಗ್ಗೆ ಪ್ರತಿಕ್ರಿಯಿಸಬಾರದು ಎಂದು ಹೇಳಿದೆ.

ನ್ಯಾಯಾಂಗದಲ್ಲಿ ಪ್ರದರ್ಶನಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಂಗ ಅಧಿಕಾರಿಗಳು ಫೇಸ್‌ಬುಕ್‌ ಬಳಸಬಾರದು ಎಂದು ನ್ಯಾಯಾಲಯ ಹೇಳಿದೆ. ಸಂತನಂತೆ ಬದುಕಬೇಕು, ಕುದುರೆಯಂತೆ ದುಡಿಯಬೇಕು. ನ್ಯಾಯಾಂಗ ಅಧಿಕಾರಿಗಳು ಸಾಕಷ್ಟು ತ್ಯಾಗ ಮಾಡಬೇಕಾಗುತ್ತದೆ.

ಈ ಪ್ರಕರಣವು 2017 ಮತ್ತು 2018 ರಲ್ಲಿ ಕ್ರಮವಾಗಿ ಮಧ್ಯಪ್ರದೇಶ ನ್ಯಾಯಾಂಗ ಸೇವೆಗೆ ಸೇರ್ಪಡೆಗೊಂಡ ಇಬ್ಬರು ಸಿವಿಲ್ ನ್ಯಾಯಾಧೀಶರಾದ ಅದಿತಿ ಕುಮಾರ್ ಶರ್ಮಾ ಮತ್ತು ಸರಿತಾ ಚೌಧರಿ ಅವರನ್ನು ವಜಾಗೊಳಿಸುವುದಕ್ಕೆ ಸಂಬಂಧಿಸಿದೆ.

ಮತ್ತಷ್ಟು ಓದಿ: ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

2023ರಲ್ಲಿ ಒಟ್ಟು ಆರು ಮಹಿಳಾ ನ್ಯಾಯಾಂಗ ಅಧಿಕಾರಿಗಳನ್ನು ವಜಾಗೊಳಿಸಲಾಗಿತ್ತು. ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಹೈಕೋರ್ಟ್ ಅನ್ನು ಕೇಳಿದಾಗ, ಮಧ್ಯಪ್ರದೇಶ ಹೈಕೋರ್ಟ್ ನಾಲ್ವರು ಅಧಿಕಾರಿಗಳಿಗೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಹಿಂತೆಗೆದುಕೊಂಡಿತು, ಆದರೆ ಈ ಇಬ್ಬರು ಅಧಿಕಾರಿಗಳ ವಿರುದ್ಧದ ವಜಾ ಆದೇಶವನ್ನು ಹಿಂಪಡೆಯಲು ನಿರಾಕರಿಸಿತು.

ವಜಾಗೊಂಡ ಮಹಿಳಾ ನ್ಯಾಯಾಧೀಶರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಹಿರಿಯ ವಕೀಲ ಗೌರವ್ ಅಗರ್ವಾಲ್ ಪೀಠಕ್ಕೆ ತಿಳಿಸಿದಾಗ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:05 pm, Fri, 13 December 24