ಗುಜರಾತ್: ಚಲಿಸುತ್ತಿದ್ದ ರೈಲಿನೆದುರು ಹಾರಿ ತಂದೆ ಹಾಗೂ ಮೂವರು ಮಕ್ಕಳು ಆತ್ಮಹತ್ಯೆ

|

Updated on: Jan 01, 2024 | 10:13 AM

ಚಲಿಸುತ್ತಿದ್ದ ರೈಲಿನೆದುರು ಹಾರಿ ತಂದೆ ಹಾಗೂ ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್​ನ ಬೊಟಾಡ್​ ಜಿಲ್ಲೆಯಲ್ಲಿ ನಡೆದಿದೆ. 42 ವರ್ಷದ ವ್ಯಕ್ತಿ ಮೂವರು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಪ್ರಾಣಬಿಟ್ಟಿದ್ದಾರೆ. ಕೊಲೆಯ ಯತ್ನ ಪ್ರಕರಣದಲ್ಲಿ ಜಾಮೀನಿನ ಮೇಲೆ ಅವರು ಹೊರಬಂದಿದ್ದರು.

ಗುಜರಾತ್: ಚಲಿಸುತ್ತಿದ್ದ ರೈಲಿನೆದುರು ಹಾರಿ ತಂದೆ ಹಾಗೂ ಮೂವರು ಮಕ್ಕಳು ಆತ್ಮಹತ್ಯೆ
ರೈಲು ಹಳಿ
Follow us on

ಚಲಿಸುತ್ತಿದ್ದ ರೈಲಿನೆದುರು ಹಾರಿ ತಂದೆ ಹಾಗೂ ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್​ನ ಬೊಟಾಡ್​ ಜಿಲ್ಲೆಯಲ್ಲಿ ನಡೆದಿದೆ. 42 ವರ್ಷದ ವ್ಯಕ್ತಿ ಮೂವರು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಪ್ರಾಣಬಿಟ್ಟಿದ್ದಾರೆ. ಕೊಲೆಯ ಯತ್ನ ಪ್ರಕರಣದಲ್ಲಿ ಜಾಮೀನಿನ ಮೇಲೆ ಅವರು ಹೊರಬಂದಿದ್ದರು.

ಮೃತರನ್ನು ಮಂಗಾಭಾಯಿ ವಿಜುದಾ ಎಂದು ಗುರುತಿಸಲಾಗಿದ್ದು, ಅವರ ಪುತ್ರಿಯರಾದ ಸೋನಂ (17), ರೇಖಾ (21) ಮತ್ತು ಮಗ ಜಿಗ್ನೇಶ್ (19) ಬೋಟಾಡ್‌ನ ಗಧಾಡಾ ತಾಲೂಕಿನ ನಾನಾ ಸಖ್‌ಪರ್ ಗ್ರಾಮದವರಾಗಿದ್ದಾರೆ.

ಈ ಘಟನೆಯು ಭಾನುವಾರ ಸಂಜೆ 6.30ರ ಸುಮಾರಿಗೆ ನಡೆದಿದೆ. ನಿಂಗಲಾ ಹಾಗೂ ಆಲಂಪುರ ನಿಲ್ದಾಣಗಳ ನಡುವೆ ನಡೆದಿದೆ ಎಂದು ರೈಲ್ವೆ ರಕ್ಷಣಾ ಪಡೆ ಸಬ್​ ಇನ್ಸ್​ಪೆಕ್ಟರ್ ವಿಎಸ್​ ಗೋಲೆ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸಂಬಂಧಿಕರೊಂದಿಗೆ ಜಗಳವಾಡಿ ಕೊಲೆ ಯತ್ನ ನಡೆಸಿದ್ದರು, ಬಳಿಕ ಕೊಲೆ ಯತ್ನದ ಆರೋಪದ ಮೇಲೆ ವಿಜುದಾ ಬಂಧನಕ್ಕೊಳಗಾಗಿದ್ದರು, ಆಮೇಲೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಮತ್ತಷ್ಟು ಓದಿ: ತುಮಕೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಬೆಂಗಳೂರಿನಿಂದ ಹೋಗಿ ರೈಲಿಗೆ ತಲೆ ಕೊಟ್ರು

ನಾಲ್ವರು ಭಾವನಗರದಿಂದ ಗಾಂಧಿಧಾಮ್​ಗೆ ಹೋಗುತ್ತಿದ್ದ ರೈಲಿನ ಮುಂದೆ ಹಾರಿದ್ದಾರೆ. ಹಳಿಗಳ ಉದ್ದಕ್ಕೂ ನಾಲ್ವರ ಶವಗಳು ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ