ಆಂಧ್ರದ ಕೋನಸೀಮಾ ಜಿಲ್ಲೆಯ ತೀರದಲ್ಲಿ ಸಿಕ್ತು 3 ಲಕ್ಷ ರೂ ಬೆಲೆಯ ಕಚಿಡಿ ಮೀನು! ಏನಿದರ ಔಷಧೀಯ ಗುಣಗಳು?

| Updated By: ಸಾಧು ಶ್ರೀನಾಥ್​

Updated on: Oct 13, 2022 | 12:48 PM

ಗಂಡು ಕಚಿಡಿ ಮೀನುಗಳು ಚಿನ್ನದ ಬಣ್ಣವನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಚಿನ್ನದ ಮೀನು ಎಂದೂ ಕರೆಯುತ್ತಾರೆ. ಈ ಮೀನು ಅಮೂಲ್ಯವಾಗಿದ್ದು, ಬಲೆ ಬೀಸಿ ಇದನ್ನು ಹಿಡಿದವರ ಜೀವನವೇ ಬದಲಾಗುತ್ತದೆ.

ಆಂಧ್ರದ ಕೋನಸೀಮಾ ಜಿಲ್ಲೆಯ ತೀರದಲ್ಲಿ ಸಿಕ್ತು 3 ಲಕ್ಷ ರೂ ಬೆಲೆಯ ಕಚಿಡಿ ಮೀನು! ಏನಿದರ ಔಷಧೀಯ ಗುಣಗಳು?
ಆಂಧ್ರದ ಕೋನಸೀಮಾ ಜಿಲ್ಲೆಯ ತೀರದಲ್ಲಿ ಸಿಕ್ತು 3 ಲಕ್ಷ ರೂ ಬೆಲೆಯ ಕಚಿಡಿ ಮೀನು! ಏನಿದರ ಔಷಧೀಯ ಗುಣಗಳು?
Follow us on

ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಅಂತರವೇದಿ ಸಮುದ್ರ ತೀರದಲ್ಲಿ (Antarvedi seashore) ಅಪರೂಪದ ಮೀನು ಬಲೆಗೆ ಸಿಕ್ಕಿಬಿದ್ದಿದೆ. ಉಪ್ಪಡದ (Uppada ) ಮೀನುಗಾರರೊಬ್ಬರು ಗಂಡು ಕಚಿಡಿ ಮೀನು (kachidi fish) ಹಿಡಿದಿದ್ದಾರೆ. ಇದನ್ನು ಸ್ಥಳೀಯ ದಲ್ಲಾಳಿಯೊಬ್ಬರು ಹರಾಜಿನಲ್ಲಿ ರೂಪಾಯಿ 2 ಲಕ್ಷ 90 ಸಾವಿರಕ್ಕೆ ಪಡೆದುಕೊಂಡಿದ್ದಾರೆ. ಈ ಮೀನಿನ ಹೊಟ್ಟೆಯ ಭಾಗವು ಹೆಚ್ಚು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಈ ಮೀನಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಕಚಿಡಿ ಮೀನನ್ನು ಸಮುದ್ರ ಚಿನ್ನದ ಮೀನು ಎಂದೂ ಕರೆಯಲ್ಪಡುತ್ತದೆ.

kachidi fish medicinal values -ಕಚಿಡಿ ಮೀನಿನ ಔಷಧೀಯ ಗುಣಗಳು:

ಈ ಕಚಿಡಿ ಮೀನು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಶಸ್ತ್ರಚಿಕಿತ್ಸೆಯ ವೇಳೆ ಬಳಸಲು, ಈ ಮೀನಿನ ಗಾಲ್ ಬ್ಲಾಡೆರ್​​ ಕೋಶದಿಂದ ಹೊಲಿಗೆ ದಾರವನ್ನು ತಯಾರಿಸಲಾಗುತ್ತದೆ. ಕಾಸ್ಲಿ ವೈನ್‌ಗಳಿಗೆ ಈ ಮೀನನ್ನು ಸೇರಿಸುವುದರಿಂದ ವೈನ್‌ನ ಬೆಲೆಯೂ ಹೆಚ್ಚಾಗುತ್ತದೆ ಎನ್ನುತ್ತಾರೆ. ಕಚಿಡಿ ಮೀನಿನ ಹೊಟ್ಟೆ ಭಾಗವನ್ನು ಶಕ್ತಿವರ್ಧಕ ಔಷಧಿಗಳಲ್ಲಿ ಬಳಸಲಾಗುತ್ತದೆ.

ಗಂಡು ಕಚಿಡಿ ಮೀನುಗಳು ಚಿನ್ನದ ಬಣ್ಣವನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಚಿನ್ನದ ಮೀನು ಎಂದೂ ಕರೆಯುತ್ತಾರೆ. ಈ ಮೀನು ಅಮೂಲ್ಯವಾಗಿದ್ದು, ಬಲೆ ಬೀಸಿ ಇದನ್ನು ಹಿಡಿದವರ ಜೀವನವೇ ಬದಲಾಗುತ್ತದೆ. ಅದಕ್ಕಾಗಿಯೇ ಈ ಮೀನು ತುಂಬಾ ವಿಶೇಷವಾಗಿದೆ ಎಂದು ಹೇಳಲಾಗುತ್ತದೆ. ಈ ಹಿಂದೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಮೀನುಗಾರರಿಗೆ ಈ ಮೀನು ಸಿಕ್ಕಿತ್ತು. ಇದರ ತೂಕ 30 ಕೆ.ಜಿ. ಯಷ್ಟಿತ್ತು. ಉದ್ಯಮಿಯೊಬ್ಬರು ಎರಡು ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದರಿಂದ ಈ ಸುದ್ದಿ ಚರ್ಚೆಗೆ ಗ್ರಾಸವಾಯಿತು.