ಕಾನ್ಪುರ: ವಾರ್ಷಿಕ ಕ್ರೀಡಾಕೂಟದ ಕಬಡ್ಡಿ ಪಂದ್ಯ ವೇಳೆ ಎರಡು ತಂಡಗಳ ನಡುವೆ ಕಾಳಗ, ವಿಡಿಯೋ ವೈರಲ್
ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ವಾರ್ಷಿಕ ಕ್ರೀಡಾ ಉತ್ಸವದ ಕಬಡ್ಡಿ ಪಂದ್ಯದಲ್ಲಿ ಎರಡು ತಂಡಗಳ ನಡುವೆ ಜಗಳ ನಡೆದಿದೆ. ಎರಡು ತಂಡಗಳು ಕುರ್ಚಿ, ಆಯುಧಗಳಿಂದ ಹಿಂಸಾತ್ಮಕ ಕಾದಾಟವನ್ನು ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ.
ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ವಾರ್ಷಿಕ ಕ್ರೀಡಾ ಉತ್ಸವದ ಕಬಡ್ಡಿ ಪಂದ್ಯದಲ್ಲಿ ಎರಡು ತಂಡಗಳ ನಡುವೆ ಜಗಳ ನಡೆದಿದೆ. ಎರಡು ತಂಡಗಳು ಕುರ್ಚಿ, ಆಯುಧಗಳಿಂದ ಹಿಂಸಾತ್ಮಕ ಕಾದಾಟವನ್ನು ನಡೆಸಿದ್ದಾರೆ. ಇದೀಗ ಈ ಕಾಳಗದ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ್ರೆ ಬೆಚ್ಚಿ ಬೀಳಿಸುವಂತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಎರಡು ತಂಡದ ಸದಸ್ಯರು ಖರ್ಚಿಗಳಿಂದ, ಕೈಗೆ ಸಿಕ್ಕಿದ ವಸ್ತುಗಳಿಂದ ಪರಸ್ಪರ ಹೊಡೆದಾಡುಕೊಳ್ಳುತ್ತಿರುವುದನ್ನು ಕಾಣಬಹುದು. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದು ಕಬಡ್ಡಿ ಅಲ್ಲ, WW ಎಂದು ಕರೆದಿದ್ದಾರೆ.
ಈ ವಿಡಿಯೋ ಎಲ್ಲ ಕಡೆ ವೇಗವಾಗಿ ವೈರಲ್ ಆಗಿದ್ದು, 180,000 ವೀಕ್ಷಣೆ ಪಡೆದುಕೊಂಡಿದೆ. ಸಾವಿರಕ್ಕೂ ಹೆಚ್ಚು ಲೈಕ್ ಪಡೆದುಕೊಂಡಿದ್ದು, ಈ ವಿಡಿಯೋಗೆ ಅನೇಕರು ಕಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರ ಇವರುಗಳು ನಮ್ಮ ದೇಶದ ಭವಿಷ್ಯ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಇಷ್ಟು ದೊಡ್ಡ ಜಗಳ ನಡೆಯುತ್ತಿದೆ, ಆದರೆ ಈ ವಿಡಿಯೋದಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಪಾಡಿಗೆ ಟೇಬಲ್ ಮೇಲೆ ಕುಳಿತುಕೊಂಡಿದ್ದಾನೆ. ಅವನಿಗೆ ಯಾವುದರ ಚಿಂತೆಯು ಇಲ್ಲ ಎಂದು ಹಾಸ್ಯವಾಗಿ ಕಮೆಂಟ್ ಮಾಡಿದ್ದಾರೆ.
Kalesh in IIT Kanpur pic.twitter.com/J5QCeBmjRo
— Aryan Trivedi (@AryanTrivedi_7) October 8, 2023
ಇದನ್ನೂ ಓದಿ: ಮಧ್ಯರಾತ್ರಿ ಎದುರು ಮನೆ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದು ದೆವ್ವನಾ? ವಿಡಿಯೋ ವೈರಲ್ ಆಗಿದೆ
ಐಐಟಿ ಕಾನ್ಪುರದಲ್ಲಿ ನಡೆದ ಅಂತರ್ ರಾಜ್ಯ ಕ್ರೀಡಾ ಕೂಟವಾಗಿತ್ತು. ಇದರಲ್ಲಿ 400 ಹೆಚ್ಚು ಕಾಲೇಜುಗಳು ಭಾಗವಹಿಸುತ್ತದೆ. ಇನ್ನು ಈ ಎರಡು ತಂಡಗಳು ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿ ವಿದ್ಯಾರ್ಥಿಗಳಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಐಐಟಿ ಸೂಕ್ತ ಕ್ರಮವನ್ನು ತೆಗೆದುಕೊಂಡು, ಎರಡು ತಂಡಗಳನ್ನು ಸ್ಪರ್ಧೆಯಿಂದ ನಿಷೇಧಿಸಲಾಗಿದೆ. ಘಟನೆಯ ಬಗ್ಗೆ ಎರಡು ತಂಡಗಳ ಕಾಲೇಜುಗಳಿಗೆ ನೋಟಿಸ್ ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ