Kargil Vijay Diwas Wishes 2024: ನಿಮ್ಮ ಪ್ರೀತಿ ಪಾತ್ರರಿಗೆ ಈ ಸಂದೇಶ ಕಳುಹಿಸಿ ಭಾರತೀಯ ಸೈನ್ಯದ ಗೆಲುವನ್ನು ಸ್ಮರಿಸಿ

ಭಾರತದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಗಿಲ್ ಯುದ್ಧ ವೀರರ ಗೌರವಾರ್ಥವಾಗಿ ಜುಲೈ 26 ರಂದು ಆಚರಿಸಲಾಗುತ್ತದೆ. ಇದನ್ನು ಆಪರೇಷನ್ ವಿಜಯ್ ಎಂದೂ ಸಹ ಕರೆಯಲಾಗುತ್ತದೆ. ಈ ವರ್ಷ 25 ನೇ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತಿದ್ದು, ಈ ದಿನದಂದು ನಿಮ್ಮ ಆಪ್ತರಿಗೆ ಹಾಗೂ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಸಂದೇಶಗಳು ಇಲ್ಲಿವೆ.

Kargil Vijay Diwas Wishes 2024: ನಿಮ್ಮ ಪ್ರೀತಿ ಪಾತ್ರರಿಗೆ ಈ ಸಂದೇಶ ಕಳುಹಿಸಿ ಭಾರತೀಯ ಸೈನ್ಯದ ಗೆಲುವನ್ನು ಸ್ಮರಿಸಿ
ಕಾರ್ಗಿಲ್ ವಿಜಯ್ ದಿವಸ್
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 25, 2024 | 3:33 PM

ಜುಲೈ 26 ರಂದು ದೇಶದ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ದಿನವಾಗಿದೆ. ಹೌದು, ನಮ್ಮ ಸೈನಿಕರ ಶ್ರಮಕ್ಕೆ ಸಿಕ್ಕ ವಿಜಯದ ದಿನವಾಗಿದೆ. 1999 ರಲ್ಲಿ ಈ ದಿನದಂದು, ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಭೂಪ್ರದೇಶಕ್ಕೆ ನುಗ್ಗಿದ ಪಾಕಿಸ್ತಾನಿಯರ ವಿರುದ್ಧ ಭಾರತೀಯ ಸೈನಿಕರು ಹೋರಾಡಿ ಗೆದ್ದು ಜಯಿಸಿದರು. ಆದರೆ ಈ ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ. ಈ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಸಂದೇಶಗಳನ್ನು ಕಳುಹಿಸಿ ಈ ವಿಜಯವನ್ನು ಆನಂದಿಸಬಹುದು.

  1. ಆಪತ್ಕಾಲದಲ್ಲಿ ನಿಂತು ಪ್ರಾಣವನ್ನು ಲೆಕ್ಕಿಸದೇ ತಮ್ಮ ಮಾತೃಭೂಮಿಯನ್ನು ರಕ್ಷಿಸಿದ ವೀರರಿಗೆ ನಮನ ಸಲ್ಲಿಸೋಣ. ಜೈ ಹಿಂದ್ ಕಾರ್ಗಿಲ್ ವಿಜಯ ದಿನದ ಶುಭಾಶಯಗಳು.
  2. ಕಾರ್ಗಿಲ್ ಯುದ್ಧದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ತಾಯಿ, ಸಹೋದರಿ, ತಂದೆ ಮತ್ತು ಸಹೋದರನಿಗೆ ನಮ್ಮ ಬೆಂಬಲವನ್ನು ತೋರಿಸೋಣ. ಕಾರ್ಗಿಲ್ ವಿಜಯ ದಿನದ ಶುಭಾಶಯಗಳು.
  3. ನಮ್ಮ ದೇಶವು ನಮಗಾಗಿ ಏನು ಮಾಡಿದೆ ಎಂದು ಕೇಳಬೇಡಿ, ನಮ್ಮ ದೇಶಕ್ಕಾಗಿ ನಾವು ಏನು ಮಾಡಬಹುದು ಎಂದು ಕೇಳಿ. ಕಾರ್ಗಿಲ್ ವಿಜಯ ದಿವಸದ ಶುಭಾಶಯಗಳು
  4. ನಮ್ಮ ಮಹಾನ್ ರಾಷ್ಟ್ರವನ್ನು ರಕ್ಷಿಸಲು ಕರ್ತವ್ಯದ ಹಾದಿಯಲ್ಲಿ ಮರಣ ಹೊಂದಿದ ಆ ಧೈರ್ಯಶಾಲಿ ಸೈನಿಕರ ತ್ಯಾಗವನ್ನು ನೆನಪಿಸಿಕೊಳ್ಳೋಣ. ಜೈ ಹಿಂದ್ ಕಾರ್ಗಿಲ್ ವಿಜಯ ದಿವಸದ ಶುಭಾಶಯಗಳು.
  5. ಧೈರ್ಯಶಾಲಿಗಳಾದ ನಮ್ಮ ಎಲ್ಲಾ ಸೈನಿಕರಿಗೆ ನಮಸ್ಕರಿಸೋಣ, ಹಗಲು ಮತ್ತು ರಾತ್ರಿ ಎನ್ನದೆ ನಮ್ಮನ್ನು ರಕ್ಷಿಸುವ ಸೈನಿಕರಿಗೆ ಕಾರ್ಗಿಲ್ ವಿಜಯ ದಿವಸದ ಶುಭಾಶಯಗಳು.
  6. ಗಾಳಿಯಿಂದ ನಮ್ಮ ಧ್ವಜ ಹಾರುವುದಿಲ್ಲ. ದೇಶಕ್ಕಾಗಿ ಮಡಿದ ಪ್ರತಿಯೊಬ್ಬ ಸೈನಿಕನ ಕೊನೆಯ ಉಸಿರಿನೊಂದಿಗೆ ಅದು ಹಾರುತ್ತದೆ. ಕಾರ್ಗಿಲ್ ವಿಜಯ್ ದಿವಸದ ಶುಭಾಶಯಗಳು.
  7. ಒಂದು ರಾಷ್ಟ್ರವು ತನ್ನಷ್ಟಕ್ಕೆ ತಾನೇ ಬಲಿಷ್ಠವಾಗಿಲ್ಲ, ಅದು ತನ್ನ ದೇಶಭಕ್ತ ಸೈನಿಕರ ಅಸಂಖ್ಯಾತ ಪ್ರಯತ್ನಗಳು ಮತ್ತು ತ್ಯಾಗದಿಂದ ಬಲಶಾಲಿಯಾಗಿದೆ. ಕಾರ್ಗಿಲ್ ವಿಜಯ ದಿನದ ಶುಭಾಶಯಗಳು

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:07 am, Wed, 24 July 24