ಕೇರಳದಲ್ಲೀಗ ನಂದಿನಿ vs ಮಿಲ್ಮಾ ಹಾಲಿನ ಸಮರ; ಕರ್ನಾಟಕಕ್ಕೆ ಪತ್ರ ಬರೆದ ಹಾಲು ಒಕ್ಕೂಟ

|

Updated on: Jun 15, 2023 | 8:40 PM

ನಾನು ಡಿಸೆಂಬರ್‌ನಲ್ಲಿ ಕರ್ನಾಟಕ ಹಾಲು ಒಕ್ಕೂಟಕ್ಕೆ ಪತ್ರ ಬರೆದಿದ್ದೆ. ಕೇರಳದಲ್ಲಿ ಹಾಲಿನ ಕೊರತೆ ಎದುರಾದಾಗಲೆಲ್ಲಾ ನಾವು ನಂದಿನಿ ಹಾಲನ್ನು ಖರೀದಿಸಿದ್ದೇವೆ. ಇದು ಸರಿಯಲ್ಲ ಎಂದು ನಾನು ಕರ್ನಾಟಕಕ್ಕೆ ಪತ್ರ ಬರೆದಿದ್ದೇನೆ ಎಂದು ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ ಹೇಳಿದ್ದಾರೆ.

ಕೇರಳದಲ್ಲೀಗ ನಂದಿನಿ vs ಮಿಲ್ಮಾ ಹಾಲಿನ ಸಮರ; ಕರ್ನಾಟಕಕ್ಕೆ ಪತ್ರ ಬರೆದ ಹಾಲು ಒಕ್ಕೂಟ
ನಂದಿನಿ- ಮಿಲ್ಮಾ
Follow us on

ಬೆಂಗಳೂರು: ಕರ್ನಾಟಕ ಮತ್ತು ಕೇರಳ (Kerala) ನಡುವೆ ಈಗ ಹಾಲು ಯುದ್ಧ ನಡೆಯುತ್ತಿದೆ. ಎಡಪಕ್ಷ ಆಡಳಿತದ ಕೇರಳದಲ್ಲಿನ ಹಾಲು ಒಕ್ಕೂಟವು ಕರ್ನಾಟಕಕ್ಕೆ (Karnataka) ಪತ್ರಬರೆದಿದ್ದು , ನಂದಿನಿಯ (Nandini) ಮಾರಾಟ ಯೋಜನೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ .ಕೇರಳದ ಸ್ಥಳೀಯ ಹಾಲಿನ ಬ್ರಾಂಡ್ ಮಿಲ್ಮಾವನ್ನು (Milma) ರಕ್ಷಿಸುವ ಪ್ರಯತ್ನದಲ್ಲಿ ರಾಷ್ಟ್ರೀಯ ಡೈರಿ ಡೆವಲಪ್‌ಮೆಂಟ್ ಬೋರ್ಡ್‌ನ ಮಧ್ಯಸ್ಥಿಕೆಯನ್ನು ಸಹ ಕೇರಳ ಸರ್ಕಾರ ಕೋರಿದೆ. ಕರ್ನಾಟಕದ ನಂದಿನಿ ಮಲಪ್ಪುರಂ ಮತ್ತು ಕೊಚ್ಚಿ ಸೇರಿದಂತೆ ಕೇರಳದಲ್ಲಿ ಹಲವಾರು ಮಳಿಗೆಗಳನ್ನು ತೆರೆದಿದ್ದು, ಹೆಚ್ಚಿನ ಮಾರುಕಟ್ಟೆ ವಿಸ್ತರಿಸುವ ಬಗ್ಗೆ ಯೋಚಿಸುತ್ತಿದೆ. ಕೇರಳದಲ್ಲಿ ಮಿಲ್ಮಾ ಸ್ವಲ್ಪ ಅಗ್ಗವಾಗಿದ್ದು, ಇದಕ್ಕಿಂತ ನಂದಿನಿ ಪ್ರತಿ ಲೀಟರ್‌ಗೆ ಒಂದೆರಡು ರೂಪಾಯಿ ಹೆಚ್ಚು ಇರುತ್ತದೆ.

ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ ಮಾತನಾಡಿ, ಕೇರಳದಲ್ಲಿ ನಂದಿನಿ ವಿಸ್ತರಣೆ ಯೋಜನೆ ಸಹಕಾರಿ ತತ್ವಗಳಿಗೆ ವಿರುದ್ಧವಾಗಿದೆ. ಎನ್‌ಡಿಟಿವಿಯೊಂದಿಗೆ ಮಾತನಾಡಿದ ಮಣಿ, ನಾನು ಡಿಸೆಂಬರ್‌ನಲ್ಲಿ ಕರ್ನಾಟಕ ಹಾಲು ಒಕ್ಕೂಟಕ್ಕೆ ಪತ್ರ ಬರೆದಿದ್ದೆ. ಕೇರಳದಲ್ಲಿ ಹಾಲಿನ ಕೊರತೆ ಎದುರಾದಾಗಲೆಲ್ಲಾ ನಾವು ನಂದಿನಿ ಹಾಲನ್ನು ಖರೀದಿಸಿದ್ದೇವೆ. ಇದು ಸರಿಯಲ್ಲ ಎಂದು ನಾನು ಕರ್ನಾಟಕಕ್ಕೆ ಪತ್ರ ಬರೆದಿದ್ದೇನೆ. ನಾವು ನಿಮ್ಮ ದೊಡ್ಡ ಗ್ರಾಹಕರಲ್ಲಿ ಒಬ್ಬರು, ನೀವು ನಮ್ಮನ್ನು ಅಸಮಾಧಾನಗೊಳಿಸಬಾರದು. ದುರದೃಷ್ಟವಶಾತ್, ಅವರ ಕಡೆಯಿಂದ ಯಾವುದೇ ಉತ್ತರ ಅಥವಾ ಕ್ರಮ ಬಂದಿಲ್ಲ ಎಂದು ಹೇಳಿದ್ದಾರೆ.

ಕೇರಳ ಹಾಲು ಒಕ್ಕೂಟವು ಫ್ರಾಂಚೈಸಿಗಾಗಿ ಅರ್ಜಿಗಳನ್ನು ಆಹ್ವಾನಿಸುವ ಪತ್ರಿಕಾ ಹೇಳಿಕೆಗಳನ್ನು ಪ್ರಕಟಿಸಿದಾಗ ನಂದಿನಿ, ಹಾಲು ಮಾರಾಟ ಮಾಡಲು ಹೆಚ್ಚಿನ ಮಳಿಗೆಗಳನ್ನು ತೆರೆಯುವ ಬಗ್ಗೆ ತಿಳಿಸಿತು ಎಂದು ಮಾಣಿ ಹೇಳಿದ್ದಾರೆ. ಕರ್ನಾಟಕ ಚುನಾವಣೆಯ ಪೂರ್ವದಲ್ಲಿ ಅಮುಲ್ ಮತ್ತು ನಂದಿನಿ ಗಲಾಟೆಯ ತಿಂಗಳ ನಂತರ ಇದೀಗ ಕೇರಳದಲ್ಲಿ ಮಿಲ್ಮಾ ಮತ್ತು ನಂದಿನಿ ನಡುವೆ ಜಗಳ ನಡೆಯುತ್ತಿದೆ.

ಇದನ್ನೂ ಓದಿ: ನಂದಿನಿ ಬೆಸ್ಟ್ ಎಂದ ರಾಹುಲ್ ಗಾಂಧಿ; ಕೇರಳದಲ್ಲಿ ಇದರ ಮಾರಾಟ ಸುಗಮವಾಗುವಂತೆ ಮಾಡಿ ಎಂದ ತೇಜಸ್ವಿ ಸೂರ್ಯ

ದೇಶದ ಹಾಲು ಉತ್ಪಾದಕರ ಕಲ್ಯಾಣಕ್ಕಾಗಿ ಗುಜರಾತ್ ಮತ್ತು ಕರ್ನಾಟಕ ಒಟ್ಟಾಗಿ ಕೆಲಸ ಮಾಡಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆಗ ಕರ್ನಾಟಕದಲ್ಲಿ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಗುಜರಾತ್ ಮೂಲದ ಅಮುಲ್ ಅನ್ನು ಕರ್ನಾಟಕಕ್ಕೆ ತರುವ ಮೂಲಕ ನಂದಿನಿ ಬ್ರಾಂಡ್ ಅನ್ನು ಮುಗಿಸಲು ಪಿತೂರಿ ನಡೆಸಿದೆ ಎಂದು ಆರೋಪಿಸಿತ್ತು .ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿ ಅಧಿಕಾರಕ್ಕೇರಿತ್ತು,

ಅಮುಲ್ ಪ್ರವೇಶಕ್ಕೆ ಕರ್ನಾಟಕ ಒಕ್ಕೂಟವು ಆಕ್ಷೇಪ ವ್ಯಕ್ತಪಡಿಸುತ್ತಿರುವಾಗ, ಅವರು ಇತರ ರಾಜ್ಯಗಳಲ್ಲಿ ಅದೇ ಕೆಲಸವನ್ನು ಮಾಡಬಾರದು ಎಂದು ಮಾಣಿ ಹೇಳಿದ್ದಾರೆ. ಈ ವಿಷಯವನ್ನು ಚರ್ಚಿಸಲಾಗುವುದು ಎಂದು ರಾಷ್ಟ್ರೀಯ ಡೈರಿ ಮಂಡಳಿಯ ಅಧ್ಯಕ್ಷರು ಭರವಸೆ ನೀಡಿದ್ದಾರೆ.

ಮಿಲ್ಮಾ ಮಾರಾಟ ನಿರಂತರವಾಗಿ ಹೆಚ್ಚುತ್ತಿದೆ. ಅದೇ ವೇಳೆ ನಂದಿನಿ ಮಳಿಗೆಗಳನ್ನು ತೆರೆಯುವುದರಿಂದ ನಮ್ಮ ವ್ಯವಹಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಆದರೆ ಇದು ಮಾರಾಟದ ಪ್ರಶ್ನೆಯಲ್ಲ,ಇದು ಸರಿಯಾದ ರೀತಿಯಲ್ಲ ಅಷ್ಟೇ. ನಾವೆಲ್ಲರೂ ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅದು ಕರ್ನಾಟಕ ಒಕ್ಕೂಟ ಅಥವಾ ಅಮುಲ್ ಅಥವಾ ಮಿಲ್ಮಾವೇ ಆಗಿರಲಿ, ನಾವೆಲ್ಲರೂ ಸಹಕಾರಿ ಕಾನೂನುಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸ್ವಾಭಾವಿಕವಾಗಿ, ಕನಿಷ್ಠ ದ್ರವ ಹಾಲು ಮಾರಾಟ ಮಾಡುವ ವಿಷಯದಲ್ಲಿ ನಾವು ಆಯಾ ರಾಜ್ಯದ ಪ್ರದೇಶದಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಕೇರಳ ಫೆಡರೇಶನ್ ಮುಖ್ಯಸ್ಥರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ