- Kannada News Photo gallery Cyclone Biparjoy landfall process has commenced over the coastal districts of Saurashtra and Kutch
Cyclone Biparjoy: ಗುಜರಾತ್ ಕರಾವಳಿಗೆ ಅಪ್ಪಳಿಸಿದ ಬಿಪೋರ್‌ಜಾಯ್ ಚಂಡಮಾರುತ; ಜೋರು ಗಾಳಿ ಮಳೆ, ಅಬ್ಬರಿಸಿದ ಕಡಲು
ಸೌರಾಷ್ಟ್ರ ಮತ್ತು ಕಚ್‌ನ ಕರಾವಳಿ ಜಿಲ್ಲೆಗಳಲ್ಲಿ ಬಿಪೋರ್‌ಜಾಯ್ ಅಪ್ಪಳಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಚಂಡಮಾರುತದ ಪ್ರಭಾವದಿಂದ ಗುಜರಾತಿನಲ್ಲಿ ಭಾರೀ ಗಾಳಿಯೊಂದಿಗೆ ಬಿರುಸಿನ ಮಳೆಯಾಗಿದ್ದು, ಹಲವೆಡೆ ಮರಗಳುರುಳಿವೆ.
Updated on: Jun 15, 2023 | 7:57 PM

ಚಂಡಮಾರುತ ಬಿಪೋರ್‌ಜಾಯ್ ಅಪ್ಪಳಿಸುವ ಪ್ರಕ್ರಿಯೆ ಆರಂಭವಾಗಿದ್ದು ಇದು ಗುರುವಾರ ಮಧ್ಯರಾತ್ರಿಯವರೆಗೆ ಮುಂದುವರಿಯುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ

ಬಿಪೋರ್‌ಜಾಯ್ ಪರಿಣಾಮ ಮೋರ್ಬಿಯಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಮುಂದುವರೆದಿದೆ.

ಸೌರಾಷ್ಟ್ರ ಮತ್ತು ಕಚ್ ಕರಾವಳಿಗೆ ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ. ಬಿಪೋರ್‌ಜಾಯ್ ಅಪ್ಪಳಿಸುವ ವೇಳೆ ಭಾರೀ ಗಾಳಿ ಮಳೆಯುಂಟಾಗಿದೆ.

ಬಿಪೋರ್‌ಜಾಯ್ ಕುರಿತು ಗಾಂಧಿನಗರದಲ್ಲಿರುವ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಪರಿಶೀಲನಾ ಸಭೆ ನಡೆಸಿದರು.

ಬಿಪೋರ್‌ಜಾಯ್ ಹಿನ್ನಲೆಯಲ್ಲಿ ಗುಜರಾತ್ ನವಸಾರಿ ಜಿಲ್ಲೆಯ ಎಲ್ಲಾ ಶಾಲೆಗಳನ್ನು ಜೂನ್ 16 ರಂದು ಮುಚ್ಚಲಾಗುವುದು ಎಂದು, ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.

ಬಿಪೋರ್‌ಜಾಯ್ ಚಂಡಮಾರುತ ಸಮೀಪಿಸುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಬುಧವಾರ ಗುಜರಾತ್‌ನಲ್ಲಿ ತಂಡಗಳನ್ನು ನಿಯೋಜಿಸಿದೆ. ತಂಡಗಳು ಜನರು ಮತ್ತು ಜಾನುವಾರುಗಳನ್ನು ತಗ್ಗು ಪ್ರದೇಶದಿಂದ, ಕರಾವಳಿ ಪ್ರದೇಶಗಳಿಂದ ಸುರಕ್ಷಿತವಾಗಿ ಸ್ಥಳಾಂತರಿಸಿವೆ.

ಹೆಚ್ಚಿನ ವೇಗದ ಗಾಳಿ, ಉಬ್ಬರವಿಳಿತ ಮತ್ತು ಭಾರೀ ಮಳೆಯಿಂದಾಗಿ ತಾತ್ಕಾಲಿಕ ವಸತಿಗಳಿಗೆ ವ್ಯಾಪಕ ಹಾನಿ, ಮರಗಳು ಮತ್ತು ಕೊಂಬೆಗಳು ಬೀಳುವ ಬಗ್ಗೆ ಎಚ್ಚರಿಕೆಗಳನ್ನು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಹೊರಡಿಸಿದೆ.

ಐಎಂಡಿ ಬುಧವಾರ ಸೌರಾಷ್ಟ್ರ ಮತ್ತು ಕಚ್ ಕರಾವಳಿಗೆ ರೆಡ್ ಅಲರ್ಟ್ ನೀಡಿದ್ದು, ಗುರುವಾರ ಸಂಜೆಯ ವೇಳೆಗೆ ವಿಎಸ್‌ಸಿಎಸ್ (ಅತ್ಯಂತ ತೀವ್ರ ಚಂಡಮಾರುತ) ಬಿಪೋರ್‌ಜಾಯ್ ಸೌರಾಷ್ಟ್ರ ಮತ್ತು ಕಚ್, ಪಾಕಿಸ್ತಾನದ ಕರಾವಳಿಯನ್ನು ದಾಟಲಿದೆ ಎಂದು ಹೇಳಿತ್ತು
























