ಸ್ವಾತಿ ಮಲಿವಾಲ್ ಪ್ರಕರಣ, ವಿಭವ್ ಕುಮಾರ್ ಬಂಧನ, ಬಿಜೆಪಿ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ ಕೇಜ್ರಿವಾಲ್

ಆಮ್​ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್​ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಗಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ಕೇಜ್ರಿವಾಲ್ ಬಿಜೆಪಿಯ ಪ್ರಧಾನ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಸ್ವಾತಿ ಮಲಿವಾಲ್ ಪ್ರಕರಣ, ವಿಭವ್ ಕುಮಾರ್ ಬಂಧನ, ಬಿಜೆಪಿ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

Updated on: May 19, 2024 | 9:22 AM

ಆಮ್​ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್(Swathi Maliwal) ​ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಗಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ಕೇಜ್ರಿವಾಲ್ ಬಿಜೆಪಿಯ ಪ್ರಧಾನ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಆಮ್ ಆದ್ಮಿ ಪಕ್ಷದ (ಎಎಪಿ) ಎಲ್ಲಾ ನಾಯಕರು, ಸಂಸದರು ಮತ್ತು ಶಾಸಕರು ಸಹ ಅವರೊಂದಿಗೆ ಇರುತ್ತಾರೆ.

ಮೇ 18 ರ ಶನಿವಾರದಂದು 2 ನಿಮಿಷ 33 ಸೆಕೆಂಡುಗಳ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ಕೇಜ್ರಿವಾಲ್ ಇದನ್ನು ಘೋಷಿಸಿದ್ದರು. ಬಿಜೆಪಿ ನಮ್ಮನ್ನು ತುಳಿಯಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಶನಿವಾರ ಹೇಳಿದ್ದರು.

ನನ್ನನ್ನು ಜೈಲಿಗೆ ಹಾಕಿದರು, ಮನೀಶ್ ಸಿಸೋಡಿಯಾ ಅವರನ್ನು ಜೈಲಿಗೆ ಹಾಕಿದರು, ಸತ್ಯೇಂದ್ರ ಜೈನ್ ಅವರನ್ನು ಜೈಲಿಗೆ ಹಾಕಿದರು, ಸಂಜಯ್ ಸಿಂಗ್ ಅವರನ್ನು ಜೈಲಿಗೆ ಹಾಕಿದರು, ಇಂದು ನನ್ನ ಪಿಎ (ಬಿಭವ್ ಕುಮಾರ್) ಅವರನ್ನು ಜೈಲಿಗೆ ಹಾಕಿದರು. ಈಗ ರಾಘವ್ ಚಡ್ಡಾ ಅವರನ್ನೂ ಜೈಲಿಗೆ ಹಾಕುತ್ತೇವೆ ಎನ್ನುತ್ತಿದ್ದಾರೆ. ರಾಘವ್ ಚಡ್ಡಾ ಅವರು ಲಂಡನ್‌ನಿಂದ ಹಿಂತಿರುಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸೌರಭ್ ಭಾರದ್ವಾಜ್ ಕೂಡ ಜೈಲು ಪಾಲಾಗಲಿದ್ದಾರೆ ಎಂದು ಹೇಳುತ್ತಿದ್ದಾರೆ. ಅತಿಶಿಯನ್ನೂ ಜೈಲಿಗೆ ಹಾಕಲಾಗುವುದು ಎಂದು ಹೇಳುತ್ತಿದ್ದಾರೆ.

ಇವರು ನಮ್ಮನ್ನೆಲ್ಲ ಯಾಕೆ ಜೈಲಿಗೆ ಹಾಕುತ್ತಾರೆ ಎಂದು ಯೋಚಿಸುತ್ತಿದ್ದೆ. ನಮ್ಮ ತಪ್ಪೇನು? ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮ ವ್ಯವಸ್ಥೆ ಮಾಡಿರುವುದು ನಮ್ಮ ತಪ್ಪು. ಸರ್ಕಾರಿ ಶಾಲೆಗಳನ್ನು ಅತ್ಯುತ್ತಮವಾಗಿ ಮಾಡಲಾಗಿದೆ.
ಅದಕ್ಕಾಗಿಯೇ ಈ ಜನರು ದೆಹಲಿಯ ಸರ್ಕಾರಿ ಶಾಲೆಗಳನ್ನು ನಿಲ್ಲಿಸಲು ಬಯಸುತ್ತಾರೆ.

ಮತ್ತಷ್ಟು ಓದಿ: ಸ್ವಾತಿ ಮಲಿವಾಲ್ ಪ್ರಕರಣ: ಕೇಜ್ರಿವಾಲ್​ ಮನೆಯ ಸಿಸಿಟಿವಿ ಫೂಟೇಜ್​ ಖಾಲಿ ಖಾಲಿ, ಐಫೋನ್​ ಪಾಸ್​ವರ್ಡ್​ ಕೊಡುತ್ತಿಲ್ಲ ವಿಭವ್

ಈ ಹಿಂದೆ ದೆಹಲಿಯಲ್ಲಿ ತಲಾ 10 ಗಂಟೆಗಳ ಕಾಲ ವಿದ್ಯುತ್ ಕಡಿತವಾಗುತ್ತಿತ್ತು, ನಾವು ದಿನದ 24 ಗಂಟೆಗಳ ಕಾಲ ವಿದ್ಯುತ್ ನೀಡಿದ್ದೇವೆ. ಅವರು ವಿದ್ಯುತ್ ಅನ್ನು ನಿಲ್ಲಿಸಲು ಬಯಸುತ್ತಾರೆ. ನಮ್ಮ ತಪ್ಪು ಎಂದರೆ ದೆಹಲಿಯ ಜನರಿಗೆ ನಾವು ವಿದ್ಯುತ್ ಉಚಿತ ಮಾಡಿದ್ದೇವೆ.

ಮೇ 13 ರಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಹಲ್ಲೆ ಮತ್ತು ಅನುಚಿತ ವರ್ತನೆಯ ಪ್ರಕರಣದಲ್ಲಿ ಆಪ್ ಸಂಸದೆ ಸ್ವಾತಿ ಮಲಿವಾಲ್ ಶುಕ್ರವಾರ ತೀಸ್ ಹಜಾರಿ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಾದ ಹೇಳಿಕೆ ಮತ್ತು ಗುರುವಾರ ದಾಖಲಿಸಿದ ಎಫ್‌ಐಆರ್ ಪ್ರಕಾರ, ಸಿಎಂ ಪಿಎ ಬಿಭವ್ ಕುಮಾರ್ ಅವರಿಗೆ 7-8 ಬಾರಿ ಕಪಾಳಮೋಕ್ಷ ಮಾಡಿ, ಹೊಟ್ಟೆ ಮತ್ತು ಖಾಸಗಿ ಭಾಗಗಳಿಗೆ ಒದ್ದಿದ್ದಾರೆ ಎಂದು ದೂರು ನೀಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ