ಜೈಲಿಗೆ ಮರಳಬೇಕಾಗಿಲ್ಲ ಎಂಬ ಕೇಜ್ರಿವಾಲ್ ಹೇಳಿಕೆ; ನಾವು ಯಾರಿಗೂ ವಿನಾಯಿತಿ ನೀಡಿಲ್ಲ ಎಂದ ಸುಪ್ರೀಂ
ನಾವು ಕೇಜ್ರಿವಾಲ್ ಹೇಳಿಕೆ ಬಗ್ಗೆ ಮಾತನಾಡುವುದಿಲ್ಲ. ಅವರು ಯಾವಾಗ ಶರಣಾಗಬೇಕು ಎಂಬ ಬಗ್ಗೆ ನಮ್ಮ ಆದೇಶ ಸ್ಪಷ್ಟವಾಗಿದೆ. ನಾವು ಸರ್ವೋಚ್ಚ ನ್ಯಾಯಾಲಯ, ಕಾನೂನಿನ ನಿಯಮವು ಇದರಿಂದ ನಿಯಂತ್ರಿಸಲ್ಪಡುತ್ತದೆ. ನಾವು ಯಾರಿಗೂ ವಿನಾಯಿತಿ ನೀಡಿಲ್ಲ” ಎಂದು ಇಡಿ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಮೂರ್ತಿ ಖನ್ನಾ ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಮೇ 16: ಲೋಕಸಭೆ ಚುನಾವಣೆಯಲ್ಲಿ ಜನರು ಎಎಪಿ (AAP) ಮತ್ತು ವಿರೋಧ ಪಕ್ಷಗಳ ಇಂಡಿಯಾ (INDIA) ಬಣಕ್ಕೆ ಮತ ಹಾಕಿದರೆ ತಾನು ಜೈಲಿಗೆ ಮತ್ತೆ ಹೋಗಬೇಕಾಗಿಲ್ಲ ಎಂದು ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದ್ದು, ಈ ಹೇಳಿಕೆ ವಿರುದ್ಧ ಜಾರಿ ನಿರ್ದೇಶನಾಲಯದ (ಇಡಿ) ವಾದವನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ತನ್ನ ಬಂಧನದ ವಿರುದ್ಧ ದೆಹಲಿ ಸಿಎಂ ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ಪುನರಾರಂಭಿಸಿದ್ದು, ತೀರ್ಪಿನ ಟೀಕೆಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಹೇಳಿದೆ.
ನಾವು ಕೇಜ್ರಿವಾಲ್ ಹೇಳಿಕೆ ಬಗ್ಗೆ ಮಾತನಾಡುವುದಿಲ್ಲ. ಅವರು ಯಾವಾಗ ಶರಣಾಗಬೇಕು ಎಂಬ ಬಗ್ಗೆ ನಮ್ಮ ಆದೇಶ ಸ್ಪಷ್ಟವಾಗಿದೆ. ನಾವು ಸರ್ವೋಚ್ಚ ನ್ಯಾಯಾಲಯ, ಕಾನೂನಿನ ನಿಯಮವು ಇದರಿಂದ ನಿಯಂತ್ರಿಸಲ್ಪಡುತ್ತದೆ. ನಾವು ಯಾರಿಗೂ ವಿನಾಯಿತಿ ನೀಡಿಲ್ಲ” ಎಂದು ಇಡಿ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಮೂರ್ತಿ ಖನ್ನಾ ಪ್ರತಿಕ್ರಿಯಿಸಿದರು.
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರ ಹೇಳಿಕೆಗಳು “ಸುಪ್ರೀಂ ಕೋರ್ಟ್ ವಿರುದ್ಧವಾದುದು ಎಂದು ಎಸ್ ಜಿ ಮೆಹ್ತಾ ವಾದಿಸಿದ್ದು, ನಾವು ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ಪೀಠವು ಪುನರುಚ್ಚರಿಸಿತು.
ಮಾರ್ಚ್‌ನಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್‌ಗೆ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗೆ ನಿಗದಿಪಡಿಸಿದ ದಿನಗಳ ನಂತರ, ಮೇ 10 ರಂದು ಸುಪ್ರೀಂ ಪೀಠದಿಂದ ಮಧ್ಯಂತರ ಜಾಮೀನು ನೀಡಿ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಿತು. ಅಂದಹಾಗೆ ಜಾಮೀನು ಷರತ್ತುಬದ್ಧವಾಗಿದೆ. ಎಎಪಿ ಮುಖ್ಯಸ್ಥರು ತಮ್ಮ ಮುಖ್ಯಮಂತ್ರಿ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಮತ್ತು ಪ್ರಕರಣದ ಕುರಿತು ಪ್ರತಿಕ್ರಿಯಿಸುವುದನ್ನು ಇದು ನಿಷೇಧಿಸುತ್ತದೆ.
ಇದನ್ನೂ ಓದಿ: ಸಿಎಎ ಬಗ್ಗೆ ಕಾಂಗ್ರೆಸ್, ಎಸ್ಪಿ ಸುಳ್ಳು ಸುದ್ದಿ ಹರಡುತ್ತಿದೆ; ಅಜಂಗಢದಲ್ಲಿ ಪ್ರಧಾನಿ ಮೋದಿ ಆರೋಪ
ಏಳನೇ ಮತ್ತು ಅಂತಿಮ ಹಂತದ ಮತದಾನದ ನಂತರ ಜೂನ್ 2 ರಂದು ಶರಣಾಗುವಂತೆ ಕೇಜ್ರಿವಾಲ್ ಅವರನ್ನು ಕೇಳಲಾಗಿದೆ. ದೆಹಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳಿಗೆ ಮೇ 25 ರಂದು ಆರನೇ ಹಂತದಲ್ಲಿ ಮತದಾನ ನಡೆಯಲಿದೆ.ಎಎಪಿ ಕಾಂಗ್ರೆಸ್ ಪಕ್ಷದೊಂದಿಗೆ 4-3 ಸೀಟು ಹಂಚಿಕೆ ಒಪ್ಪಂದದಲ್ಲಿ ಸೀಟುಗಳನ್ನು ಸ್ಪರ್ಧಿಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ