ಶಾಲೆಯ ಹೊರಗೆ ಸಿಕ್ಕಿದ್ದು ಸ್ಫೋಟಕವೆಂದು ಅರಿಯದೆ ಎಸೆದ ಬಾಲಕ, ಸ್ಫೋಟಗೊಂಡು ಇಬ್ಬರಿಗೆ ಗಾಯ
ಶಾಲಾ ಆವರಣದಲ್ಲಿ ಸಿಕ್ಕ ವಸ್ತುವನ್ನು ಸ್ಫೋಟಕವೆಂದು ಅರಿಯದೆ ಎಸೆದ ಪರಿಣಾಮ ಸ್ಫೋಟಗೊಂಡು, ಬಾಲಕ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂತರಾದಲ್ಲಿ ನಡೆದಿದೆ. ಶಾಲಾ ಆವರಣದ ಹೊರಗೆ ಬುಧವಾರ ಸ್ಫೋಟಕಗಳು ಪತ್ತೆಯಾಗಿದ್ದು, ನಂತರ ಅವು ಅಪಾಯಕಾರಿ ಸ್ವರೂಪದ್ದಾಗಿದ್ದವು ಎಂದು ಪೊಲೀಸರು ಸಲ್ಲಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್)ಯಲ್ಲಿ ತಿಳಿಸಲಾಗಿದೆ.

ತಿರುವನಂತಪುರಂ, ಆಗಸ್ಟ್ 21: ಶಾಲಾ ಆವರಣದಲ್ಲಿ ಸಿಕ್ಕ ವಸ್ತುವನ್ನು ಸ್ಫೋಟಕ(Explosive)ವೆಂದು ಅರಿಯದೆ ಎಸೆದ ಪರಿಣಾಮ ಸ್ಫೋಟಗೊಂಡು, ಬಾಲಕ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂತರಾದಲ್ಲಿ ನಡೆದಿದೆ. ಶಾಲಾ ಆವರಣದ ಹೊರಗೆ ಬುಧವಾರ ಸ್ಫೋಟಕಗಳು ಪತ್ತೆಯಾಗಿದ್ದು, ನಂತರ ಅವು ಅಪಾಯಕಾರಿ ಸ್ವರೂಪದ್ದಾಗಿದ್ದವು ಎಂದು ಪೊಲೀಸರು ಸಲ್ಲಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್)ಯಲ್ಲಿ ತಿಳಿಸಲಾಗಿದೆ.
ಆದರೆ ಬಾಲಕ ಇದರ ಬಗ್ಗೆ ಅರಿಯದೆ ಎಸೆದಿದ್ದ, ಕಾಡು ಹಂದಿಯನ್ನು ಹೊಡೆಯಲು ಆ ಸ್ಫೋಟಕವನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ. ಸ್ಫೋಟಕಗಳಲ್ಲಿ ಒಂದನ್ನು 10 ವರ್ಷದ ಬಾಲಕ ನಾರಾಯಣನ್ ಎಂಬಾತ ಎಸೆದಿದ್ದಾನೆ. ಸಾಧನವು ಸ್ಫೋಟಗೊಂಡ ಪರಿಣಾಮವಾಗಿ, ಹುಡುಗ ಮತ್ತು ಹತ್ತಿರದಲ್ಲಿದ್ದ 84 ವರ್ಷದ ಮಹಿಳೆ ಲೀಲಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಧ್ಯಾಹ್ನ 3.45 ರ ಸುಮಾರಿಗೆ ವ್ಯಾಸ ವಿದ್ಯಾ ಪೀಡಂ ಪೂರ್ವ ಪ್ರಾಥಮಿಕ ಶಾಲೆಯ ಗೇಟ್ ಬಳಿ ನಾರಾಯಣನ್ಗೆ ಸ್ಫೋಟಕಗಳು ಸಿಕ್ಕಿದ್ದವು. ಏನಾಗುತ್ತೆ ನೋಡೋಣವೆಂದು ಕೆಳಕ್ಕೆ ಎಸೆದಿದ್ದಾನೆ. ಬಳಿಕ ದೊಡ್ಡ ಶಬ್ದ ಕೇಳಿಸಿತ್ತು. ಶಾಲಾ ಅಧಿಕಾರಿಗಳು ಮತ್ತು ನಿವಾಸಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಮತ್ತಷ್ಟು ಓದಿ:
ಕಲಾಸಿಪಾಳ್ಯದ ಬಸ್ನಿಲ್ದಾಣದ ಶೌಚಾಲಯದಲ್ಲಿ ಸ್ಫೋಟಕ ಸಾಮಗ್ರಿ ತಂದಿಟ್ಟಿದ್ದು ಹೆಣ್ಣೋ ಗಂಡೋ ಅಂತ ಗೊತ್ತಾಗಿಲ್ಲ!
ಪರಿಶೀಲನೆಯ ನಂತರ, ಬಕೆಟ್‌ನಲ್ಲಿ ಸಂಗ್ರಹಿಸಲಾದ ನಾಲ್ಕು ಹೆಚ್ಚುವರಿ ಸ್ಫೋಟಕಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಉದ್ದೇಶದಿಂದ ಸ್ಫೋಟಕಗಳನ್ನು ಇಡಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.ಪ್ರದೇಶದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶಾಲಾ ಕಾಂಪೌಂಡ್ ಬಳಿ ಸ್ಫೋಟಕಗಳನ್ನು ಇಟ್ಟಿದ್ದಕ್ಕೆ ಕಾರಣರಾದವರನ್ನು ಗುರುತಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಈ ಘಟನೆಯ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಜೊತೆ ಸಂಬಂಧ ಹೊಂದಿದೆ ಎಂದು ಸಿಪಿಐ(ಎಂ) ನಾಯಕರು ಸೂಚಿಸಿದ್ದಾರೆ ಮತ್ತು ಈ ಪ್ರದೇಶದಲ್ಲಿ ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಪಕ್ಷವೂ ಒತ್ತಾಯಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




