AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷ ಕುಡಿದು ಸಿಎಂ ಯೋಗಿಯ ಜನತಾ ದರ್ಬಾರ್​ಗೆ ಬಂದ ವ್ಯಕ್ತಿ

ಒಂದೆಡೆ ದೆಹಲಿ ಸಿಎಂ ರೇಖಾ ಗುಪ್ತಾಗೆ ಕಪಾಳಮೋಕ್ಷ ಮಾಡಿರುವ ಘಟನೆ ಆಘಾತ ಸೃಷ್ಟಿಸಿದ್ದರೆ, ಮತ್ತೊಂದೆಡೆ ಲಕ್ನೋದಲ್ಲಿ ವ್ಯಕ್ತಿಯೊಬ್ಬ ವಿಷ ಕುಡಿದು ಸಿಎಂ ಯೋಗಿ ಅವರ ಜನತಾ ದರ್ಬಾರ್​​ನಲ್ಲಿ ಭಾಗವಹಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಗಾಜಿಯಾಬಾದ್‌ನ ವ್ಯಕ್ತಿಯೊಬ್ಬರು ವಿಷ ಸೇವಿಸಿ ಜನತಾ ದರ್ಬಾರ್‌ಗೆ ತಲುಪಿದ್ದಾರೆ. ಈ ವ್ಯಕ್ತಿಯ ಹೆಸರು ಸತ್ಬೀರ್ ಗುರ್ಜರ್ ಎಂದು ಹೇಳಲಾಗುತ್ತಿದೆ.

ವಿಷ ಕುಡಿದು ಸಿಎಂ ಯೋಗಿಯ ಜನತಾ ದರ್ಬಾರ್​ಗೆ ಬಂದ ವ್ಯಕ್ತಿ
ಯೋಗಿ ಆದಿತ್ಯನಾಥ್ Image Credit source: India TV
ನಯನಾ ರಾಜೀವ್
|

Updated on: Aug 21, 2025 | 12:30 PM

Share

ಲಕ್ನೋ, ಆಗಸ್ಟ್ 21: ಒಂದೆಡೆ ದೆಹಲಿ ಸಿಎಂ ರೇಖಾ ಗುಪ್ತಾ(Rekha Gupta) ಗೆ ಕಪಾಳಮೋಕ್ಷ ಮಾಡಿರುವ ಘಟನೆ ಆಘಾತ ಸೃಷ್ಟಿಸಿದ್ದರೆ, ಮತ್ತೊಂದೆಡೆ ಲಕ್ನೋದಲ್ಲಿ ವ್ಯಕ್ತಿಯೊಬ್ಬ ವಿಷ ಕುಡಿದು ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಅವರ ಜನತಾ ದರ್ಬಾರ್​​(Janata Darbar)ನಲ್ಲಿ ಭಾಗವಹಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಗಾಜಿಯಾಬಾದ್‌ನ ವ್ಯಕ್ತಿಯೊಬ್ಬರು ವಿಷ ಸೇವಿಸಿ ಜನತಾ ದರ್ಬಾರ್‌ಗೆ ತಲುಪಿದ್ದಾರೆ. ಈ ವ್ಯಕ್ತಿಯ ಹೆಸರು ಸತ್ಬೀರ್ ಗುರ್ಜರ್ ಎಂದು ಹೇಳಲಾಗುತ್ತಿದೆ.

ಈ ವ್ಯಕ್ತಿಗೆ 65 ವರ್ಷ ವಯಸ್ಸಾಗಿದ್ದು, ಲೋನಿಯ ಸಿರೌಲಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಭದ್ರತಾ ಸಿಬ್ಬಂದಿಯ ಪ್ರಕಾರ, ಆ ವ್ಯಕ್ತಿ ನಿವೃತ್ತ ಸೈನಿಕ, ಜನತಾ ದರ್ಬಾರ್‌ನಲ್ಲಿದ್ದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಸತ್ಬೀರ್ ವಿಷ ಸೇವಿಸಿ ಅಲ್ಲಿಗೆ ತಲುಪಿದ್ದಾರೆಂದು ತಿಳಿದ ತಕ್ಷಣ, ಸತ್ಬೀರ್ ಅವರನ್ನು ನಾಗರಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಸತ್ಬೀರ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ನಿವೃತ್ತ ಸೈನಿಕನನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಅಲ್ಲಿ ಹಾಜರಿದ್ದ ಜನರು ಮತ್ತು ಅಧಿಕಾರಿಗಳಿಗೆ ತಮ್ಮ ಸಮಸ್ಯೆಯಿಂದ ಹತಾಶೆಗೊಂಡು ವಿಷ ಸೇವಿಸಿರುವುದಾಗಿ ಹೇಳಿದ್ದರು.ಅವರ ಮಾತು ಕೇಳಿ ಅಲ್ಲಿದ್ದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡರು ಮತ್ತು ಅವರನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.

ಮತ್ತಷ್ಟು ಓದಿ: Rekha Gupta Attacked: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಜನ್ ಸುನ್​​ವಾಯಿ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ರೇಖಾಗೆ ಕಪಾಳಮೋಕ್ಷ ಮಾಡಿ, ಕೂದಲು ಹಿಡಿದು ಎಳೆದಿರುವ ಘಟನೆ ವರದಿಯಾಗಿದ್ದರು. ಗುಪ್ತಾ ಅವರ ಮೇಲೆ ದಾಳಿ ಮಾಡಿದ ವ್ಯಕ್ತಿಯನ್ನು 41 ವರ್ಷದ ಸಕ್ರಿಯಾ ರಾಜೇಶ್‌ಭಾಯ್ ಖಿಮ್‌ಜಿಭಾಯ್ ಎಂದು ಗುರುತಿಸಲಾಗಿದೆ.

ಗುಪ್ತಾ ಅವರ ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಗುಪ್ತಾ ಅವರನ್ನು ರಕ್ಷಿಸಿದರು, ಆದರೆ ಈ ಘಟನೆ ಅವರನ್ನು ಆಘಾತಕ್ಕೀಡು ಮಾಡಿತು. ಪೊಲೀಸರು ಈಗ ಖಿಮ್ಜಿಭಾಯ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 109(1) (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ